ಮುಚ್ಚಿ

ಪೊಲೀಸ್ ಇಲಾಖೆ

ಪೀಠಿಕೆ

          ಕರ್ನಾಟಕದಾದ್ಯಂತ ತೋಟಿಗಳು, ತಳವಾರು, ಉಂಬಳಿದಾರರು, ಕಟ್ಟುಬಿಡಿ, ನೀರಗಂಟಿಯನ್ನು ಈಗ ಆರಕ್ಷಕರೆಂದು ಕರೆಯುತ್ತಾರೆ. ಆದರೆ ಇವರು ರಾಜ್ಯದ ಒಂದೊಂದು ಭಾಗದಲ್ಲಿ ಒಂದೊಂದು ಹೆಸರಿನಿಂದ ಕರೆಯುವ ಕಾಲವಿತ್ತು. ತೋಟಿಗಳು, ತಳವಾರು, ಉಂಬಳಿದಾರರು, ಕಟ್ಟುಬಿಡಿ, ನೀರಗಂಟಿ ಮುಂತಾದವರೆಲ್ಲ ಒಮ್ಮೆ ಈಗ ಆರಕ್ಷಕರು ನಿರ್ವಹಿಸುತ್ತಿರುವ ಕಾರ್ಯವನ್ನು ನಿರ್ವಹಿಸುತ್ತಿದ್ದುದರ ಜೊತೆಗೆ ಇತರ ಸರ್ಕಾರಿ ಕೆಲಸಗಳು ಸಹ ಮಾಡಬೇಕಿತ್ತು. ಈಗಿರುವ ಪೊಲೀಸ್ ವ್ಯವಸ್ಥೆಗೆ ಅಡಿಪಾಯ ಹಾಕಿದ್ದು, ಹಿಂದೆ ಪ್ರಥಮ ಐಜಿಪಿ ನೇಮಕಗೊಂಡಾಗ, ನಮ್ಮ ಪೊಲೀಸ್ ವ್ಯವಸ್ಥೆಗೆ ನಿಷ್ಪಕ್ಷಪಾತವಾದ ಸಂಸ್ಥೆಯಾಗಿ ಬೆಳೆದು ಹೆಮ್ಮರವಾಗಿದೆ.

ಇತಿಹಾಸ

1956 ರಲ್ಲಿ ಕರ್ನಾಟಕ ರಾಜ್ಯ ಅಸ್ತಿತ್ವಕ್ಕೆ ಬಂತು, 1985ರ  ನವೆಂಬರ್ -1 ರಲ್ಲಿ ರಾಜ್ಯದ ಪೊಲೀಸ್ ಪಡೆಯ ಪ್ರಥಮ ಆರಕ್ಷಕ ಮಹಾ ನಿರೀಕ್ಷಕರನ್ನು ನೇಮಕ ಮಾಡಲಾಯಿತು, ಅವರೇ  ಶ್ರೀ ಎಲ್ ರಿಕೆಟ್ಸ್, ರಿಕೆಟ್ಸ್ ಆರಕ್ಷಕ ಮಹಾ ನಿರೀಕ್ಷಕ  ಅಂದರೆ ಇನಸ್ ಪೆಕ್ಟರ್ ಜನರಲ್ ಆಫ್ ಪೊಲೀಸ್ ಆಗಿ ಅಧಿಕಾರ ಸ್ವೀಕರಿಸುವುದಕ್ಕೆ ಮುನ್ನ ರಾಜ್ಯದ ರಕ್ಷಣಾಧಿಕಾರಿಗಳಿಗೆ ಈಗಿರುವ ಸ್ಥಾನಮಾನ, ರೂಪ, ಅಧಿಕಾರ ಮುಂತಾದವೇನೂ ಇರಲಿಲ್ಲ. 1838ನೇ ಇಸವಿಯ ವರದಿಯ ಪ್ರಕಾರ ಪೊಲೀಸರು ನಿರ್ವಹಿಸಬೇಕಾದ ಕಾರ್ಯಗಳನ್ನು ತಳವಾರರು, ತೋಟಿಗಳು, ನೀರಗಂಟಿಗಳು, ಕಾವಲುಗಾರರು, ಅಮರಗಾರರು, ಅಂಕಮಾಲೆ, ಪಟೇಲ, ಶ್ಯಾನುಭೋಗ, ಮುಂತಾದವರು  ನಿರ್ವಹಿಸುತ್ತಿದ್ದರು.

