ಮುಚ್ಚಿ

ವಿವಿಧ ಇಲಾಖೆಗಳ ಪ್ರಮುಖ ಯೋಜನೆಗಳು

ಕೃಷಿ ಇಲಾಖೆಯಲ್ಲಿ ಅನುಷ್ಟಾನಗೊಳಿಸುತ್ತಿರುವ ವಿವಿಧ ಯೋಜನೆಗಳ ಸಂಕ್ಷಿಪ್ತ ವಿವರ

 • ಪ್ರಮಾಣಿತ / ಗುಣಮಟ್ಟದ ಬಿತ್ತನೆ ಬೀಜ ವಿತರಣಾ ಕಾರ್ಯಕ್ರಮ :-

ಜಿಲ್ಲೆಯ ಎಲ್ಲಾ ವರ್ಗದ ರೈತರಿಗೆ ಮುಖ್ಯ ಬೆಳೆಗಳ ಹೈಬ್ರಿಡ್, ಅಧಿಕ ಇಳುವರಿ ತಳಿಗಳು ಮತ್ತು ತಳಿಗಳ ಉತ್ತಮ ಗುಣಮಟ್ಟದ ಪ್ರಮಾಣಿತ  ಹಾಗೂ ನಿಜಚೀಟಿ ಬಿತ್ತನೆ ಬೀಜಗಳನ್ನು ಮುಂಗಾರು ಮತ್ತು ಹಿಂಗಾರು/ಬೇಸಿಗೆ ಹಂಗಾಮುಗಳಲ್ಲಿ ರಿಯಾಯಿತಿ ದರದಲ್ಲಿ  (ಸಾಮಾನ್ಯ-50% ಮತ್ತು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ 75%) ಸಕಾಲದಲ್ಲಿ ರೈತರಿಗೆ ಒದಗಿಸಿ ಅಧಿಕ ಇಳುವರಿ ಪಡೆಯಲು ನೆರವಾಗುತ್ತದೆ.

 • ಸಸ್ಯ ಸಂರಕ್ಷಣಾ ಕಾರ್ಯಕ್ರಮ :-

ಬೆಳೆಗಳಲ್ಲಿ ಬಾಧಿಸುವ ಕೀಟ/ ರೋಗ/ ಕಳೆ ನಿರ್ವಹಣೆಗೆ  ತುರ್ತು ಸಸ್ಯ ಸಂರಕ್ಷಣಾ  ಕಾರ್ಯ ಕೈಗೊಳ್ಳಲು ರೈತರಿಗೆ ಶೇ. 50 ರಿಯಾಯಿತಿ ದರದಲ್ಲಿ  ಈ ಕೆಳಕಂಡ ಪರಿಕರಗಳನ್ನು ಒದಗಿಸಲಾಗುವುದು.

ಅ) ಜೈವಿಕ ಪೀಡೆನಾಶಕ ಮತ್ತು ಜೈವಿಕ ನಿಯಂತ್ರಣಕಾರಕಗಳ ವಿತರಣೆ

ಆ) ಅವಶ್ಯಕತೆಗೆ ಅನುಗುಣವಾಗಿ ಕೀಟ ಹಾಗೂ ರೋಗ ನಿರ್ವಹಣೆಗೆ ಪೀಡೆನಾಶಕಗಳ ವಿತರಣೆ

ಇ) ಬೀಜೋಪಚಾರ ಹಾಗೂ ಸುರಕ್ಷಿತ ಕೀಟನಾಶಕಗಳ ಬಳಕೆ ಕುರಿತು ತರಬೇತಿ/ಆಂದೋಲನ  ಕಾರ್ಯಕ್ರಮ.

 • ಮಣ್ಣಿನ ಸತ್ವ ಹೆಚ್ಚಿಸುವಿಕೆ ಕಾರ್ಯಕ್ರಮ :-

ಮಣ್ಣಿನ ಫಲವತ್ತತೆ ಹೆಚ್ಚಿಸಲು ಹಾಗೂ ರೈತರ ಆರ್ಥಿಕ ಮಟ್ಟ ಸುಧಾರಿಸುವುದು ಈ ಯೋಜನೆಯ ಮೂಲ ಉದ್ದೇಶ ಈ ಯೋಜನೆಯಡಿ ಕೃಷಿ ಪರಿಕರಗಳನ್ನು (ಹಸಿರೆಲೆ ಗೊಬ್ಬರ ಬೀಜ, ಜಿಪ್ಸಂ/ಕೃಷಿ ಸುಣ್ಣ/ಡೋಲೋಮೈಟ್, ಲಘು ಪೋಷಕಾಂಶಗಳ, ಎರೆ ಹುಳುಗೊಬ್ಬರ, ಸಿಟಿ ಕಾಂಪೋಸ್ಟ್(Bulk Supply), ಸಾವಯವ ಗೊಬ್ಬರ(ಆರ್ಗಾನಿಕ್ ಮೆನ್ಯೂರ್), ರಂಜಕಯುಕ್ತ ಸಾವಯವ ಗೊಬ್ಬರ (PROM), ಖಾದ್ಯವಲ್ಲದ ಏಣ್ಣೆ ರಹಿತ ಹಿಂಡಿ ಗೊಬ್ಬರ (ಬೇವು) ಗಳನ್ನು ಸಾಮಾನ್ಯ-50% ಮತ್ತು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ 75% ವಿತರಣೆ ಮಾಡಲಾಗುವುದು.

 • ಕೇಂದ್ರ ಪುರಸ್ಕೃತ ಕೃಷಿ ಯಾಂತ್ರೀಕರಣ ಉಪ ಅಭಿಯಾನ :-

ಕೃಷಿ ಕಾರ್ಮಿಕರ ಕೊರತೆ ಸಮಸ್ಯೆಯನ್ನು ನೀಗಿಸಿ, ಕೃಷಿ ಚಟುವಟಿಕೆಗಳ ಶ್ರಮದಾಯಕ ದುಡಿಮೆಯನ್ನು ತಗ್ಗಿಸಿ ಸಕಾಲದಲ್ಲಿ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳುವ ಉದ್ದೇಶದಿಂದ (ಸಣ್ಣ ಟ್ರ್ಯಾಕ್ಟರ್ ಪವರ್ ಟಿಲ್ಲರ್, ಭೂಮಿ ಸಿದ್ಧತೆ ಉಪಕರಣಗಳು, ಬಿತ್ತನೆ/ನಾಟಿ ಉಪಕರಣಗಳು, ಅಂತರ ಬೇಸಾಯ ಉಪಕರಣಗಳು, ಡೀಸಲ್ ಪಂಪ್ ಸೆಟ್, ಟ್ರ್ಯಾಕ್ಟರ್/ಟಿಲ್ಲರ್/ಇಂಜಿನ್ ಚಾಲಿತ ಸಸ್ಯ ಸಂರಕ್ಷಣಾ ಉಪಕರಣಗಳು ಹಾಗೂ ಕೃಷಿ ಸಂಸ್ಕರಣೆಗೆ ಉಪಯುಕ್ತವಾಗುವ ವಿವಿಧ ಮಾದರಿಯ ಕೃಷಿ ಯಂತ್ರೋಪಕರಣಗಳನ್ನು) ಸಾಮಾನ್ಯ ರೈತರಿಗೆ ಶೇ.50 ಸಹಾಯಧನ ಹಾಗೂ ಪ.ಜಾತಿ/ ಪ.ಪಂಗಡ ರೈತರಿಗೆ ಶೇ.90 ಸಹಾಯಧನದಡಿ ಘಟಕಗಳನ್ನು ಒದಗಿಸಲಾಗುತ್ತಿದೆ.

 • ಕೃಷಿ ಉತ್ಪನ್ನಗಳ ಸಂಸ್ಕರಣೆ :-

ಕೃಷಿ ಉತ್ಪನ್ನಗಳನ್ನು ಸಂಸ್ಕರಣೆಗೆ ಒಳಪಡಿಸಿ ಗುಣಮಟ್ಟದ ಉತ್ಪನ್ನಗಳನ್ನು ರೈತರಿಗೆ ಹಾಗೂ ಬಳಕೆದಾರರಿಗೆ ಒದಗಿಸುವ ಉದ್ದೇಶದಿಂದ ಕೃಷಿ ಸಂಸ್ಕರಣೆ ಘಟಕಗಳಾದ – ಹಿಟ್ಟಿನ ಗಿರಣಿ, ಸಣ್ಣ ರೈಸ್ ಮಿಲ್, ಎಣ್ಣೆ ತೆಗೆಯುವ ಯಂತ್ರ, ರಾಗಿ ಕ್ಲೀನಿಂಗ್ ಮಿಷಿನ್, ಶುಗರ್ ಕೇನ್ ಕ್ರಶಿಂಗ್ ಯೂನಿಟ್ (ಬೆಲ್ಲದ ಗಾಣ), ಪಲ್ವರೈಸರಗಳು, ಹಾಗೂ ರೈತರು ಸಕಾಲದಲ್ಲಿ ಕೃಷಿ ಉತ್ಪನ್ನಗಳನ್ನು ಒಣಗಿಸಲು ಐದು ಪದರಗಳುಳ್ಳ 250 GSM-HDPE ಕಪ್ಪು ಬಣ್ಣದ (8ಮೀ*6ಮೀ ಅಳತೆ) ಟಾರ್ಪಲಿನ್ ಗಳನ್ನು ವಿತರಿಸಲು ಕೃಷಿ ಉತ್ಪನ್ನಗಳ ಸಂಸ್ಕರಣೆ ಕಾರ್ಯಕ್ರಮವನ್ನು  ಸಾಮಾನ್ಯ ರೈತರಿಗೆ ಶೇ.50 ರಿಯಾಯಿತಿ ಹಾಗೂ ಪ.ಜಾತಿ/ ಪ.ಪಂಗಡ ರೈತರಿಗೆ ಶೇ.90 ಸಹಾಯಧನದಡಿ ಘಟಕಗಳನ್ನು ಒದಗಿಸಲಾಗುತ್ತಿದೆ.

 • ಕೃಷಿ ಯಂತ್ರಧಾರೆ :- (ಕೃಷಿ ಯಂತ್ರೋಪಕರಣಗಳ ಬಾಡಿಗೆ ಆಧಾರಿತ ಸೇವಾ ಕೇಂದ್ರ)

ರೈತರು ತಮಗೆ ಬೇಕಾದ ಸಮಯದಲ್ಲಿ ಅವಶ್ಯವಿರುವ ಕೃಷಿ ಯಂತ್ರೋಪಕರಣಗಳನ್ನು  ಬಾಡಿಗೆ ರೂಪದಲ್ಲಿ  ಪಡೆದು ಕೃಷಿ ಯಂತ್ರೋಪಕರಣಗಳ ಪರಿಪೂರ್ಣ ಸಾಮರ್ಥ್ಯವನ್ನು ಕೃಷಿ ಬಳಕೆಗೆ ಉಪಯೋಗಿಸಿಕೊಂಡು ಆರ್ಥಿಕ ಮಟ್ಟವನ್ನು ಸುಧಾರಿಸಿಕೊಳ್ಳಲು ಸಹಾಯಕವಾಗಿದೆ. ಕೃಷಿ ಯಂತ್ರೋಪಕರಣಗಳ ಬಾಡಿಗೆ ಆಧಾರಿತ ಸೇವಾ ಕೇಂದ್ರ ಯೋಜನೆಯಡಿ  ಸಕಾಲದಲ್ಲಿ ಹಾಗೂ ಕಡಿಮೆ ಬಾಡಿಗೆ ದರದಲ್ಲಿ ಕೃಷಿ ಯಂತ್ರೋಪಕರಣಗಳ ತಯಾರಕ ಸಂಸ್ಥೆಗಳ ಮೂಲಕ ಬಾಡಿಗೆ ಆಧಾರಿತ ಸೇವಾ ಕೇಂದ್ರಗಳನ್ನು ಹೋಬಳಿ ಮಟ್ಟದಲ್ಲಿ ಸ್ಥಾಪಿಸಲಾಗಿದೆ.

 • ಸೂಕ್ಷ್ಮ ನೀರಾವರಿ ಯೋಜನೆ:-

ರೈತರಲ್ಲಿ ನೀರಿನ ಮಿತ ಬಳಕೆ ಮಾಡುವಂತೆ ಪ್ರೋತ್ಸಾಹಿಸುವುದೇ ಈ ಯೋಜನೆಯ ಮುಖ್ಯ ಉದ್ದೇಶ. ಈ ಕಾರ್ಯಕ್ರಮದಡಿ  ನೀರಾವರಿ ಘಟಕಗಳಾದ ತುಂತುರು / ಹನಿ ನೀರಾವರಿ  ಘಟಕಗಳನ್ನು ಎಲ್ಲಾ ವರ್ಗದ ರೈತರಿಗೆ  2 ಹೆಕ್ಟೆರ್ ಪ್ರದೇಶದವರೆಗೆ ಶೇ.90 ಸಹಾಯಧನ ಮತ್ತು 2 ಹೆಕ್ಟೇರ್ ಗಿಂತ ಮೇಲ್ಪಟ್ಟು 5 ಹೆಕ್ಟೇರ್ ವರೆಗೆ ಸಾಮಾನ್ಯ ರೈತರಿಗೆ ಶೇ.45 ಹಾಗೂ ಪ.ಜಾತಿ/ಪ.ಪಂಗಡ ರೈತರಿಗೆ ಶೇ.90 ಸಹಾಯಧನ ಒದಗಿಸಲಾಗುವುದು.

