ಪರಿಚಯ
ಕರ್ನಾಟಕ ಸರ್ಕಾರ, ಪ್ರವಾಸೋದ್ಯಮ ಇಲಾಖೆ, 1974 ರಲ್ಲಿ ಸ್ಥಾಪನೆಯಾದ ಇಲಾಖೆಯು, ಕರ್ನಾಟಕ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವ ಮತ್ತು ಉತ್ತೇಜಿಸುವ ಜವಾಬ್ದಾರಿಯನ್ನು ಹೊಂದಿದೆ. ಹೊಸ ಪ್ರವಾಸೋದ್ಯಮ ತಾಣಗಳನ್ನು ಅಭಿವೃದ್ಧಿಪಡಿಸುವ ಮೂಲಕ, ಹೊಸ ಪ್ರವಾಸೋದ್ಯಮ ಯೋಜನೆಗಳನ್ನು ಉತ್ತೇಜಿಸುವ ಮೂಲಕ ಮತ್ತು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರವಾಸೋದ್ಯಮ ವ್ಯಾಪಾರ ಮೇಳಗಳು, ಹೂಡಿಕೆದಾರರ ಸಭೆ, ರಸ್ತೆ ಪ್ರದರ್ಶನಗಳು, ಥೀಮ್ ಅಭಿಯಾನಗಳಲ್ಲಿ ಭಾಗವಹಿಸುವ ಮೂಲಕ ಕರ್ನಾಟಕ ಪ್ರವಾಸೋದ್ಯಮವನ್ನು ಉತ್ತೇಜಿಸಲು ಇಲಾಖೆ ನಿರಂತರವಾಗಿ ಪ್ರಯತ್ನಿಸುತ್ತಿದೆ.
ಪ್ರವಾಸೋದ್ಯಮ ಇಲಾಖೆಯ ಸಂಕ್ಷಿಪ್ತ ಟಿಪ್ಪಣಿ
ಶಿವಮೊಗ್ಗ ಜಿಲ್ಲೆಗೆ ಭೇಟಿ ನೀಡುವ ದೇಶಿಯ ಮತ್ತು ವಿದೇಶಿ ಪ್ರವಾಸಿಗರಿಗೆ ಅನುಕೂಲವಾಗುವಂತೆ ಪ್ರವಾಸೋದ್ಯಮ ಇಲಾಖೆಯಿಂದ ಜಿಲ್ಲೆಯಲ್ಲಿರುವ ಪ್ರವಾಸಿ ತಾಣಗಳಿಗೆ, ಕುಡಿಯುವ ನೀರು ಮತ್ತು ಶೌಚಾಲಯ ನಿರ್ಮಾಣ, ಕೂಡು ರಸ್ತೆ ಅಭಿವೃದ್ದಿ, ಮೂಲಭೂತ ಸೌಲಭ್ಯ ಅಭಿವೃದ್ಧಿ ಇತ್ಯಾದಿ.
ಪ್ರವಾಸೋದ್ಯಮ ಇಲಾಖೆಯ ಗುರಿಗಳು
- ಪುನರಾವರ್ತಿತವಾಗಿ ಭೇಟಿ ನೀಡುವುದಕ್ಕೆ, ಪ್ರವಾಸಿಗರು ಹೆಚ್ಚುದಿನಗಳ ಕಾಲ ಉಳಿಯುವಂತೆ ಪ್ರೋತ್ಸಾಹಿಸುವಂತಹ ಪ್ರವಾಸೋದ್ಯಮ ಉತ್ಪನ್ನಗಳಿಗೆ ಮತ್ತು ಸೇವೆಗಳಿಗೆ ಪ್ರೋತ್ಸಾಹ ನೀಡುವುದು.
- ಪರಿಸರವನ್ನು ಮತ್ತು ಜೀವಿ ಪರಿಸರವನ್ನು ರಕ್ಷಿಸಿ ಜಿಲ್ಲೆಯಲ್ಲಿ ಸುರಕ್ಷಿತ, ಸಮರ್ಥನೀಯ ಮತ್ತು ಜವಾಬ್ದಾರಿಯುತ ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸುವುದು.
ಒದಗಿಸಲಾಗುತ್ತಿರುವ ಸಾರ್ವಜನಿಕ ಸೇವೆಗಳು
ಕಛೇರಿಗೆ ಭೇಟಿ ನೀಡುವ ಸಾರ್ವಜನಿಕರಿಗೆ ಇಲಾಖೆಯ ಯೋಜನೆಗಳ ಮಾಹಿತಿ ನೀಡುವುದು, ಪ್ರವಾಸಿ ಟ್ಯಾಕ್ಷಿ ಯೋಜನೆಗಳ ಬಗ್ಗೆ ಮಾಹಿತಿ ಮತ್ತು ಜಿಲ್ಲೆಯ ಪ್ರವಾಸಿ ತಾಣಗಳ, ಸೌಲಭ್ಯಗಳ ಮಾಹಿತಿ ನೀಡುವುದು.