ಕಂದಾಚಾರ

ಹಳೇ ಮೈಸೂರು ಸಂಸ್ಥಾನಕ್ಕೆ, ಕೃಷ್ಣರಾಜ ಒಡೆಯರ್ ಮಹಾರಾಜರು ( 1799-1811) ಬ್ರಿಟೀಶ್ ಸರ್ಕಾರ ಪೂರ್ಣಯ್ಯ ನವರನ್ನು ದಿವಾನರನ್ನಾಗಿ ನೇಮಿಸಿತು. ಹುಕುಂ ನಾಮ ಇಲ್ಲವೇ ಕಂದಾಚಾರ ಪೊಲೀಸ್ ವ್ಯವಸ್ಥೆ ಜಾರಿಗೆ ಬಂತು ಮಹಾರಾಜರ ಸೈನ್ಯ ಪಡೆಎ ( ಇನ್ವೆಂಟ್ರಿ –ಕಾವಲಿ) ಸೇರಿದ ಜವಾನರು, ಪೇದೆಗಳು ಪೊಲೀಸ್ ಜವಾಬ್ದಾರಿ ವಹಿಸಿಕೊಂಡರು. ಯುರೋಪಿಯನ್ ಸೈನಿಕರೇ ಇದರ ಮೇಲ್ವಿಚಾರಕರು. ತಾಲ್ಲೂಕಿನಲ್ಲಿ ಕಂದಾಯ ಅಧಿಕಾರಿಯಾಗಿದ್ದ ಅಮಾಲ್ದಾರರೇ ( ಈಗಿನ ತಹಸಿಲ್ದಾರ) ಪೊಲೀಸ್ ಮುಖ್ಯಸ್ಥರು. ಇವರಿಗೆ  ಪೌಜದಾರರು, ಸಹಾಯಕರು, ರೈತರಿಂದ ಕಂದಾಯ ವಸೂಲಿ ಕೆಲಸವೂ ಇವರದೇ. ತಳವಾರ ತೋಟಿಗಳು, ಕಾವಲುಗಾರ ಹೀಗೆ ಬೇರೆ ಬೇರೆ ಹೆಸರಿನಲ್ಲಿ ಪೊಲೀಸ್ ವ್ಯವಸ್ಥೆಯನ್ನು ಕರೆಯಲಾಗುತ್ತಿತ್ತು. 1817 ರಲ್ಲಿ ಬಂಗಾಲ ರೆಗ್ಯೂಲೇಷನ್ ಮಾದರಿಯ ಕಾನೂನು ಪದ್ದತಿ ಬಂತು. ಪಟೇಲ್, ಶಾನುಭೋಗರು ಪೊಲೀಸ್ ಜವಾಬ್ದಾರಿ ಹೊತ್ತರು. ಆದರೆ ಇವರಿಗೆ ಸಂಬಳ, ರಜೆ, ವಾಹನ ಸೌಲಭ್ಯ ( ಬಂಡಿ) ಇರಲಿಲ್ಲ. ಇದರ ಬದಲು ಇವರಿಗೆ ಮಹಾರಾಜರಿಂದ ಇನಾಮ್  ( ಭಕ್ಷೀಸ್) ರೂಪದಲ್ಲಿ ಜಮೀನು ಇಲ್ಲವೇ ಆಹಾರ ಧಾನ್ಯ ನೀಡುತ್ತಿದ್ದರು. 1853  ರಲ್ಲಿ ಇಡೀ ದೇಶಾದ್ಯಂತ ಪೊಲೀಸ್ ಶಾಸನ ಜಾರಿಗೆ ಬರುತ್ತಿದ್ದಂತೆಯೇ ಸರ್ ಮಾರ್ಕ್ಸ್ ಕಬ್ಬನ್ ಕಮಿಷನರ್ ಆಗಿ ನೇಮಕಗೊಂಡರು. 08 ಜಿಲ್ಲೆಗಳನ್ನು 03  ಡಿವಿಷನ್ ಗಳಾಗಿ ವೀಂಗಡಿಸಿ, ಜಿಲ್ಲೆ ಗಳಿಗೆ ಜಿಲ್ಲಾಧಿಕಾರಿ ( ಡೆಪ್ಯುಟಿ ಕಮಿಷನರ್ ) ಸೂಪರಿಂಟೆಂಡೆಂಟ್ ರವರ ನೇಮಕ ಮಾಡಲಾಗಿತ್ತು. ಜಿಲ್ಲಾಧಿಕಾರಿ ಇಲ್ಲವೇ ಪೊಲೀಸ್ ಸೂಪರಿಂಟೆಂಡೆಂಟ್ ರವರಿಗೆ ಯಾವುದೇ ತರಬೇತಿ ಇರಲಿಲ್ಲ. ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯೇ ಪೊಲೀಸ್ ಮುಖ್ಯಸ್ಥ. ಪೊಲೀಸ್ ಸೂಪರಿಂಟೆಂಡೆಂಟ್ ಜಿಲ್ಲಾಧಿಕಾರಿಗೆ ಸಹಾಯಕರಾಗಿದ್ದರು.