 • ಸಮಗ್ರ ಕೃಷಿ ಅಭಿಯಾನ- ಇಲಾಖೆಗಳ ನಡಿಗೆ ರೈತರ ಮನೆ ಬಾಗಿಲಿಗೆ :-

ಮುಂಗಾರು ಹಂಗಾಮು ಪೂರ್ವದಲ್ಲಿ  ರೈತರಿಗೆ  ಕೃಷಿಯನ್ನು ಹೆಚ್ಚು ಲಾಭದಾಯಕವಾಗಿ ಮಾಡಲು ಕೃಷಿ ಮತ್ತು ಕೃಷಿ ಸಂಬಂಧಿತ ಇಲಾಖೆಗಳ ಸಮನ್ವಯದೊಂದಿಗೆ ಸಮಗ್ರ ಕೃಷಿ ಮಾಹಿತಿಯನ್ನು ರೈತರಿಗೆ ತಲುಪಿಸುವುದು, ಉತ್ಪಾದಕತೆ ಹೆಚ್ಚಿಸುವ ತಾಂತ್ರಿಕತೆಗಳ ಮನವರಿಕೆ ಮಾಡುವುದು, ವಿಜ್ಞಾನಿಗಳೊಂದಿಗೆ ರೈತರ ಸಂವಾದ ವಿವಿಧ ಕೃಷಿ ಚಟುವಟಿಕೆಗಳ ಕುರಿತು ಗ್ರಾಮ ಪಂಚಾಯಿತಿ ಮತ್ತು ಹೋಬಳಿ ಮಟ್ಟದಲ್ಲಿ ಅರಿವು ಮೂಡಿಸುವುದು ಹಾಗೂ  ಮಾಹಿತಿ ಒದಗಿಸುವ  ಕಾರ್ಯಕ್ರಮವಾಗಿರುತ್ತದೆ.

 • ಕರ್ನಾಟಕ ರಾಜ್ಯ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ :-

ಅನಿಶ್ಚಿತ ಕೃಷಿಯಲ್ಲಿ (ಅತಿವೃಷ್ಠಿ, ಅನಾವೃಷ್ಠಿ, ಅಕಾಲಿಕ ಮಳೆ ಮುಂತಾದ ಪ್ರಕೃತಿ ವಿಕೋಪ) ನಿಶ್ಚಿತ ಆದಾಯ ತರುವ ಉದ್ದೇಶದಿಂದ  ಅಗ್ರಿಕಲ್ಚರ್ ಇನ್ ಶ್ಯೂರೆನ್ಸ್ ಕಂಪನಿ ಇವರ ಸಹಯೋಗದಿಂದ  ಹೋಬಳಿ ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ  ಯೋಜನೆಯನ್ನು ಅನುಷ್ಟಾನಗೊಳಿಸಲಾಗುವುದು. (ಹೋಬಳಿ ಮಟ್ಟಕ್ಕೆ ರಾಗಿ-ಮಳೆ ಆಶ್ರಿತ ಹಾಗೂ ಜೋಳ- ಮಳೆ ಆಶ್ರಿತ ಮತ್ತು ಗ್ರಾಮ ಪಂಚಾಯಿತಿ ಮಟ್ಟಕ್ಕೆ ಭತ್ತ-ನೀರಾವರಿ, ಭತ್ತ- ಮಳೆಆಶ್ರಿತ, ಮುಸುಕಿನ ಜೋಳ- ನೀರಾವರಿ, ಮುಸುಕಿನ ಜೋಳ- ಮಳೆ ಆಶ್ರಿತ) ಈ ಬೆಳೆಗಳಿಗೆ ಬೆಳೆ ಸಾಲ ಪಡೆದ ರೈತರು (ಇಚ್ಛೆ ಪಡದೇ ಇದ್ದಲ್ಲಿ ಬೆಳೆ ನೋಂದಣೆ ಅಂತಿಮ ದಿನಾಂಕಕ್ಕೆ 7 ದಿವಸಗಳ ಮುಂಚಿತವಾಗಿ ಲಿಖಿತ ಮುಚ್ಚಳಿಕೆ ನೀಡಿದಲ್ಲಿ ಬೆಳೆ ವಿಮೆ ಯೋಜನೆಯಿಂದ ಕೈಬಿಡಲಾಗುವುದು) ಮತ್ತು ಸಾಲ ಪಡೆಯದ ರೈತರು  ಅರ್ಜಿಯೊಂದಿಗೆ ಪಹಣಿ/ಖಾತೆ/ಪಾಸ್ ಪುಸ್ತಕ/ಕಂದಾಯ ರಶೀದಿ ನೀಡಿ ಬೆಳೆ ವಿಮೆಗೆ ನೊಂದಾಯಿಸಬಹುದಾಗಿದೆ.

 • ಕೃಷಿ ಪ್ರಶಸ್ತಿ:-

ಕೃಷಿ ಕ್ಷೇತ್ರದಲ್ಲಿ ಅತಿ ಹೆಚ್ಚಿನ  ಉತ್ಪಾದನೆ ಹಾಗೂ ಉತ್ಪಾದಕತೆ ಹೆಚ್ಚಿಸಲು ರೈತರಲ್ಲಿ ಒಂದು ಆರೋಗ್ಯಕರ ಸ್ಪರ್ಧಾ ಮನೋಬಾವವನ್ನು ಉಂಟುಮಾಡಿ ಹೆಚ್ಚು ಇಳುವರಿ ಪಡೆದ ರೈತರಿಗೆ (ರಾಜ್ಯ ಮಟ್ಟದಲ್ಲಿ ವಿಜೇತರಾದ ರೈತರಿಗೆ ಪ್ರಥಮ-ರೂ.50,000/-, ದ್ವಿತೀಯ-ರೂ.40,000/-, ಹಾಗೂ ತೃತೀಯ- ರೂ. 35,000/- ಜಿಲ್ಲಾ ಮಟ್ಟದಲ್ಲಿ ಪ್ರಥಮ- ರೂ. 30,000/-, ದ್ವಿತೀಯ- ರೂ. 25,000/-, ಹಾಗೂ ತೃತೀಯ- ರೂ. 20,000/-, ಮುಂದುವರೆದು ತಾಲ್ಲೂಕು ಮಟ್ಟದಲ್ಲಿ ಪ್ರಥಮ- ರೂ. 15,000/-, ದ್ವಿತೀಯ- ರೂ. 10000/-, ಹಾಗೂ ತೃತೀಯ-ರೂ.5000/- ಬಹುಮಾನ ಮೂಲಕ ಉತ್ತೇಜನ ನೀಡುವ ಒಂದು ಕಾರ್ಯಕ್ರಮವಾಗಿದೆ.

 • ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ:-

ಕೇಂದ್ರ ಸರ್ಕಾರದ  ಪಿ ಎಂ ಕಿಸಾನ್ ಯೋಜನೆಯಲ್ಲಿ ವಾರ್ಷಿಕವಾಗಿ ರೂ.6000/- ಗಳನ್ನು ಅರ್ಹ ರೈತ ಫಲಾನುಭವಿಗಳಿಗೆ 3 ಕಂತುಗಳಲ್ಲಿ ನೀಡಲಾಗುತ್ತಿದ್ದು ಮುಂದುವೆರೆದು ದಿನಾಂಕ 14-08-2019  ರಿಂದ ರಾಜ್ಯ ಸರ್ಕಾರವೂ ಹೆಚ್ಚುವರಿಯಾಗಿ ವಾರ್ಷಿಕ ರೂ.4000 ರಂತೆ  ಎರಡು ಕಂತುಗಳಲ್ಲಿ ನೇರ ನಗದು ವರ್ಗಾವಣೆ (ಡಿ ಬಿ ಟಿ) ಮೂಲಕ ಒಟ್ಟು ರೂ. 10,000/- ಗಳನ್ನು ರೈತರಿಗೆ ಕೃಷಿ ಉತ್ತೇಜನಾಗಾಗಿ ನೀಡಲಾಗುತ್ತಿದೆ.

 • ರಾಷ್ಟ್ರೀಯ ಆಹಾರ ಭದ್ರತಾ ಅಭಿಯಾನ

ಈ ಯೋಜನೆಯಡಿ ಅಕ್ಕಿ, ದ್ವಿದಳ ಧಾನ್ಯ, ಎಣ್ಣೆಕಾಳು ಬೆಳೆಗಳಲ್ಲಿ  ಇಳುವರಿ ಹೆಚ್ಚಿಸುವ  ಸಲುವಾಗಿ  ನಿರ್ದಿಷ್ಟ ನವೀನ ತಾಂತ್ರಿಕತೆಯ ಗುಚ್ಛ ಪ್ರಾತ್ಯಕ್ಷಿಕೆ (ರೂ. 9000/- ಪ್ರತಿ ಹೆಕ್ಟೇರ್) ಭತ್ತದಲ್ಲಿ ನೇರ ಬಿತ್ತನೆ/ಯಾಂತ್ರೀಕೃತ ಸಾಲು ನಾಟಿ/SRI ಪದ್ದತಿಯ ತಾಂತ್ರಿಕತೆಯನ್ನು ನೀಡಲು ಅವಕಾಶವಿರುತ್ತದೆ, ಸಮಗ್ರ ಪೋಷಕಾಂಶ,  ಸಮಗ್ರ ಪೀಡೆ ನಿರ್ವಹಣೆ, ನೀರಾವರಿ ಸಾಧನ, ಸ್ಥಳೀಯ ಪ್ರೇರಕಗಳು, ಹಾಗೂ ಕೃಷಿ ಯಂತ್ರೋಪಕರಣಗಳನ್ನು ಶೇ.50 ಸಹಾಯಧನದಡಿಯಲ್ಲಿ ಈ ಯೊಜನೆಯಲ್ಲಿ ಒದಗಿಸಲಾಗುವುದು. 

 • ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯ (ಕೃಷಿ ಸಂಜೀವಿನಿ) ಕಾರ್ಯಕ್ರಮ. :-

         ಕೀಟ, ರೋಗ ಮತ್ತು ಕಳೆಗಳ ಬಾಧೆ ಮತ್ತು ಮಣ್ಣಿನ ಪೋಷಕಾಂಶ ಕೊರತೆ ಹಾಗೂ ಸಮರ್ಪಕ ನಿರ್ವಹಣೆ ಕುರಿತಂತೆ ರೈತರ ತಾಕುಗಳಲ್ಲಿಯೇ ಹತೋಟಿ ಕ್ರಮಗಳ ಕುರಿತು ಮಾರ್ಗೋಪಾಯ ಒದಗಿಸಲು ರೈತರ ಸಹಾಯವಾಣಿ 155313 ಕ್ಕೆ ಉಚಿತ ಕರೆ ಮಾಡಿದಲ್ಲಿ ಕೃಷಿ ಸಂಜೀವಿನಿ ವಾಹನವು ತಾಂತ್ರಿಕ ಸಿಬ್ಬಂದಿಗಳೊಂದಿಗೆ ರೈತರ ತಾಕುಗಳಿಗೆ ಭೇಟಿ ನೀಡಿ ಸಲಹೆ ನೀಡಲಾಗುತ್ತದೆ.

ಇಲಾಖಾ ವೆಬ್ ಸೈಟ್:-https://raitamitra.karnataka.gov.in

ರೈತರ ಸಹಾಯವಾಣಿ  ಕೇಂದ್ರ ದೂರವಾಣಿ ಸಂಖ್ಯೆ: 18004253553

ಕೃಷಿ ಸಂಜೀವಿನಿ ರೈತರ ಉಚಿತ ಸಹಾಯವಾಣಿ: 155313

ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆ

1. ಹೊಸ ತೋಟಗಳ ಸ್ಥಾಪನೆ :-

 • ಹಣ್ಣಿನ ಬೆಳೆಗಳ ಅಭಿವೃದ್ಧಿ ಯೋಜನೆ: ಅನಾನಸ್ ಬೆಳೆಯ ಹೊಸ ತೋಟ ಸ್ಥಾಪನೆಗೆ ಪ್ರತಿ ಹೆಕ್ಟೇರ್‍ಗೆ ರೂ..26,250/- ಹಾಗೂ ಮೊದಲನೇ ವರ್ಷದ ನಿರ್ವಹಣೆಗೆ ಪ್ರತಿ ಹೆಕ್ಟೇರ್‍ಗೆ ರೂ.8,750/- ಸಹಾಯಧನ ನೀಡಲಾಗುವುದು.  ಬಾಳೆ (ಅಂಗಾಂಶ ಕೃಷಿ) ಬೆಳೆ  ಹೊಸ ತೋಟ ಸ್ಥಾಪನೆಗೆ ಪ್ರತಿ ಹೆಕ್ಟೇರ್‍ಗೆ ರೂ.30,600/- ಮೊದಲನೇ ವರ್ಷದ ನಿರ್ವಹಣೆಗೆ ಪ್ರತಿ ಹೆಕ್ಟೇರ್‍ಗೆ ರೂ.10,200/- ಸಹಾಯಧನ ನೀಡಲಾಗುವುದು.
 • ಪುಷ್ಪಾಭಿವೃದ್ಧಿ ಯೋಜನೆಗಳು:- ಗುಲಾಬಿ ಬೆಳೆದ ಸಣ್ಣ/ಅತಿ ಸಣ್ಣ ರೈತರಿಗೆ ಪ್ರತೀ ಹೆಕ್ಟೇರ್‍ಗೆ ರೂ.40,000/- ಇತರೆ ರೈತರಿಗೆ ರೂ.25,000/- ಮತ್ತು ಸುಗಂಧರಾಜ ಬೆಳೆದ ಸಣ್ಣ/ಅತಿ ಸಣ್ಣ ರೈತರಿಗೆ ಪ್ರತೀ ಹೆಕ್ಟೇರ್‍ಗೆ ರೂ.60,000/- ಇತರೆ ರೈತರಿಗೆ ರೂ.37,500/- ಸಹಾಯಧನ ನೀಡಲಾಗುವುದು.

ಅಣಬೆ ಉತ್ಪಾದನೆ ಘಟಕ ಸ್ಥಾಪನೆಗೆ ಸಹಾಯಧನ: ಅಣಬೆ ಬೆಳೆ ಬೆಳೆಯಲಿಚ್ಚಿಸುವ ರೈತರಿಗೆ ಅಣಬೆ ಬೀಜಗಳ ಉತ್ಪಾದನೆಗೆ ಶೇ. 40 ರಂತೆ ಗರಿಷ್ಟ ರೂ.00 ಲಕ್ಷಗಳವರೆಗೆ ಸಹಾಯಧನವನ್ನು ನೀಡಲಾಗುವುದು ಹಾಗೂ ಅಣಬೆ ಉತ್ಪಾದನಾ ಘಟಕ ಸ‍್ಥಾಪಿಸುವ ರೈತರಿಗೆ ಶೇ.40 ರಂತೆ ಗರಿಷ್ಟ ರೂ.8.00 ಲಕ್ಷಗಳ ಸಹಾಯಧನ ನೀಡಲಾಗುವುದು.