ಮಂತ್ರಿ

       1912 ರಲ್ಲಿ ಐಜಿಪಿ ಆಗಿದ್ದ ಡಿ. ದೇವರಾಜ್ ಅರಸು ವೆಲ್ಲೂರಿಗೆ ಹೋಗಿ ಅಲ್ಲಿಯ ಪೊಲೀಸ್ ತರಬೇತಿ ಶಾಲೆಯ ಶಿಕ್ಷಣ ಪದ್ದತಿ ಅಭ್ಯಸಿಸಿದರು.  ಇವರ ಕಾಲದಲ್ಲಿ ಬೆಂಗಳೂರು ಪೊಲೀಸ್ ತರಬೇತಿ ಶಾಲೆ ಅನೇಕ ಬದಲಾವಣೆಗಳನ್ನು ಕಂಡಿತು.  ಅನಂತರ ಬಂದ ಸಿ. ಶ್ರೀಕಾತೇಶ್ವರ ಅಯ್ಯರ್ ತರಬೇತಿ ಶಾಲೆಗೆ ಕ್ರಿಮಿನಾಲಜಿ ಮ್ಯೂಸಿಯಂ ಒದಗಿಸಿದರು.  ಐಜಿಪಿ ದೇವರಾಜ್ ಅರಸರಿಗ ಬಡ್ತಿ ಸಿಕ್ಕಾಗ ಅವರು ಕೌನ್ಸಿಲರ್ಶಿಪ್ (ಸಂಪುಟ) ಸೇರಿದರು. ಐಜಿಪಿಗಳಲ್ಲಿ ಮಂತ್ರಿ ಆದವರ ಪೈಕಿ ಇವರೇ ಮೊದಲಿಗರು ಎಂದು ಹೇಳ ಬಹುದು. 1930 ರಲ್ಲಿ ಎಫ್.ಎ. ಹ್ಯಾಮಿಲ್ಸನ್ ಅಧಿಕಾರಕ್ಕೆ ಬಂದರು.  ಸುಮಾರು ಎಂಟು ವರ್ಷ ಐಜಿಪಿ ಆಗಿದ್ದರು.  ಇವರ ಅಧಿಕಾರ ಅವಧಿಯಲ್ಲಿ ಪೊಲೀಸ್ ಇಲಾಖೆ ಬಹುತೇಕ ಬದಲಾವಣೆ ಕಂಡಿತು.  ಕಾಲ ಉರುಳಿದಂತೆ ಎತ್ತಿನಬಂಡಿ, ಟಾಂಗಾಗಳ ಸಂಖ್ಯೆ ಹೆಚ್ಚಿತು.  ರಸ್ತೆಗೆ ಸೈಕಲ್ ಗಳು ಇಳಿದವು. ಕಾರುಗಳ ಓಡಾಟ ಪ್ರಾರಂಭ.  ರಸ್ತೆ ಸಂಚಾರ ನಿಯಂತ್ರಣದ ಸಮಸ್ಯೆ ಉದ್ಬವಿಸಿತು. ಹ್ಯಾಮಿಲ್ಟನ್ ಆಗ ಮೈಸೂರು, ಬೆಂಗಳೂರು ನಗರಗಳಲ್ಲಿ ಸಂಚಾರ ವಿಭಾಗ ರಚಿಸಿದರು.  ಅಲಸೂರು ಗೇಟ್, ಉಪ್ಪಾರ ಪೇಟೆ ಹಾಗು ಕಲಾಸಿಪಾಳ್ಯ ಪೊಲೀಸ್ ಠಾಣೆಗಳು ಸಂಚಾರ ನಿಯಂತ್ರಣದ ಜವಾಬ್ದಾರಿ ಹೊತ್ತವು.  ಮೈಸೂರು ನಗರದಲ್ಲಿ ಯುರೋಪಿಯನ್ ಹೆಡ್ ಕಾನ್ಸ್ ಟೇಬಲ್ ಸಂಚಾರ ವಿಭಾಗದ ಮುಖ್ಯಸ್ಥರಾದರು.  ಆದರೂ ಇವರ ಸಂಬಳ, ಭತ್ಯೆಗೆ ಅಮಲ್ದಾರರ ಸಹಿ ಬೇಕೇ ಬೇಕಾಗಿತ್ತು.  ಕ್ರಮೇಣ ಎರಡು  ನಗರಗಳಲ್ಲಿ ಪೊಲೀಸ್ ಪೇದೆಗಳಿಗೆ ಸೈಕಲ್ ಸೌಲಭ್ಯ ಒದಗಿತು.  ಬೆಂಗಳೂರಿನ ಪೇದೆಗಳು ತಿಂಗಳಿಗೆ 7 ರೂ.80 ಪೈಸೆ ಸೈಕಲ್ ಭತ್ಯೆ ನಿಗಧಿಪಡಿಸಲಾಯಿತು.