ಹಳೆಯ/ಅನುತ್ಪಾದಕ ತೋಟಗಳ ಪುನ‍ಃಶ್ಚೇತನ :- ಹಳೆಯ ಕಾಳುಮೆಣಸು ಮತ್ತು ಮಾವು ತೋಟಗಳ ಪುನಶ್ಚೇತನಕ್ಕೆ ಶೇ.50 ರಂತೆ ಪ್ರತಿ ಹೆಕ್ಟೇರಿಗೆ ರೂ.20,000/- ಗರಿಷ್ಟ ಎರಡು ಹೆಕ್ಟೇರ್ ವರೆಗೆ ಸಹಾಯಧನ ನೀಡಲಾಗುವುದು.

ನೀರು ಸಂಗ್ರಹಣಾ ಘಟಕ :-

 • ಸಮುದಾಯ ನೀರು ಸಂಗ್ರಹಣಾ ಘಟಕ (ಸಂಘ/ ಸಂಸ್ಥೆ/ ರೈತರ ಗುಂಪುಗಳಿಗೆ)- 6000 ಘ.ಮೀ. ನೀರು ಸಂಗ್ರಹಣಾ ಸಾಮರ್ಥ್ಯದ ಘಟಕ ನಿರ್ಮಿಸಿದ ರೈತರ ಗುಂಪುಗಳಿಗೆ ಶೇ.50 ರಂತೆ ಗರಿಷ್ಟ ರೂ.00 ಲಕ್ಷಗಳವರೆಗೆ ಸಹಾಯಧನವನ್ನು ನೀಡಲಾಗುವುದು.
 • ವೈಯಕ್ತಿಕ ನೀರು ಸಂಗ್ರಹಣಾ ಘಟಕ – 1200 ಚ.ಮೀ ಸಾಮರ್ಥ್ಯದ ನೀರು ಸಂಗ್ರಹಣಾ ಘಟಕ ನಿರ್ಮಿಸಿದ ರೈತರಿಗೆ  ಶೇ.50 ರಂತೆ ಗರಿಷ್ಟ ರೂ.0.75 ಲಕ್ಷಗಳವರೆಗೆ ಸಹಾಯಧನವನ್ನು ನೀಡಲಾಗುವುದು.

ಸಂರಕ್ಷಿತ ಬೇಸಾಯ :-

 • ಹಸಿರು ಮನೆ:-  ಹಸಿರು ಮನೆ ನಿರ್ಮಿಸಿ, ಹೂವು ಮತ್ತು ತರಕಾರಿಗಳನ್ನು ಬೆಳೆಯುವ ರೈತರಿಗೆ ಶೇ. 50 ರಂತೆ ಪ್ರತಿ ಚ.ಮೀ.ಗೆ ರೂ.403/-ಗಳ ಸಹಾಯಧನವನ್ನು ಗರಿಷ್ಟ ಒಂದು ಹೆಕ್ಟೇರ್ ಪ್ರದೇಶಕ್ಕೆ ಸೀಮಿತಗೊಳಿಸಿ ಸಹಾಯಧನ ನೀಡಲಾಗುವುದು.
 • ನೆರಳು ಪರದೆ ನಿರ್ಮಾಣ:- ನೆರಳು ಪರದೆ ನಿರ್ಮಿಸಿ, ಹೂವು ಮತ್ತು ತರಕಾರಿಗಳನ್ನು ಬೆಳೆಯುವ ರೈತರಿಗೆ ಶೇ. 50 ರಂತೆ ಪ್ರತಿ ಚ.ಮೀ.ಗೆ ರೂ.197/-ಗಳ ಸಹಾಯಧನವನ್ನು ಗರಿಷ್ಟ ಒಂದು ಹೆಕ್ಟೇರ್ ಪ್ರದೇಶಕ್ಕೆ ಸೀಮಿತಗೊಳಿಸಿ ಸಹಾಯಧನ ನೀಡಲಾಗುವುದು.
 • ಪ್ಲಾಸ್ಟಿಕ್ ಹೊದಿಕೆ:- ತೋಟಗಾರಿಕೆ ಬೆಳೆಗಳಲ್ಲಿ ಕಳೆ ನಿಯಂತ್ರಣ ಹಾಗೂ ಮಣ್ಣಿನ ತೇವಾಂಶ ನಿರ್ವಹಣೆಗೆ ಪ್ಲಾಸ್ಟಿಕ್ ಹೊದಿಕೆ ಮಾಡಿ ಬೆಳೆ ಬೆಳೆಯುವ ರೈತರಿಗೆ ಶೇ. 50 ರಂತೆ  ಪ್ರತಿ ಹೆಕ್ಟೇರ್ ಗೆ ರೂ.16,000/- ಗಳನ್ನು  2 ಹೆಕ್ಟೇರ್ ಪ್ರದೇಶಕ್ಕೆ ಸೀಮಿತಗೊಳಿಸಿ  ಸಹಾಯಧನವನ್ನು ನೀಡಲಾಗುವುದು.
 • ಸಮಗ್ರ ಪೋಷಕಾಂಶ ನಿರ್ವಹಣೆ/ ಸಮಗ್ರ ಪೀಡೆ ನಿರ್ವಹಣೆ :- ಸಸ್ಯ ಸಂರಕ್ಷಣೆ ಕೈಗೊಳ್ಳಲು ರೈತರಿಗೆ ಶೇ.30 ರಂತೆ ಗರಿಷ್ಟ ರೂ.1200 ಹೆಕ್ಟೇರ್‍ಗೆ ಸಹಾಯಧನ ನೀಡಲಾಗುವುದು.(ಗರಿಷ್ಠ 4 ಹೆಕ್ಟೇರ್ ಗಳು)

ಟ್ರ್ಯಾಕ್ಟರ್ ಗೆ ಸಹಾಯಧನ: ಮಿನಿ ಟ್ರ್ಯಾಕ್ಟರ್ :- (20 PTO HP ಸಾಮರ್ಥ್ಯದೊಳಗಿನ) ಖರೀದಿಸುವ ಸಾಮಾನ್ಯ ವರ್ಗದ ರೈತರಿಗೆ ಶೇ.25 ರಂತೆ ಗರಿಷ್ಟ ರೂ.75,000/- ಹಾಗೂ ಪರಿಶಿಷ್ಟ ಜಾತಿ/ಪಂಗಡದ ರೈತರಿಗೆ ಶೇ.35 ರಂತೆ ಗರಿಷ್ಟ ರೂ.1,00,000/- ರವರೆಗೆ ಸಹಾಯಧನ ನೀಡಲಾಗುವುದು.

ಕೊಯ್ಲೋತ್ತರ ನಿರ್ವಹಣೆ :-

 • ಪ್ರಾಥಮಿಕ ಸಂಸ್ಕರಣಾ ಘಟಕ:- ಪ್ರಮುಖ ತೋಟಗಾರಿಕೆ ಬೆಳೆಗಳ ಪ್ರಾಥಮಿಕ ಸಂಸ್ಕರಣೆ ಕೈಗೊಳ್ಳಲು ಮೂಲಭೂತ ಸೌಕರ್ಯ ನಿರ್ಮಾಣಕ್ಕೆ ಯೋಜನಾ ವೆಚ್ಚದ ಶೇ.40 ರಷ್ಟು ಸಹಾಯಧನ ನೀಡಲಾಗುವುದು. ಬ್ಯಾಂಕಿನಿಂದ ಸಾಲ ಪಡೆಯುವುದು ಕಡ್ಡಾಯವಾಗಿರುತ್ತದೆ.(ಗರಿಷ್ಟ ರೂ.00 ಲಕ್ಷ)
 • ಪ್ಯಾಕ್ ಹೌಸ್: ಹಣ್ಣಿನ ಮತ್ತು ಪುಷ್ಪ ಉತ್ಪನ್ನಗಳಿಗೆ ಪ್ಯಾಕಿಂಗ್ ಸೌಲಭ್ಯ ಕಲ್ಪಿಸಿಕೊಳ್ಳಲು ರೈತರಿಗೆ ಶೇ.50 ರಂತೆ ಗರಿಷ್ಟ ಮೊತ್ತ ರೂ.2.00 ಲಕ್ಷಗಳ ಸಹಾಯಧನ ನೀಡಲಾಗುವುದು.

2. ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ:-

 ತೋಟಗಾರಿಕೆ ಬೆಳೆಗಳಲ್ಲಿ ನೀರಿನ ಮಿತ ಬಳಕೆ ಹಾಗೂ ರಸಾವರಿ ಪದ್ದತಿಯ ಮೂಲಕ ತೋಟಗಾರಿಕೆ ಬೆಳೆಗಳನ್ನು ಬೆಳೆದು, ತೋಟಗಾರಿಕೆ ಬೆಳೆಗಳ ಉತ್ಪಾದನೆ ಮತ್ತು ಉತ್ಪಾದಕತೆ ಹೆಚ್ಚಿಸಿಕೊಳ್ಳಲು ಸೂಕ್ಷ್ಮ ನೀರಾವರಿ ಅಳವಡಿಸಿಕೊಳ್ಳುವ ರೈತರಿಗೆ ಗರಿಷ್ಟ 5 ಹೆಕ್ಟೇರ್ ಪ್ರದೇಶಕ್ಕೆ ಸಹಾಯಧನ ನೀಡಲಾಗುವುದು.

3. ಮಧುವನ ಮತ್ತು ಜೇನು ಸಾಕಾಣಿಣೆ ಅಭಿವೃದ್ಧಿ ಯೋಜನೆ:-

 • ರೈತರಿಗೆ ವೈಜ್ಞಾನಿಕ ಜೇನು ಕೃಷಿಯ ಕುರಿತು ತರಬೇತಿ ನೀಡಲಾಗುವುದು.
 • ಜೇನು ಪೆಟ್ಟಿಗೆ, ಜೇನು ಕುಟುಂಬ ಹಾಗೂ ಸ್ಟ್ಯಾಂಡ್ ಖರೀದಿಗೆ ಸಹಾಯಧನ.
 • ಖಾಸಗಿ ಮಧುವನಗಳ ಸ್ಥಾಪನೆಗೆ ಸಹಾಯಧನ.
 • ಜೇನು ತುಪ್ಪ ಸಂಸ್ಕರಣಾ ಘಟಕ ಸ್ಥಾಪನೆಗೆ ಸಹಾಯಧನ.

4. ತೋಟಗಾರಿಕೆಯಲ್ಲಿ ಯಾಂತ್ರೀಕರಣ :-

ತೋಟಗಾರಿಕೆಯಲ್ಲಿ ಕೂಲಿ ಕಾರ್ಮಿಕರ ಸಮಸ್ಯೆಯನ್ನು ಪರಿಹರಿಸಿ ತೋಟಗಾರಿಕೆಯನ್ನು ಯಾಂತ್ರೀಕರಣ ಗೊಳಿಸಲು ಕಳೆ ತೆಗೆಯುವ ಯಂತ್ರ, ಸ್ಪ್ರೇಯರ್, ಅಡಿಕೆ ಸಿಪ್ಪೆ ಸುಲಿಯುವ ಯಂತ್ರ, ತಳ್ಳುವ ಗಾಡಿ ಹಾಗೂ ಇತರೆ ವಿವಿಧ ಯಂತ್ರಗಳನ್ನು ಖರೀದಿಸಲು  ಸಾಮಾನ್ಯ ವರ್ಗದ ರೈತರಿಗೆ ಶೇ.40 ರಂತೆ ಹಾಗೂ ಪರಿಶಿಷ್ಟ ಜಾತಿ/ಪಂಗಡ ಹಾಗೂ ಮಹಿಳಾ ರೈತರಿಗೆ ಶೇ.50 ರಂತೆ ಸರ್ಕಾರದ ಮಾರ್ಗಸೂಚಿಯನ್ವಯ ಸಹಾಯಧನ ನೀಡಲಾಗುವುದು.

5. ಉತ್ಪಾದನಾ ಸುಧಾರಣೆಗಾಗಿ ತೆಂಗಿನಲ್ಲಿ ಸಂಯೋಜಿತ ಬೇಸಾಯ :-

ತೆಂಗಿನ ತೋಟಗಳ ಪುನಶ್ಚೇತನ, ಮರುನಾಟಿ ಮತ್ತು ನಿರ್ವಹಣೆಗಾಗಿ ಒಂದು ಹೆಕ್ಟೇರ್‍ ಪ್ರದೇಶಕ್ಕೆ ಮಿತಿಗೊಳಿಸಿ, ಪ್ರತಿ ಹೆಕ್ಟೇರ್‍ಗೆ ಮೊದಲನೇ ವರ್ಷ ರೂ.44,750/-ಗಳನ್ನು  ಹಾಗೂ ಎರಡನೇ ವರ್ಷಕ್ಕೆ ರೂ.8,750/-ಗಳನ್ನು ನಿರ್ವಹಣೆಗೆ ಸಹಾಯಧನವನ್ನು ನೀಡಲಾಗುವುದು.

6. ತಾಳೆ ಬೆಳೆ ಅಭಿವೃದ್ಧಿಗಾಗಿ ರಾಷ್ಟ್ರೀಯ ಆಹಾರ ಭದ್ರತಾ ಮಿಷನ್ ಯೋಜನೆ (NFSM) :-

 • ಹೊಸ ತೋಟಗಳ ನಿರ್ಮಾಣ ಹಾಗೂ ನಿರ್ವಹಣೆ ವೆಚ್ಚ: ಹೊಸ ತೋಟ ನಿರ್ಮಾಣಕ್ಕೆ ಶೇ.50 ರಂತೆ ರೂ.12,000 ಹೆಕ್ಟೇರಿಗೆ ಮೀರದಂತೆ ಹಾಗೂ ನಾಲ್ಕು ವರ್ಷಗಳ ನಿರ್ವಹಣೆಗೆ ಗರಿಷ್ಟ ರೂ.20,000 ಗಳ ಸಹಾಯಧನ ನೀಡಲಾಗುವುದು.
 • ಅಂತರ ಬೆಳೆಗೆ ಸಹಾಯಧನ:- ಪ್ರತಿ ಹೆಕ್ಟೇರ್ ತೋಟಕ್ಕೆ ರೂ.5000/-ರಂತೆ ಸಹಾಯಧನ ನೀಡಲಾಗುವುದು.
 • ಡೀಸೆಲ್ ಪಂಪ್‍ಸೆಟ್‍ಗೆ ಸಹಾಯಧನ:- ಶೇ. 50 ರಂತೆ ಸಾಮಾನ್ಯ ವರ್ಗಕ್ಕೆ ರೂ.22,500/-, ಪರಿಶಿಷ್ಟ ಜಾತಿ/ಪಂಗಡಕ್ಕೆ ರೂ.27,000/-ಗಳ ಸಹಾಯಧನ ನೀಡಲಾಗುವುದು.
 • ತಾಳೆ ಹಣ್ಣು ಕಟಾವು ಉಪಕರಣ ಖರೀದಿಗೆ ಸಹಾಯಧನ:- ಶೇ.50 ರಂತೆ ಸಹಾಯಧನ ನೀಡಲಾಗುವುದು.

7. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ :- ತೋಟಗಾರಿಕೆ ಬೆಳೆಗಳಾದ ಅಡಿಕೆ, ತೆಂಗು, ಗೇರು, ಕಾಳುಮೆಣಸು, ಜಾಯಿಕಾಯಿ, ಲವಂಗ, ಬಾಳೆ, ಕೋಕೋ, ನುಗ್ಗೆ ಹಾಗೂ ಇತರೆ ಬಹುವಾರ್ಷಿಕ ಬೆಳೆಗಳ ಹೊಸ ತೋಟ ಸ್ಥಾಪನೆಗೆ, ಪುನಶ್ಚೇತನಕ್ಕೆ, ಪೌಷ್ಟಿಕ ಕೈತೋಟ ನಿರ್ಮಾಣಕ್ಕೆ ಮುಂತಾದ ಕಾರ್ಯಕ್ರಮಗಳನ್ನು ಅರ್ಹ ಫಲಾನುಭವಿಗಳಿಗೆ ತೋಟಗಾರಿಕೆ ಇಲಾಖೆಯ ಮುಖಾಂತರ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ.

ವಿಶೇಷ ಸೂಚನೆ: ಕೆಲವು ಯೋಜನೆಗಳಡಿಯಲ್ಲಿ ಇಲಾಖೆಯಿಂದ ಕಾಲಕಾಲಕ್ಕೆ ನೀಡುವ ಮಾರ್ಗಸೂಚಿಗಳನ್ವಯ ಯೋಜನೆಗಳನ್ನು ಅನುಷ್ಟಾನಗೊಳಿಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ

ಸಹಾಯಕ ತೋಟಗಾರಿಕೆ ಅಧಿಕಾರಿ, ರೈತ ಸಂಪರ್ಕ ಕೇಂದ್ರ, ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿ ದೂರವಾಣಿ ಸಂಖ್ಯೆ :

 • ಶಿವಮೊಗ್ಗ: 08182-22633,
 • ಭದ್ರಾವತಿ: 08282-268239,
 • ಶಿಕಾರಿಪುರ: 08187-223544,
 • ಸೊರಬ: 08184-272112,
 • ಸಾಗರ: 08183-226193,
 • ತೀರ್ಥಹಳ್ಳಿ: 08181-228151,
 • ಹೊಸನಗರ: 08185-221364

ತೋಟಗಾರಿಕೆ ಉಪನಿರ್ದೇಶಕರ ಕಛೇರಿ ಶಿವಮೊಗ್ಗರವರನ್ನು ಸಂಪರ್ಕಿಸಲು ಕೋರಿದೆ.

ಜಾಲತಾಣ: https://horticulturedir.karnataka.gov.in

ಜಿಲ್ಲಾ ವಲಯ ಯೋಜನೆ :-

ಹೊಸದಾಗಿ ರೇಷ್ಮೆ (ಹಿಪ್ಪು ನೇರಳೆ) ಕೃಷಿ ಕೈಗೊಳ್ಳುವ ರೇಷ್ಮೆ ಬೆಳೆಗಾರರಿಗೆ ಪ್ರತಿ ಎಕರೆಗೆ ಸಾಮಾನ್ಯ ವರ್ಗದ ರೈತರಿಗೆ ರೂ. 37,500/- ಹಾಗು ಪ.ಜಾತಿ/ಪಂಗಡದ ರೇಷ್ಮೆ ಬೆಳೆಗಾರರಿಗೆ ಶೇ.90 ರ ಸಹಾಯಧನ         ರೂ. 45000/- ನೀಡಲಾಗುವುದು.

ರಾಜ್ಯ ವಲಯ ಯೋಜನೆಗಳು:-

1.ರೇಷ್ಮೆ ಅಭಿವೃದ್ದಿ ಯೋಜನೆ :-

 • ಪ್ರತ್ಯೇಕ ರೇಷ್ಮೆ ಹುಳು ಸಾಕಾಣಿಕೆ ಮನೆ ಸಹಾಯಧನ: ಪ್ರತ್ಯೇಕ ರೇಷ್ಮೆ ಹುಳು ಸಾಕಾಣಿಕೆ ಮನೆ ನಿರ್ಮಿಸಲು ರೂ. 3.00 ಲಕ್ಷ (1000 ಚ.ಅಡಿ ವಿಸ್ತೀರ್ಣ) ಮತ್ತು ರೂ. 2.25 ಲಕ್ಷ (600 ಚ.ಅಡಿ ವಿಸ್ತೀರ್ಣ) ಗಳ ಸಹಾಯಧನ ನೀಡಲಾಗುವುದು. ರೇಷ್ಮೆ ಹುಳು ಸಾಕಣೆ ಮಾಡಲು ಕಡಿಮೆ ವೆಚ್ಚದ ಶೆಡ್ ನಿರ್ಮಾಣಕ್ಕೆ ರೂ. 75,000/- ಗಳ ಸಹಾಯಧನ ನೀಡಲಾಗುವುದು.
 • ವಿಶೇಷ ಘಟಕ ಯೋಜನೆ/ಗಿರಿಜನ ಉಪ ಯೋಜನೆಯಡಿ: ಪ.ಜಾತಿ/ಪ.ಪಂಗಡದ ಫಲಾನುಭವಿಗಳಿಗೆ ರೇಷ್ಮೆ ಮನೆಯ ವಿಸ್ತೀರ್ಣದ ಆಧಾರದ ಮೇಲೆ ರೂ. 2.70 ಲಕ್ಷ ರಿಂದ ರೂ.3.60 ಲಕ್ಷಗಳ ಸಹಾಯಧನ ನೀಡಲಾಗುವುದು.
 • ರೇಷ್ಮೆ ಹುಳು ಸಾಕಾಣಿಕೆ ಸಲಕರಣೆ ಖರೀದಿಗೆ ಸಹಾಯಧನ: ಈ ಯೋಜನೆಯಡಿ ರೇಷ್ಮೆ ಹುಳು ಸಾಕಣಿಕೆಗೆ ಆಗತ್ಯವಿರುವ ಸಲಕರಣೆಗಳನ್ನು ಖರೀದಿಸಲು ರೂ. 75,000/-ಗಳ ಘಟಕ ದರ ನಿಗಡಿಪಡಿಸಿದ್ದು, ರೂ.56250/-ಗಳ ಸಹಾಯಧನ ನೀಡಲಾಗುವುದು (ಶೇ.75) ಪರಿಶಿಷ್ಟ ಜಾತಿ/ ಪಂಗಡದ ಫಲಾನುಭವಿಗಳಿಗೆ ಶೇ.90ರ ಸಹಾಯಧನ ನೀಡಲಾಗುವುದು.

2. ನೂತನ ಕತೃತ್ವ ಶಕ್ತಿ ಯೋಜನೆ :- ದ್ವಿತಳಿ ಬಿತ್ತನೆಗೂಡು ಬೆಳೆದ ರೇಷ್ಮೆ ಬೆಳೆಗಾರರಿಗೆ ಪ್ರತಿ ಕೆಜಿ ರೇಷ್ಮೆ ಬಿತ್ತನೆಗೂಡಿಗೆ ರೂ. 70/- ಹಾಗು ಬಿತ್ತನೆಗೆ ಯೋಗ್ಯವಾಗಿದ್ದು ನೂಲು ಬಿಚ್ಚಾಣಿಕೆಗೆ ವಿಲೇವಾರಿ ಆಗಿದ್ದರೆ ರೂ. 245/-ಗಳ ಸಹಾಯಧನ ನೀಡಲಾಗುವುದು.

3. ದ್ವಿತಳಿ ಚಾಕಿ ಸಾಕಾಣಿಕೆ ವೆಚ್ಚ :- ಪ್ರತಿ 100 ಮೊಟ್ಟೆ ದ್ವಿತಳಿ ರೇಷ್ಮೆ ಬೆಳೆ ಚಾಕಿ ಸಾಕಾಣಿಕೆ ಮಾಡುವ ರೈತರಿಗೆ ರೂ. 1000/-ಗಳ ಪ್ರೋತ್ಸಾಹಧನ ಪಾವತಿಸಲಾಗುವುದು.

4. ಪ್ರಧಾನ್ ಮಂತ್ರಿ ಕೃಷಿ ಸಿಂಚಾಯಿ ಯೋಜನೆ (ಪಿ.ಎಂ.ಕೆ.ಎಸ್.ವೈ) :- ಹಿಪ್ಪುನೇರಳೆ ತೋಟಕ್ಕೆ ಹನಿ ನೀರಾವರಿ ಅಳವಡಿಸಲು ಶೇ.90ರ ಸಹಾಯಧನ ನೀಡಲಾಗುವುದು.

5. ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ:- ಅಡಿಯಲ್ಲಿ ರೇಷ್ಮೆ ತೋಟದ ಫಲವತ್ತತೆ ಹೆಚ್ಚಿಸಲು ಪ್ರತಿ ಎಕರೆಗೆ ರೂ. 6263/- ಹಾಗು ಟ್ರೆಂಚಿಂಗ್/ಮಲ್ಚಿಂಗ್ ವಿಧಾನ ಅಳವಡಿಸಲು ರೂ. 15,000/- ಸಹಾಯಧನ ನೀಡಲಾಗುವುದು.

Website: https://sericulture.karnataka.in , ಸಹಾಯವಾಣಿ:9900881100

ಇನಾಫ್ :- ಯೋಜನೆಯಡಿಯಲ್ಲಿ ಜಿಲ್ಲೆಯ ಎಲ್ಲಾ ಜಾನುವಾರುಗಳಿಗೆ ಕಿವಿಯೋಲೆ ಅಳವಡಿಸಿ ತಂತ್ರಾಂಶದಲ್ಲಿ ದಾಖಲಿಸಿದ್ದು, ಈ ಕಿವಿಯೋಲೆ ಸಂಖ್ಯೆಯಿಂದ ಈ ಕೆಳಕಂಡ ಮಾಹಿತಿ ಲಭ್ಯವಾಗುತ್ತದೆ. ಸದರಿ ಜಾನುವಾರಿಗೆ ಕಿವಿಯೋಲೆ ಅಳವಡಿಸಿದ ದಿನಾಂಕ, ಗ್ರಾಮ, ತಾಲ್ಲೂಕು, ಜಿಲ್ಲೆ, ಜಾನುವಾರುವಿನ ಸ್ಥಿತಿ ಜಾನುವಾರಿನ ಲಿಂಗ, ಜಾನುವಾರಿನ ವಿವರ, ಮಾಲೀಕರ ಮೊಬೈಲ್ ಸಂಖ್ಯೆ ಇತ್ಯಾದಿ ಮಾಹಿತಿಗಳು ದೊರೆಯುತ್ತವೆ.

ರಾಷ್ಟ್ರೀಯ ಜಾನುವಾರು ಮಿಷನ್ (ಎನ್.ಎಲ್.ಎಮ್) :-

ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಡಿ ಗ್ರಾಮೀಣ ಹಿತ್ತಲ ಕುರಿ, ಮೇಕೆ ಮತ್ತು ಹಂದಿ ಅಭಿವೃದ್ಧಿ ಕಾರ್ಯಕ್ರಮದಡಿ ಪ.ಜಾ/ಪ.ಪಂ/ಸಾಮಾನ್ಯ ವರ್ಗದ ರೈತರಿಗೆ ಕುರಿ, ಮೇಕೆ ಮತ್ತು ಹಂದಿ ಸಾಕಾಣಿಕೆಗೆ ಸಹಾಯಧನ ನೀಡುವ ಕಾರ್ಯಕ್ರಮ.

ಕುರಿ ಮತ್ತು ಮೇಕೆ ಘಟಕ : 4 ರಿಂದ 5 ತಿಂಗಳ 10 ಹೆಣ್ಣು ಮರಿ ಮತ್ತು 5 ರಿಂದ 6 ತಿಂಗಳ ಒಂದು ಗಂಡು ಮರಿ (10+1)

ಹಂದಿ ಘಟಕ:  3 ರಿಂದ 4 ತಿಂಗಳ 3 ಹೆಣ್ಣು ಮರಿ ಮತ್ತು 4 ರಿಂದ 5 ತಿಂಗಳ ಒಂದು ಗಂಡು ಮರಿ (3+1)

ಘಟಕ

ಪ್ರತಿ ಘಟಕದ ಒಟ್ಟು ವೆಚ್ಚ

ಸಹಾಯಧನ ಶೇ.90

ಫಲಾನುಭವಿ ವಂತಿಗೆ ಶೇ. 10

ಕುರಿ ಮತ್ತು ಮೇಕೆ ಘಟಕ

ರೂ. 66,000

ರೂ. 59,000

ರೂ. 6600

ಹಂದಿ ಘಟಕ

ರೂ. 21,000

ರೂ. 18,900

ರೂ. 2100

ಜಾನುವಾರು ವಿಮೆ :-

ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಡಿ ಪ.ಜಾ/ಪ.ಪಂ/ ಸಾಮಾನ್ಯ ವರ್ಗದ ರೈತರ ಒಂದು ವರ್ಷ ಮೇಲ್ಪಟ್ಟ ಮತ್ತು 8 ವರ್ಷದೊಳಗಿನ ಮಣಕ/ಆಕಳು/ಎಮ್ಮೆಗಳನ್ನು ಒಂದು ವರ್ಷ/ಮೂರು ವರ್ಷದ ಅವಧಿಗೆ ಮಾರುಕಟ್ಟೆ ಮೌಲ್ಯದ ಶೇ.2% /6% ಪ್ರೀಮಿಯಂ ದರದಲ್ಲಿ ಗರಿಷ್ಟ ರೂ. 70,000/- ಮೂಲ ಬೆಲೆಯವರೆಗೆ ಕೆಳಕಂಡ ಪ್ರೀಮಿಯಂ ಸಹಾಯಧನದ ದರದಂತೆ ಪ್ರತಿ ಕುಟುಂಬದ ಗರಿಷ್ಟ 5 ಜಾನುವಾರುಗಳಿಗೆ ವಿಮೆ ಸೌಲಭ್ಯ ಒದಗಿಸಲಾಗುತ್ತಿದೆ.

ಫಲಾನುಭವಿಯ ವರ್ಗ

ಸಹಾಯಧನ

ಫಲಾನುಭವಿಯ ವಂತಿಗೆ

ಪ.ಜಾ/ಪ.ಪಂ/ಬಿ.ಪಿ.ಎಲ್

70%

30%

ಎ.ಪಿ.ಎಲ್

50%

50%

ರಾಷ್ಟ್ರೀಯ ಕೃತಕ ಗರ್ಭದಾರಣಾ ಕಾರ್ಯಕ್ರಮ (ಎನ್.ಎ.ಐ.ಪಿ) :-

       ಕೇಂದ್ರ ಪುರಸ್ಕೃತ ಕಾರ್ಯಕ್ರಮವಾಗಿದ್ದು, “ ರಾಷ್ಟ್ರೀಯ ಗೋಕುಲ್‌ ಮಿಶನ್ ” ಯೋಜನೆಯ ರಾಷ್ಟ್ರೀಯ ಕೃತಕ ಗರ್ಭಧಾರಣಾ ಕಾರ್ಯಕ್ರಮದಡಿ, ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲಿ, ರೈತರ ಮನೆ ಬಾಗಿಲಿಗೆ ತೆರಳಿ ಉಚಿತವಾಗಿ ಜಾನುವಾರುಗಳಿಗೆ  ಉನ್ನತ ತಳಿಗಳಾದ ಜರ್ಸಿ‍, ಹೆಚ್.ಎಫ್, ಮುರ್ರಾ ಹಾಗೂ ಸುರ್ತಿ ತಳಿಗಳಿಂದ ಕೃತಕ ಗರ್ಭಧಾರಣೆ ಮಾಡುವ ಕಾರ್ಯಕ್ರಮ.

ಜಲಕೃಷಿ ಮೇವಿನ ಪದ್ಧತಿ:-

 • ಜಾನುವಾರು ಸಂಪನ್ಮೂಲ ನಿರ್ವಹಣೆಯಲ್ಲಿ ಮೇವಿನ ನಿರ್ವಹಣೆ ಅತ್ಯಂತ ಪ್ರಮುಖವಾಗಿದೆ.
 • ಬೇಸಿಗೆ ಮತ್ತು ಬರಗಾಲದ ಪರಿಸ್ಥಿತಿಯಲ್ಲಿ ಮೇವಿನ ಕೊರತೆ ಸಾಮಾನ್ಯವಾಗಿದ್ದು, ಮೇವಿನ ನಿರ್ವಹಣೆ ಕಷ್ಟಸಾಧ್ಯವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಆಧುನಿಕ ತಂತ್ರಜ್ಞಾನವಾದ ಜಲಕೃಷಿ ಮೇವಿನ ಪದ್ದತಿ ಅತ್ಯಂತ ಸೂಕ್ತ ಪರಿಹಾರವಾಗಿರುತ್ತದೆ.
 • ಜಲಕೃಷಿಯಲ್ಲಿ ಮೇವಿನ ಬೆಳೆಯನ್ನು ಬೆಳೆಯುವ ಯಂತ್ರಗಳ ಪ್ರಾತ್ಯಕ್ಷಿಕಾ ಘಟಕಗಳ ಸ್ಥಾಪನೆಗೆ ಹಾಗೂ ರೈತರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಈ ಪದ್ಧತಿಯನ್ನು ಅಳವಡಿಸಿಕೊಂಡು ಹಸಿರು ಮೇವು ಉತ್ಪಾದಿಸುವಂತೆ ಉತ್ತೇಜನ ನೀಡಲು ಯೋಜನೆ ರೂಪಿಸಿದೆ.
 • ಫಲಾನುಭವಿ ವಂತಿಗೆ ರೂ. 1,000/- (ಪ.ಜಾ/ಪ.ಪಂ) ಮತ್ತು ರೂ. 5,675 (ಇತರೆ) ಸರ್ಕಾರದ ವಂತಿಗೆ ರೂ. 55,750/-(ಪ.ಜಾ/ಪ.ಪಂ) ಮತ್ತು ರೂ. 51075/-(ಇತರೆ) ಒಟ್ಟು ಘಟಕದ ವೆಚ್ಚ ರೂ. 56,750/-

ರಾಜ್ಯವಲಯ

ಮೈಸೂರಿನ ಪಿಂಜಾರಾಪೋಲ್ ಮತ್ತು ಇತರೆ ಗೋಶಾಲೆಗಳಿಗೆ ಬೆಂಬಲ ಯೋಜನೆ:-

 • ಸದರಿ ಯೋಜನೆಯಡಿ ಅಶಕ್ತ/ನಿರುಪಯುಕ್ತ ಹಾಗೂ ಅನುತ್ಪಾದಕ ಜಾನುವಾರುಗಳ ರಕ್ಷಣೆ, ಪೋಷಣೆ ಹಾಗೂ ಆರೋಗ್ಯ ಸೇವೆ ಒದಗಿಸುವ ಮುಖ್ಯ ಉದ್ದೇಶವಾಗಿದೆ.
 • ಜಿಲ್ಲೆಯಲ್ಲಿ ಇರುವ ಗೋಶಾಲೆಗಳಿಗೆ ಅನುದಾನ ನೀಡಲಾಗುವುದು. ಪ್ರತಿ ಜಾನುವಾರು ನಿರ್ವಹಣಾ ವೆಚ್ಚ ಪ್ರತಿ ದಿನಕ್ಕೆ ರೂ. 70/- ಇದ್ದು, ಇದರಲ್ಲಿ ಶೇ.25% ಸಹಾಯಧನವಾಗಿ ಸರ್ಕಾರದಿಂದ ನೀಡಲಾಗುವುದು.
 • ಪ್ರತಿ ಗೋಶಾಲೆಗೆ ಮೇವು ಅಭಿವೃದ್ಧಿಗೆ ಪ್ರತಿ ಹೆಕ್ಟೇರ್‍ಗೆ ರೂ. 10,000/- ರಂತೆ ರೂ. 20,000/- ಸಹಾಯಧನ ನೀಡಲಾಗುವುದು.
 • ಪ್ರತಿ ಗೋಶಾಲೆಯಲ್ಲಿ ಜಾನುವಾರುಗಳಿಗೆ ಆರೋಗ್ಯ ನಿರ್ವಹಣೆಗೆ ವರ್ಷಕ್ಕೆ ರೂ. 300/- ರಂತೆ ನೀಡಲಾಗುವುದು.

ಫಲಾನುಭವಿ ಆಧಾರಿತ ಕಾರ್ಯಕ್ರಮ:-

 • ವಿಶೇಷ ಘಟಕ ಯೋಜನೆ: ಈ ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿಯ ಆರ್ಥಿಕ ಮತ್ತು ಸಾಮಾಜಿಕ ದುರ್ಬಲ ವರ್ಗದವರಿಗೆ ಆರ್ಥಿಕ ಸ್ಥಿತಿ ಸುಧಾರಿಸುವ ಉದ್ದೇಶದಿಂದ ಜಾನುವಾರು ಘಟಕಗಳಾದ ಹಸು, ಎಮ್ಮೆ, ಕುರಿ ಮತ್ತು ಮೇಕೆ ಘಟಕಗಳನ್ನು ವಿತರಿಸುವುದು. ಪ್ರತಿ ಘಟಕಕ್ಕೆ ತಗಲುವ ವೆಚ್ಚದಲ್ಲಿ ನಿಯಮಾನುಸಾರ ಸಹಾಯಧನ ಮತ್ತು ಸಾಲದ ರೂಪದಲ್ಲಿ ಬ್ಯಾಂಕ್ ನೆರವು ಒದಗಿಸಲಾಗುವುದು.
 • ಗಿರಿಜನ ಉಪಯೋಜನೆ: ಈ ಯೋಜನೆಯಡಿಯಲ್ಲಿ ಪರಿಶಿಷ್ಟ ಪಂಗಡದ ಆರ್ಥಿಕ ಮತ್ತು ಸಾಮಾಜಿಕ ದುರ್ಬಲ ವರ್ಗದವರಿಗೆ ಆರ್ಥಿಕ ಸ್ಥಿತಿ ಸುಧಾರಿಸುವ ಉದ್ದೇಶದಿಂದ ಜಾನುವಾರು ಘಟಕಗಳಾದ ಹಸು,ಎಮ್ಮೆ, ಕುರಿ ಮತ್ತು ಮೇಕೆ ಘಟಕಗಳನ್ನು ವಿತರಿಸುವುದು. ಪ್ರತಿ ಘಟಕಕ್ಕೆ ತಗಲುವ ವೆಚ್ಚದಲ್ಲಿ ನಿಯಮಾನುಸಾರ ಸಹಾಯಧನ ಮತ್ತು ಸಾಲ ರೂಪದಲ್ಲಿ ಬ್ಯಾಂಕ್ ನೆರವು ಒದಗಿಸಲಾಗುವುದು.
 • ವಿದ್ಯುತ್ ಚಾಲಿತ ಹಾಲು ಕರೆಯುವ ಯಂತ್ರ ಮತ್ತು ಎರಡು ರಬ್ಬರ್ ನೆಲಹಾಸುಗಳನ್ನು ವಿತರಿಸುವ ಕಾರ್ಯಕ್ರಮ: ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆ ಕಾರ್ಯಕ್ರಮದಡಿಯಲ್ಲಿ ಪ್ರತಿ ಫಲಾನುಭವಿಗೆ ಶೇ. 90ರ ಸಹಾಯಧನದಲ್ಲಿ ಒಂದು ವಿದ್ಯುತ್ ಚಾಲಿತ ಹಾಲು ಕರೆಯುವ ಯಂತ್ರ ಮತ್ತು ಎರಡು ರಬ್ಬರ್ ನೆಲಹಾಸುಗಳನ್ನು ನೀಡಲಾಗುವುದು. ಈ ಯೋಜನೆಯ ಉದ್ದೇಶ ಮಿಶ್ರತಳಿ ರಾಸುಗಳಲ್ಲಿ ಕೆಚ್ಚಲು ಬಾವು ತಡೆಗಟ್ಟಲು ಮತ್ತು ಶುದ್ಧ ಹಾಲು ಉತ್ಪಾದನೆಗೆ ಸಹಕಾರಿಯಾಗಿರುತ್ತದೆ. ಉತ್ಪಾದನಾ (ಕೂಲಿ) ವೆಚ್ಚ ಕಡಿಮೆಯಾಗುತ್ತದೆ. ರಾಸುಗಳ ಕಾಲು ಗೊರಸು ಸವೆತ ಕಡಿಮೆಯಾಗುತ್ತದೆ. ರಾಸುಗಳ ಗೆಣ್ಣು ಮತ್ತು ಕೀಲುಗಳ ಸವೆತ ಮತ್ತು ನೋವು ಕಡಿಮೆಯಾಗುತ್ತದೆ. ಒಟ್ಟಾರೆ ಈ ಯೋಜನೆಯಿಂದ ರಾಸುಗಳ ಆರೋಗ್ಯ ಸುಧಾರಣೆಯಾಗಿ ಶುದ್ದ ಹಾಲಿನ ಉತ್ಪಾದನೆಗೆ ಸಹಕಾರಿಯಾಗಿರುತ್ತದೆ.

ಮೇವು ಅಭಿವೃದ್ಧಿ ಯೋಜನೆ:-

 • ಸುಧಾರಿತ ಮೇವು ಉತ್ಪಾದನೆಗೆ ರೈತರಿಗೆ ಉಚಿತವಾಗಿ ಮೇವಿನ ಬೀಜದ ಕಿರುಪೊಟ್ಟಣಗಳನ್ನು ವಿತರಿಸಲಾಗುವುದು. ಸುಧಾರಿತ ಹುಲ್ಲಿನ ಬೇರುಗಳನ್ನು ಸಹ ನೀಡಿ, ಮೇವು ಅಭಿವೃದ್ಧಿಯನ್ನು ಉತ್ತೇಜಿಸಲಾಗುತ್ತಿದೆ.

 ಪಶುಭಾಗ್ಯ ಯೋಜನೆ:-

 • ವಾಣಿಜ್ಯ ಬ್ಯಾಂಕುಗಳಿಂದ ಗರಿಷ್ಟ ರೂ. 1.20 ಲಕ್ಷ ದವರೆಗೆ ಸಾಲ ಪಡೆದು ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಹಸು, ಕುರಿ, ಮೇಕೆ, ಹಂದಿ ಮತ್ತು ಕೋಳಿ ಘಟಕಗಳನ್ನು ಸ್ಥಾಪಿಸಲು ಪ.ಜಾ./ಪ.ಪಂ/ ಸಾಮಾನ್ಯ ವರ್ಗದವರಿಗೆ ಸಹಾಯಧನ ಒದಗಿಸಲಾಗುವುದು.

ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ:-

 • ಸದರಿ ನಿಗಮದಿಂದ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಫಲಾನುಭವಿಗೆ ಕುರಿ ಸಾಕಾಣಿಕೆ ಸಹಾಯಧನ ಯೋಜನೆಯಾಗಿದ್ದು, ಫಲಾನುಭವಿ ವಂತಿಗೆ ರೂ. 4500/- ಸರ್ಕಾರದ ವಂತಿಗೆ ರೂ. 40,500/- ಒಟ್ಟು ಘಟಕದ ವೆಚ್ಚ ರೂ. 45,000/-
 • ಮಾಂಸ ಮಾರಾಟ ಮಳಿಗೆ ಮಾಡತಕ್ಕ ಕುರಿ ಸಹಕಾರ ಸಂಘಗಳಿಗೆ ಸಹಾಯಧನ ನೀಡಲಾಗುವುದು. ಫಲಾನುಭವಿ ವಂತಿಗೆ ರೂ. 5,50,000/- ಸರ್ಕಾರದ ವಂತಿಗೆ ರೂ. 5,50,000/- ಒಟ್ಟು ಘಟಕದ ವೆಚ್ಚ ರೂ. 11,00,000/-
 • ಸಂಚಾರಿ ಕುರಿಗಾರರಿಗೆ ಪರಿಕರ ವಿತರಣೆ ಕಾರ್ಯಕ್ರಮ.

  ಪ್ರಾಣಿ ಕಲ್ಯಾಣ ಸಹಾಯವಾಣಿ:-  (ಸಹಾಯವಾಣಿ ಸಂಖ್ಯೆ: 8277100200)

24/7 ಪ್ರಾಣಿ ಕಲ್ಯಾಣ ಸಹಾಯವಾಣಿ (ವಾರ್‍ ರೂಮ್) ಕಾರ್ಯಕ್ರಮದಡಿಯಲ್ಲಿ ಸಹಾಯವಾಣಿಗೆ ಕರೆ ಮಾಡಿದ ರೈತರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲಾಗುವುದು.

ಪಶು ಸಂಜೀವಿನಿ :-  (ಸಹಾಯವಾಣಿ ಸಂಖ್ಯೆ: 1962)

ಈ ಯೋಜನೆಯಡಿಯಲ್ಲಿ ಅಂಬುಲೆನ್ಸ್ ಸೇವೆ ಕಲ್ಪಿಸಿದ್ದು ರೈತರ ಮನೆ ಬಾಗಿಲಿಗೆ ತಜ್ಞ ಪಶುವೈದ್ಯರುಗಳಿಂದ ಅಗತ್ಯವಿರುವ ಚಿಕಿತ್ಸೆಯನ್ನು ಉಚಿತವಾಗಿ ನೀಡಲು ಕ್ರಮ ವಹಿಸಲಾಗುವುದು.

ಆರ್.ಕೆ.ವಿ.ವೈ.ಮೇವು ಕತ್ತರಿಸುವ ಯಂತ್ರ ವಿತರಿಸುವ ಕಾರ್ಯಕ್ರಮ:- ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಗ್ರಾಮೀಣ ಭಾಗದಲ್ಲಿರುವ ಪ.ಜಾ/ಪ.ಪಂ/ಸಾಮಾನ್ಯ ವರ್ಗದ ರೈತರಿಗೆ 2 ಹೆಚ್.ಪಿ ಸಾಮರ್ಥ್ಯ ಹೊಂದಿರುವ  ಮೇವು ಕತ್ತರಿಸುವ ಯಂತ್ರಕ್ಕೆ ಸಹಾಯಧನ ನೀಡುವ ಕಾರ್ಯಕ್ರಮ

ಪ್ರತಿ ಘಟಕದ ಒಟ್ಟು ವೆಚ್ಚ

ಸಹಾಯ ಧನ ಶೇ.50

ಫಲಾನುಭವಿ ವಂತಿಗೆ ಶೇ.50

ರೂ. 17,990/-

 ರೂ. 8995/-

ರೂ. 8995/-

ಕರ್ನಾಟಕ ರಾಜ್ಯದಲ್ಲಿನ ಜಾನುವಾರುಗಳ ಲಸಿಕಾ ಕಾರ್ಯಕ್ರಮಗಳ ವೇಳಾಪಟ್ಟಿ:-

 • ರಾಷ್ಟ್ರೀಯ ಜಾನುವಾರುಗಳ ರೋಗ ನಿಯಂತ್ರಣ ಕಾರ್ಯಕ್ರಮದಡಿ ಕಾಲು ಬಾಯಿ ಲಸಿಕೆಯನ್ನು ವರ್ಷಕ್ಕೆ 2 ಬಾರಿ ಜಿಲ್ಲೆಯ ಎಲ್ಲಾ ದನ, ಎಮ್ಮೆ ಮತ್ತು ಹಂದಿಗಳಿಗೆ ಉಚಿತವಾಗಿ ನೀಡಲಾಗುವುದು.
 • ರಾಷ್ಟ್ರೀಯ ಜಾನುವಾರುಗಳ ರೋಗ ನಿಯಂತ್ರಣ ಕಾರ್ಯಕ್ರಮದಡಿ ಕಂದು ರೋಗ ಲಸಿಕೆಯನ್ನು ವರ್ಷಕ್ಕೆ 2 ಬಾರಿ ಜಿಲ್ಲೆಯ ಎಲ್ಲಾ ಪ್ರದೇಶದ 4 ರಿಂದ 8 ತಿಂಗಳ ದನ ಮತ್ತು ಎಮ್ಮೆಗಳ ಹೆಣ್ಣು ಕರುಗಳಿಗೆ ಉಚಿತವಾಗಿ ಪ್ರತಿ ಮಾಹೆಯ ಮೊದಲ ವಾರ ನೀಡಲಾಗುವುದು.
 • ಕರುಳುಬೇನೆ ಲಸಿಕೆಯನ್ನು ಪ್ರತಿ ವರ್ಷದ ಜೂನ್ ಮತ್ತು ಡಿಸೆಂಬರ್ ಮಾಹೆಗಳಲ್ಲಿ ಜಿಲ್ಲೆಯ ಎಲ್ಲಾ ಕುರಿ ಮತ್ತು ಮೇಕೆಗಳಿಗೆ ಉಚಿತವಾಗಿ ನೀಡಲಾಗುವುದು.
 • ಪಿ.ಪಿ.ಆರ್ ಲಸಿಕೆಯನ್ನು ಪ್ರತಿ ವರ್ಷದ ಜನವರಿ/ಫೆಬ್ರವರಿ ಮತ್ತು ಜುಲೈ/ಆಗಸ್ಟ್ ಮಾಹೆಗಳಲ್ಲಿ ಜಿಲ್ಲೆಯಲ್ಲಿನ ಈ ಹಿಂದೆ ಲಸಿಕೆ ಮಾಡದೇ ಇರುವ ಮತ್ತು ಹೊಸದಾಗಿ ಜನಿಸಿದ ಕುರಿ ಮತ್ತು ಮೇಕೆ(ಶೇ30) ಗಳಿಗೆ ಉಚಿತವಾಗಿ ನೀಡಲಾಗುವುದು.
 • ಗಳಲೆ ಬೇನೆ ರೋಗದ ಲಸಿಕೆಯನ್ನು ರೋಗ ಪ್ರಕರಣಗಳಿರುವ ಗುಂಪು ಹಳ್ಳಿಗಳಲ್ಲಿನ ಎಲ್ಲಾ ದನ/ಎಮ್ಮೆ/ಕುರಿ/ಮೇಕೆಗಳಿಗೆ ಪ್ರತಿ ವರ್ಷ ಮೇ/ಜೂನ್ ಮತ್ತು ನವೆಂಬರ್/ಡಿಸೆಂಬರ್ ಮಾಹೆಗಳಲ್ಲಿ ಉಚಿತವಾಗಿ ನೀಡಲಾಗುವುದು.
 • ಚಪ್ಪೆ ರೋಗದ ಲಸಿಕೆಯನ್ನು ರೋಗ ಪ್ರಕರಣಗಳಿರುವ ಗುಂಪು ಹಳ್ಳಿಗಳಲ್ಲಿನ ಎಲ್ಲಾ ದನ ಮತ್ತು ಎಮ್ಮೆಗಳಿಗೆ ಪ್ರತಿ ವರ್ಷ ಏಪ್ರಿಲ್ ಮಾಹೆಯಲ್ಲಿ ಉಚಿತವಾಗಿ ನೀಡಲಾಗುವುದು.
 • ನರಡಿ ರೋಗದ ಲಸಿಕೆಯನ್ನು ರೋಗ ಪ್ರಕರಣಗಳಿರುವ ಗುಂಪು ಹಳ್ಳಿಗಳಲ್ಲಿನ ಎಲ್ಲಾ ದನ, ಎಮ್ಮೆ, ಕುರಿ ಮತ್ತು ಮೇಕೆಗಳಿಗೆ ಪ್ರತಿ ವರ್ಷ ಜನವರಿ ಮಾಹೆಯಲ್ಲಿ ಉಚಿತವಾಗಿ ನೀಡಲಾಗುವುದು.
 • ರಾಣಿಕೇಟ್ ಲಸಿಕೆಯನ್ನು ವರ್ಷದ  ಎಲ್ಲಾ ಮಾಹೆಗಳಲ್ಲಿ ಎಲ್ಲಾ ದೇಶೀ ಕೋಳಿಗಳಿಗೆ ನೀಡಲಾಗುವುದು.

ಜಿಲ್ಲಾ ವಲಯ ಫಲಾನುಭವಿ ಆಧಾರಿತ ಕಾರ್ಯಕ್ರಮಗಳು

1. ಒಳನಾಡು ಮೀನುಗಾರಿಕೆ ಅಭಿವೃದ್ಧಿಗೆ ಸಹಾಯ :- 

ವಿಶೇಷ ಘಟಕ ಯೋಜನೆಯಡಿ ಮೀನುಗಾರರ ಸಹಕಾರ ಸಂಘದ ಸದಸ್ಯರು/ಲೈಸೆನ್ಸ್ ಪಡೆದವರಿಗೆ, ಮೀನುಗಾರಿಕೆಯಲ್ಲಿ ತೊಡಗಿದವರಿಗೆ ರೂ. 10,000-00 ಮೌಲ್ಯದ ಮೀನುಗಾರಿಕೆ ಸಲಕರಣೆ ಕಿಟ್ಟು/ಫೈಬರ್ ಗ್ಲಾಸ್ ಹರಿಗೋಲು ವಿತರಣೆ ಮಾಡಲಾಗುವುದು.

ಗಿರಿಜನ ಉಪಯೋಜನೆಯಡಿ ಮೀನುಗಾರರ ಸಹಕಾರ ಸಂಘದ ಸದಸ್ಯರು/ಲೈಸೆನ್ಸ್ ಪಡೆದವರಿಗೆ, ಮೀನುಗಾರಿಕೆಯಲ್ಲಿ ತೊಡಗಿದವರಿಗೆ ರೂ. 10,000-00 ಮೌಲ್ಯದ ಮೀನುಗಾರಿಕೆ ಸಲಕರಣೆ ಕಿಟ್ಟು/ಫೈಬರ್ ಗ್ಲಾಸ್ ಹರಿಗೋಲು ವಿತರಣೆ ಮಾಡಲಾಗುವುದು.

2. ಮೀನು ಮಾರುಕಟ್ಟೆಗಳ ನಿರ್ಮಾಣ ಮತ್ತು ಮೀನು ಮಾರಾಟಕ್ಕೆ ಸಹಾಯ :-

ಮೀನುಗಾರರು ಮೀನನ್ನು ತಾಜಾ ಹಾಗೂ ಆರೋಗ್ಯಕರ ಸ್ಥಿತಿಯಲ್ಲಿ ಮಾರಾಟ ಮಾಡಲು ಅನುಕೂಲವಾಗುವಂತೆ ಶಾಖ ನಿರೋಧಕ ಪೆಟ್ಟಿಗೆ ಮತ್ತು ದ್ವಿಚಕ್ರ/ತ್ರಿಚಕ್ರ/ನಾಲ್ಕು ಚಕ್ರ ವಾಹನ ಖರೀದಿಸಲು ಅವಕಾಶ ಕಲ್ಪಿಸಲಾಗಿದೆ. ಮೀನುಗಾರರ ಸಹಕಾರ ಸಂಘದ ಸದಸ್ಯರು/ಲೈಸೆನ್ಸ್ ಪಡೆದವರಿಗೆ ಮೀನುಗಾರಿಕೆ/ಮೀನು ಮಾರಾಟದಲ್ಲಿ ತೊಡಗಿದವರಿಗೆ ಈ ಸೌಲಭ್ಯ ನೀಡಲಾಗುವುದು. (ಗರಿಷ್ಠ ಮಿತಿಗೊಳಪಟ್ಟು ಘಟಕ ವೆಚ್ಚದ ಶೇಕಡ 25 ರಷ್ಟು)

3. ರಾಜ್ಯದಲ್ಲಿರುವ ಒಳನಾಡು ಜಲಸಂಪನ್ಮೂಲಗಳನ್ನು ಅಭಿವೃದ್ಧಿ ಪಡಿಸಲು ಹೊಸ ಗುತ್ತಿಗೆ ನಿಯಮಾವಳಿಗಳನ್ನು ರೂಪಿಸಿದ್ದು, ಈ ನಿಯಮಾವಳಿ ಪ್ರಕಾರ ಈ ಜಲಸಂಪನ್ಮೂಲಗಳ ಮೀನುಪಾಶುವಾರು ಹಕ್ಕಿನ ಗುತ್ತಿಗೆಯನ್ನು ಪಡೆಯಲು ನೋಂದಾಯಿಸಲ್ಪಟ್ಟ ಮೀನುಗಾರರ ಸಹಕಾರ ಸಂಘಗಳಿಗೆ ಅವಕಾಶ ಕಲ್ಪಿಸಲಾಗಿದೆ. ಕೆರೆಗಳ ಶೇ.50ರ ಜಲ ವಿಸ್ತೀರ್ಣವನ್ನು ಗಣನೆಗೆ ತೆಗೆದುಕೊಂಡು ಪ್ರತಿ ಹೆಕ್ಟೇರ್ ಜಲ ವಿಸ್ತೀರ್ಣಕ್ಕೆ ರೂ.300-00 ರಂತೆ ಹಾಗೂ ಹಿಂದಿನ 3 ವರ್ಷಗಳ ಸರಾಸರಿ ಗುತ್ತಿಗೆ ಮೊತ್ತ, ಇವುಗಳಲ್ಲಿ ಯಾವುದು ಹೆಚ್ಚೋ ಆ ಮೊತ್ತವನ್ನು ಗುತ್ತಿಗೆ ಮೊತ್ತವಾಗಿ ನಿಗದಿಪಡಿಸಿ ಗರಿಷ್ಟ 5 ವರ್ಷಗಳ ಅವಧಿಗೆ ಮೀನುಕೃಷಿಗೆ ನೀಡಲಾಗುವುದು. ಗುತ್ತಿಗೆ ಕೋರದ ಕೆರೆಗಳನ್ನು ಸಾರ್ವಜನಿಕವಾಗಿ ಟೆಂಡರ್ ಕಂ ಹರಾಜು ಮೂಲಕ ವಿಲೇವಾರಿ ಮಾಡಿ ಅಭಿವೃದ್ಧಿ ಪಡಿಸಲಾಗುವುದು.

ರಾಜ್ಯ ವಲಯ ಫಲಾನುಭವಿ ಆಧಾರಿತ ಕಾರ್ಯಕ್ರಮಗಳು

1. ಒಳನಾಡು ಮೀನುಗಾರರಿಗೆ ಮೀನುಗಾರಿಕೆ ಸಲಕರಣೆ ಕಿಟ್ಟು/ಫೈಬರ್ ಗ್ಲಾಸ್ ಹರಿಗೋಲು ವಿತರಣೆ ಯೋಜನೆ :-

       ನದಿ/ಜಲಾಶಯಗಳಲ್ಲಿ ಪರವಾನಿಗೆ ಪಡೆದು ಮೀನುಗಾರಿಕೆ ವೃತ್ತಿ ನಡೆಸುತ್ತಿರುವ ಫಲಾನುಭವಿಗಳಿಗೆ ಮೀನುಗಾರಿಕೆ ಸಲಕರಣೆ ಕಿಟ್ಟು/ಫೈಬರ್ ಗ್ಲಾಸ್ ಹರಿಗೋಲು ಸಹಾಯಧನ ನೀಡಲಾಗುವುದು.  (ರೂ.10,000-00 ಮೌಲ್ಯದ ಪರಿಕರಗಳು)

2. ಮೀನು ಮರಿ ಖರೀದಿ ಸಹಾಯಧನ ಯೋಜನೆ :-

ಪ್ರತಿ ಫಲಾನುಭವಿಗೆ ಕೆರೆಗಳಿಗೆ ಬಿತ್ತನೆ ಮಾಡಲು ಖರೀದಿಸಿದ ಮೀನುಮರಿಗಳ ಮೌಲ್ಯದ ಶೇ.50ರ ಸಹಾಯಧನದಡಿಯಲ್ಲಿ ಗರಿಷ್ಟ ರೂ.5000/- ಮತ್ತು ಶೇ.50ರ ಸಹಾಯಧನದಡಿಯಲ್ಲಿ ಮೀನುಗಾರರ ಸಹಕಾರ ಸಂಘಗಳಿಗೆ ಗರಿಷ್ಟ ರೂ.20,000/- (ಮಿತಿಗೊಳಪಟ್ಟು) ಸಹಾಯಧನ ಹಾಗೂ ಸ್ಪಾನ್ ಖರೀದಿಸಿ ಮೀನುಮರಿ ಪಾಲನೆ ಮಾಡುವ ಕೃಷಿಕರಿಗೆ (ಒಬ್ಬ ಕೃಷಿಕರಿಗೆ ಗರಿಷ್ಟ ರೂ.25,000/-) ಸಹಾಯ ಧನದಂತೆ ಖರೀದಿಸಿದ ಸ್ಪಾನ್ ಮೌಲ್ಯದ ಶೇ.50ರ ಸಹಾಯಧನ ನೀಡಲಾಗುವುದು.

3. ವಿಶೇಷ ಘಟಕ ಯೋಜನೆ/ಗಿರಿಜನ ಉಪಯೋಜನೆ :-

         ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ 2013ರ ಎಸ್.ಸಿ.ಪಿ./ಟಿ.ಎಸ್.ಪಿ. ಕಾಯ್ದೆಯಡಿ ಬಳಕೆಯಾಗದಿರುವ ಅನುದಾನದಡಿ ತ್ರಿಚಕ್ರ ವಾಹನ/ನಾಲ್ಕು ಚಕ್ರದ (ಮಿನಿ ಟ್ರಕ್) ಮೀನು ಸಾಗಾಣಿಕೆ ವಾಹನ ಖರೀದಿಸಲು ಸಹಾಯಧನ ನೀಡಲಾಗುವುದು. (ಘಟಕ ವೆಚ್ಚ ರೂ.3.00 ಲಕ್ಷದಲ್ಲಿ ರೂ.1.80 ಲಕ್ಷ ಸಹಾಯಧನ)

4. ಮೀನುಗಾರಿಕೆ ಸಹಕಾರ ಸಂಘಗಳು ಇಲಾಖೆಯಿಂದ ಗುತ್ತಿಗೆ ಪಡೆದಿರುವ ಕೆರೆಗಳಿಗೆ ಬಲಿತ ಬಿತ್ತನೆ ಮೀನುಮರಿಗಳನ್ನು ದಾಸ್ತಾನು ಮಾಡುವ ಯೋಜನೆಯಡಿ ಪ್ರತಿ ಹೆಕ್ಟೇರ್ ಉಪಯುಕ್ತತಾ ಜಲವಿಸ್ತೀರ್ಣಕ್ಕೆ 2000 ಬಲಿತ ಬಿತ್ತನೆ ಮರಿಗಳಂತೆ ಉಚಿತ ಮೀನುಮರಿ ದಾಸ್ತಾನು ಮಾಡಲಾಗುವುದು.

5. ಕೆರೆಗಳು/ಜಲಾಶಯಗಳ ಅಂಚಿನಲ್ಲಿ ಮೀನುಮರಿ ಪಾಲನೆ :-

ಕೆರೆಗಳು/ಜಲಾಶಯಗಳ ಅಂಚಿನಲ್ಲಿ ಮೀನುಮರಿ ಪಾಲನಾ ಕೊಳಗಳನ್ನು ನಿರ್ಮಿಸಿ ಮೀನುಮರಿ ಪಾಲನೆ ಮಾಡಿ ಅದೇ ಕೆರೆ/ಜಲಾಶಯಕ್ಕೆ ಬಿತ್ತನೆ ಮಾಡುವ ಫಲಾನುಭವಿಗಳಿಗೆ 1.00 ಹೆಕ್ಟೇರ್ ವಿಸ್ತೀರ್ಣದ ಕೊಳಕ್ಕೆ ಹೂಡಿಕೆ ವೆಚ್ಚಕ್ಕಾಗಿ (ಮೀನುಮರಿ, ಗೊಬ್ಬರ, ಆಹಾರ ಇತ್ಯಾದಿಗಳಿಗೆ) ಗರಿಷ್ಟ ರೂ.2.50 ಲಕ್ಷ ಸಹಾಯಧನ ನೀಡಲಾಗುವುದು.

6. ಜಲಾಶಯಗಳಲ್ಲಿ ಮೀನುಮರಿ ಬಿತ್ತನೆ :-

ರಾಜ್ಯದ ಆಯ್ದ ಜಲಾಶಯಗಳಲ್ಲಿ ಬೆರಳುದ್ದದ ಮೀನುಮರಿ (Advanced fingerlings) ಬಿತ್ತನೆ ಮಾಡುವ ಮೂಲಕ ಮೀನುಗಾರಿಕೆ ಅಭಿವೃದ್ಧಿ ಕೈಗೊಳ್ಳುವುದು. ಅಗತ್ಯವಾದ ಬೆರಳುದ್ದದ ಮೀನುಮರಿಗಳನ್ನು ನೊಂದಾಯಿತ ಮೀನುಮರಿ ಸಾಕಾಣಿಕೆದಾರರಿಂದ ಸರ್ಕಾರವು ನಿಗದಿಪಡಿಸಿದ ದರದಲ್ಲಿ ಖರೀದಿಸಲಾಗುವುದು.

7. ಈ ಯೋಜನೆಯಡಿ ವಿಮಾ ಸೌಲಭ್ಯವನ್ನು ಮೀನುಗಾರಿಕೆಯಲ್ಲಿ ತೊಡಗಿರುವಾಗ ನೈಸರ್ಗಿಕ ವಿಕೋಪಗಳಿಂದ ಮರಣ ಹೊಂದಿದ ಮೀನುಗಾರರ ಅವಲಂಬಿತರಿಗೆ ರೂ. 6.00ಲಕ್ಷ ಹಾಗೂ ಶಾಶ್ವತ   ಅಂಗವಿಕಲರಾದ ಮೀನುಗಾರರಿಗೆ ರೂ.2.00 ಲಕ್ಷಗಳ ಪರಿಹಾರ ಮತ್ತು ಭಾಗಶ: ಅಂಗವಿಕಲರಾದವರಿಗೆ ರೂ.1.00 ಲಕ್ಷ ಪರಿಹಾರ ನೀಡಲಾಗುವುದು.

8. ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ ಮತ್ತು  ಮಹಿಳಾ ಮೀನುಗಾರರಿಗೆ ಸಾಲ ಸೌಲಭ್ಯ ನೀಡುವ ಬಗ್ಗೆ:-

            ವಾಣಿಜ್ಯ ಬ್ಯಾಂಕುಗಳಿಂದ ನೀಡುತ್ತಿರುವ ಮಹಿಳಾ ಮೀನುಗಾರರಿಗೆ ರೂ. 50,000/- ಗಳವರೆಗೆ ಶೂನ್ಯ ಬಡ್ಡಿ ದರದಲ್ಲಿ ವಾಣಿಜ್ಯ/ಗ್ರಾಮೀಣ ಪ್ರಾದೇಶಿಕ ಬ್ಯಾಂಕ್ ಗಳಿಂದ ಸಾಲಸೌಲಭ್ಯ ನೀಡಲಾಗುವುದು. ಮೀನುಗಾರರಿಗೆ ಮತ್ತು ಮೀನು ಕೃಷಿಕರಿಗೆ ಕಿಸಾನ್ ಕಾರ್ಡ್ ಯೋಜನೆಯಡಿ ಸಾಲ ಸೌಲಭ್ಯ ನೀಡಲಾಗುವುದು.

9. ಮತ್ಸ್ಯಾಶ್ರಯ ಯೋಜನೆ :

ವಸತಿ ರಹಿತ ಮೀನುಗಾರರಿಗೆ ಅವರ ನಿವೇಶನದಲ್ಲಿ ಮನೆ ಕಟ್ಟಿಕೊಳ್ಳಲು ಸಾಮಾನ್ಯ ವರ್ಗದವರಿಗೆ ರೂ.1.20 ಲಕ್ಷ ಹಾಗೂ ಪರಿಶಿಷ್ಟ ಜಾತಿ/ಪಂಗಡದ ಫಲಾನುಭವಿಗಳಿಗೆ ರೂ.1.75 ಲಕ್ಷ ಅನುದಾನ ನೀಡಲಾಗುವುದು.

ಕೇಂದ್ರ ವಲಯ ಯೋಜನೆಗಳು

1. ಪ್ರಧಾನ ಮಂತ್ರಿ ಮತ್ಸ್ಯಸಂಪದ ಯೋಜನೆ (PMMSY):

ಇದು ಕೇಂದ್ರ ಪುರಸ್ಕೃತ ಯೋಜನೆಯಾಗಿದ್ದು, 2020-21 ರಿಂದ ಪ್ರಾರಂಭವಾಗಿದ್ದು, ಪಂಚವಾರ್ಷಿಕ ಯೋಜನೆಯಾಗಿದೆ. ಈ ಯೋಜನೆಯಲ್ಲಿ ಮೀನುಗಾರಿಕೆಗೆ ಸಂಬಂಧಿಸಿದ ವಿವಿಧ ಘಟಕಗಳಿಗೆ ಸಹಾಯಧನ ನೀಡುವ ಅವಕಾಶವಿದ್ದು, ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ಘಟಕ ವೆಚ್ಚದ ಮೇಲೆ ಶೇಕಡ 40ರಷ್ಟು ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಮಹಿಳಾ ಫಲಾನುಭವಿಗಳಿಗೆ ಶೇಕಡ 60ರಷ್ಟು ಸಹಾಯಧನ ನೀಡಲು ಅವಕಾಶವಿರುತ್ತದೆ.

     ವಿವಿಧ ಘಟಕಗಳಿಗೆ ನೀಡುವ ಸಹಾಯಧನದ ವಿವರಗಳನ್ನು ಈ ಕೆಳಗೆ ನೀಡಲಾಗಿದೆ.

ಪ್ರಧಾನ ಮಂತ್ರಿ ಮತ್ಸ್ಯಸಂಪದ ಯೋಜನೆಯ ಕೇಂದ್ರ ಪುರಸ್ಕೃತ ಘಟಕಗಳ ಅಡಿಯಲ್ಲಿ ಫಲಾನುಭವಿ ಆಧಾರಿತ ಯೋಜನೆಗಳು
ಕ್ರ. ಸಂ ಉಪ ಯೋಜನೆಗಳ ವಿವರ ಘಟಕ ಘಟಕ ವೆಚ್ಚ (ರೂ. ಲಕ್ಷ) ಸರ್ಕಾರದ ಸಹಾಯಧನ (ರೂ. ಲಕ್ಷ)
ಸಾಮಾನ್ಯ ವರ್ಗ (40%) ಎಸ್ ಸಿ/ಎಸ್ ಟಿ/ ಮಹಿಳೆಯರಿಗೆ (60%)
ಅ) ಉತ್ಪಾದನೆ ಮತ್ತು ಉತ್ಪಾದಕತೆಯ ವರ್ಧನೆಗೆ ಸಂಬಂಧಿಸಿದ ಯೋಜನೆಗಳು 
1 ಒಳನಾಡು ಮೀನುಗಾರಿಕೆ ಮತ್ತು ಜಲಕೃಷಿ ಅಭಿವೃದ್ಧಿ        
1.1 ಮೀನು ಮರಿ ಉತ್ಪಾದನಾ ಕೇಂದ್ರಗಳ ಸ್ಥಾಪನೆ ಸಂಖ್ಯೆ 25.00 10.00 15.00
1.2 ಸೀಗಡಿ ಮೀನು ಮರಿ ಉತ್ಪಾದನಾ ಕೇಂದ್ರಗಳ ಸ್ಥಾಪನೆ ಸಂಖ್ಯೆ 50.00 20.00

30.00

1.3 ಮೀನುಮರಿ ಪಾಲನೆ ಕೊಳಗಳ ನಿರ್ಮಾಣ ಹೆಕ್ಟೇರ್ 7.00

2.80

4.20
1.4 ಮೀನುಕೃಷಿ ಕೊಳಗಳ ನಿರ್ಮಾಣ ಹೆಕ್ಟೇರ್ 7.00 2.80 4.20
1.5 ಸಮಗ್ರ ಮೀನುಕೃಷಿ, ಸ್ಯ್ಕಾಂಪಿ, ಪಂಗಾಸಿಯಸ್,ತಿಲಾಪಿಯಾ ಸೇರಿದಂತೆ ಸಿಹಿ ನೀರಿನ ಜಲಕೃಷಿಗೆ ಹೂಡಿಕೆ ವೆಚ್ಚಗಳು ಹೆಕ್ಟೇರ್ 4.00 1.60 2.40
1.6 ಜೌಗು ಮತ್ತು ಜೌಳು ಭೂಮಿಯಲ್ಲಿ ಮೀನುಕೊಳಗಳ ನಿರ್ಮಾಣ ಹೆಕ್ಟೇರ್ 8.00 3.20 4.80
1.7 ಜೌಗು ಮತ್ತು ಜೌಳು ಭೂಮಿಯಲ್ಲಿ ಮೀನುಕೃಷಿಕೆ ಹೂಡಿಕೆ ವೆಚ್ಚ ಹೆಕ್ಟೇರ್ 6.00 2.40 3.60
1.8 ಘಟಕ ವೆಚ್ಚದಲ್ಲಿ ರೂ. 8.00ಲಕ್ಷ ಹೂಡಿಕೆ ವೆಚ್ಚ ಸೇರಿದಂತೆ ಹಿನ್ನೀರು/ಜೌಗು ಮತ್ತು ಜೌಳು ಭೂಮಿಯಲ್ಲಿ ಬಯೋಫ್ಲೋಕ್ ಕೊಳಗಳ ನಿರ್ಮಾಣ ಹೆಕ್ಟೇರ್ 18.00 7.20 10.80
1.9 ಒಳನಾಡಿನಲ್ಲಿ ಬಯೋಫ್ಲೋಕ್ ಕೊಳಗಳ ನಿರ್ಮಾಣ, (ಹೆಕ್ಟರ್ ಗೆ 4.00ಲಕ್ಷ ರೂ. ಹೂಡಿಕೆ ವೆಚ್ಚ ಸೇರಿದಂತೆ) 0.1 ಹೆಕ್ಟೇರ್ 14.00 5.60 8.40
1.10 ಜಲಾಶಯಗಳಲ್ಲಿ ಬಲಿತ ಮೀನುಗಳ ದಾಸ್ತಾನು @1000ಬಲಿತ ಬಿತ್ತನೆ ಮರಿ/(ಹೆ) (ರೂ.3.00ಲಕ್ಷ/ಒಂದು ಲಕ್ಷ ಬಿತ್ತನೆ ಮರಿ) 0.1 ಹೆಕ್ಟೇರ್ 3.00 1.20 1.80
1.13 ವೆಟ್ ಲ್ಯಾಂಡ್ ಗಳಲ್ಲಿ ಬಲಿತ ಮೀನುಗಳ ದಾಸ್ಥಾನು @1000ಬಲಿತ ಬಿತ್ತನೆ ಮರಿ/(ಹೆ) (ರೂ.3.00ಲಕ್ಷ/ಒಂದು ಲಕ್ಷ ಬಿತ್ತನೆ ಮರಿ ಹೆಕ್ಟೇರ್ 3.00 1.20 1.80
2 ಅಲಂಕಾರಿಕಾ ಮತ್ತು ಮನರಂಜನಾ ಮೀನುಗಾರಿಕೆಯ ಅಭಿವೃದ್ಧಿ
2.1 ಬ್ಯಾಕ್ಯಾರ್ಡ್ ಅಲಂಕಾರಿಕಾ ಮೀನು ಸಾಕಾಣಿಕೆ ಘಟಕ (ಒಳನಾಡು) ಸಂಖ್ಯೆ 3.00 1.20 1.80
2.2 ಮಧ್ಯಮ ಪ್ರಮಾಣದ ಅಲಂಕಾರಿಕಾ ಮೀನು ಸಾಕಾಣಿಕೆ ಘಟಕ (ಒಳನಾಡು) ಸಂಖ್ಯೆ 8.00 3.20 4.80
2.3 ಸಮಗ್ರ ಅಲಂಕಾರಿಕಾ ಮೀನು ಸಾಕಾಣಿಕ ಘಟಕ  (ಸಿಹಿ ನೀರಿನ ಮೀನುಗಳಿಗೆ ಸಂತಾನೋತ್ಪತ್ತಿ ಮತ್ತು ಪಾಲನೆ) ಸಂಖ್ಯೆ 25.00 10.00 15.00
2.4

ಸಿಹಿ ನೀರಿನ ಅಲಂಕಾರಿಕ ತಾಯಿ ಮೀನು ಬ್ಯಾಂಕ್ ಸ್ಥಾಪನೆ

ಸಂಖ್ಯೆ 100.00 40.00 60.00
2.5 ಕ್ರೀಡಾ ಮೀನುಗಾರಿಕೆ ಸಂಖ್ಯೆ 50.00 20.00 30.00
3 ತಂತ್ರಜ್ಞಾನದ ಅಳವಡಿಕೆ
3.1 ಬೃಹತ್ ಆರ್.ಎ.ಎಸ್. ಸ್ಥಾಪನೆ (ಕನಿಷ್ಠ 90m3 ಟ್ಯಾಂಕ್ ಸಾಮರ್ಥದ 8 ಟ್ಯಾಂಕ್ ಗಳು 40 ಟನ್/ಬೆಳೆ) ಅಥವಾ ಬಯೋಪ್ಲಾಕ್ (4ಮೀ. ಡಯಾ 50 ಟ್ಯಾಂಕ್ ಗಳು ಮತ್ತು 1.5ಮಿ ಎತ್ತರದ) ಘಟಕ ಸಂಖ್ಯೆ 50.00 20.00 30.00
3.2 ಮಧ್ಯಮ  ಆರ್.ಎ.ಎಸ್ ಸ್ಥಾಪನೆ (ಕನಿಷ್ಠ 30 m3 ಟ್ಯಾಂಕ್ ಸಾಮರ್ಥ್ಯದ 6 ಟ್ಯಾಂಕ್ ಗಳು 10 ಟನ್/ಬೆಳೆ) ಅಥವಾ ಬಯೋಫ್ಲಾಕ್ (4ಮೀ. 1 ಡಯಾ 1.ಮಿ ಎತ್ತರದ 25 ಟ್ಯಾಂಕ್ ಗಳು) ಸಂಖ್ಯೆ 25.00 10.00 15.00
3.3 ಸಣ್ಣ ಆರ್.ಎ.ಎಸ್. ಸ್ಥಾಪನೆ (100 m 1ಟ್ಯಾಂಕ್ ಅಥವಾ ಬಯೋಫ್ಲಾಕ್ (4ಮೀ,ಡಯಾ 1.5ಮೀ ಎತ್ತರದ 7 ಟ್ಯಾಂಕ್ ಗಳು) ಘಟಕವನ್ನು ಸ್ಥಾಪಿಸುಸುವುದು ಸಂಖ್ಯೆ 7.50 3.00 4.50
3.4 ಬ್ಯಾಕ್ಯಾರ್ಡ್ ಮಿನಿ ಆರ್ ಎ ಎಸ್ ಘಟಕಗಳ ಸ್ಥಾಪನೆ ಸಂಖ್ಯೆ 0.50 0.20 0.30
3.5 ಜಲಾಶಯಗಳಲ್ಲಿ  ಪಂಜರಗಳ ಸ್ಥಾಪನೆ ಸಂಖ್ಯೆ 3.00 1.20 1.80
3.6 ತೆರೆದ ಜಲ ಪ್ರದೇಶಗಳಲ್ಲಿ ಪೆನ್ ನಿರ್ಮಿಸಿ ಮೀನುಕೃಷಿ ಹೆಕ್ಟೇರ್ 3.00 1.20 1.80
ಆ) ಮೂಲಭೂತ ಸೌಕರ್ಯ ಮತ್ತು ಹಿಡುವಳಿ ನಂತರದ ಚಟುವಟಿಕೆಗಳು
  ಹಿಡುವಳಿ ನಂತರದ ಶೀತಲ ಸರಪಳಿ ಮೂಲ ಸೌಕರ್ಯ
4 ಶೈತ್ಯಾಗಾರ/ಮಂಜುಗಡ್ಡೆ ಘಟಕಗಳ ನಿರ್ಮಾಣ
4.1

ಕನಿಷ್ಠ 10 ಟನ್ ಸಂಗ್ರಹ ಸಾಮರ್ಥ್ಯದ ಘಟಕ

ಸಂಖ್ಯೆ 40.00 16.00 24.00
4.2

ಕನಿಷ್ಠ 20 ಟನ್ ಸಂಗ್ರಹ ಸಾಮರ್ಥ್ಯದ ಘಟಕ

ಸಂಖ್ಯೆ 80.00 32.00 48.00
4.3

ಕನಿಷ್ಠ 30 ಟನ್ ಸಂಗ್ರಹ ಸಾಮರ್ಥ್ಯದ ಘಟಕ

ಸಂಖ್ಯೆ 120.00 48.00 72.00
4.4

ಕನಿಷ್ಠ 50 ಟನ್ ಸಂಗ್ರಹ ಸಾಮರ್ಥ್ಯದ ಘಟಕ

ಸಂಖ್ಯೆ 150.00 60.00 90.00
4.5 ಶೈತ್ಯಾಗಾರ/ಮಂಜುಗಡ್ಡೆ ಸ್ಥಾವರಗಳ ಆಧುನೀಕರಣ ಸಂಖ್ಯೆ 50.00 20.00 30.00
4.6 ಶೈತ್ಯೀಕರಿಸಿದ ವಾಹನಗಳು ಸಂಖ್ಯೆ 25.00 10.00 15.00
4.7 ಶಾಖ ನಿರೋಧಕ ವಾಹನಗಳು ಸಂಖ್ಯೆ 20.00 8.00 12.00
4.8 ಐಸ್ ಬಾಕ್ಸ್ನೊಂದಿಗೆ ಮೋಟಾರ್ ಸೈಕಲ್ ಸಂಖ್ಯೆ 0.75 0.30 0.45
4.9 ಮಿನು ಮಾರಾಟಕ್ಕಾಗಿ ಇ-ರಿಕ್ಷಾಗಳನ್ನು ಒಳಗೊಂಡಂತೆ ಐಸ್ ಬಾಕ್ಸ್ ಹೊಂದಿರುವ ತ್ರಿಚಕ್ರ ವಾಹನ ಸಂಖ್ಯೆ 3.00 1.20 1.80
4.10 ಜೀವಂತ ಮೀನು ಮಾರಾಟ ಕೇಂದ್ರಗಳು ಸಂಖ್ಯೆ 20.00 8.00 12.00
5 ಮೀನು ಆಹಾರ ತಯಾರಿಕಾ ಘಟಕ
5.1 ಸಣ್ಣ ಗಾತ್ರದ ಮೀನು ಆಹಾರ ಉತ್ಪಾದನೆಯ ತಯಾರಿಕಾ ಘಟಕ (ದಿನಕ್ಕೆ 2 ಟನ್ ಸಾಮರ್ಥ್ಯ) ಸಂಖ್ಯೆ 30.00 12.00 18.00
5.2 ಮಧ್ಯಮ ಗಾತ್ರದ ಮಿನು ಆಹಾರ ಉತ್ಪಾದನೆಯ ಘಟಕ (ದಿನಕ್ಕೆ 8 ಟನ್ ಸಾಮರ್ಥ್ಯ) ಸಂಖ್ಯೆ 100.00 40.00 60.00
5.3 ದೊಡ್ಡ ಗಾತ್ರದ ಮಿನು ಆಹಾರ ಉತ್ಪಾದನೆಯ ಘಟಕ (ದಿನಕ್ಕೆ 20 ಟನ್ ಸಾಮರ್ಥ್ಯ) ಸಂಖ್ಯೆ 200.00 80.00 120.00
5.4

ಮಿನು ಆಹಾರ ಉತ್ಪಾದನೆಯ ಘಟಕ (ದಿನಕ್ಕೆ 100 ಟನ್ ಸಾಮರ್ಥ್ಯ)

ಸಂಖ್ಯೆ 650.00 260.00 390.00
6 ಮೀನು ಮಾರುಕಟ್ಟೆಗಳು ಮತ್ತು ಮಾರಾಟ ಮೂಲ ಸೌಕರ್ಯ
6.1 ಅಲಂಕಾರಿಕ ಮೀನು/ಅಕ್ವೇರಿಯಂ ಮಾರುಕಟ್ಟೆಗಳು ಸೇರಿದಂತೆ ಮೀನು ಚಿಲ್ಲರೆ ಮಾರುಕಟ್ಟೆಗಳ ನಿರ್ಮಾಣ ಸಂಖ್ಯೆ 100.00 40.00 60.00
6.2 ಅಕ್ವೇರಿಯಂ/ಅಲಂಕಾರಿಕ ಮೀನುಗಳ ಕಿಯೋಸ್ಕ್ ಸೇರಿದಂತೆ ಮೀನು ಕಿಯೋಸ್ಕ್ ಗಳ ನಿರ್ಮಾಣ ಸಂಖ್ಯೆ 10.00 4.00 6.00
6.3 ಮೀನು ಮೌಲ್ಯದ ಉದ್ಯಮ ಘಟಕಗಳು ಸೇರಿ ಸಂಖ್ಯೆ 50.00 20.00 30.00
6.4 ವಿಸ್ತರಣೆ ಮತ್ತು ಬೆಂಬಲ ಸೇವೆಗಳ (ಮತ್ಸ್ಯ ಸೇವಾ ಕೇಂದ್ರ ಸ್ಥಾಪನೆ) ಸಂಖ್ಯೆ 25.00 10.00 15.00