ನ್ಯಾಯಾಂಗ ವ್ಯವಸ್ಥೆ

1856 ರಲ್ಲಿ ನ್ಯಾಯಾಂಗ ವ್ಯವಸ್ಥೆಗಾಗಿ ಆಲೋಚನೆ ಆಗ ಜ್ಯುಡಿಶಿಯಲ್ ಕಮಿಷನನ್ನರ ನೇಮಕ. ಜ್ಯುಡಿಶಿಯಲ್ ಕಮಿಶನರ್ ರು ಇನ್ಸ್ ಪೆಕ್ಟರ್ ಜನರಲ್ ರವರನ್ನು ನೇಮಿಸಿದರು, 1873 ರಲ್ಲಿ ಅವರಿಗೆ ಸಹಾಯಕರಾಗಿ ಡಿಐಜಿ ಒಬ್ಬರು ನೇಮಕಗೊಂಡರು. ಇದೇ ಅವಧಿಯಲ್ಲಿ ಫಸ್ಟ್ ಕ್ಲಾಸ್ ಇನ್ಸ್ ಪೆಕ್ಟರ್, ಸೆಕೆಂಡ್ ಕ್ಲಾಸ್ ಇನ್ಪೆಪೆಕ್ಟರ್, ಜಮಾದಾರ್, ದೆಫೇದಾರ್, ಹುದ್ದೆಗಳನ್ನು ರಚಿಸಲಾಯಿತು. ಜಿಲ್ಲಾಧಿಕಾರಿಗೆ ಶಿರಸ್ತೇದಾರರೇ ಹೆಡ್ ಕ್ವಾಟ್ರಸ್ ಅಸಿಸ್ಟೆಂಟ್,ಪೊಲೀಸ್ ಸಿಬ್ಬಂದಿಗೆ ವೇತನ  ಪಾವತಿ ಇತ್ಯಾದಿ ಇವರ ಕೆಲಸವಾಗಿತ್ತು. ತಾಲ್ಲೂಕಿನಲ್ಲಿ ಅಮಾಲ್ ದಾರರೇ ಪೊಲೀಸ್ ಮುಖ್ಯಾಧಿಕಾರಿಯಾಗಿ ಮುಂದುವರೆದರು, ಫಸ್ಟ್ ಕ್ಲಾಸ್ ಇನ್ಸ್ ಪೆಕ್ಟರ್ ಸೆಕೆಂಡ್ ಕ್ಲಾಸ್ ಇನ್ಸ್ ಪೆಕ್ಟರ್ ರವರಿಗೆ 10 ರೂ ಮನೆ ಭತ್ಯೆಯೊಂದಿಗೆ ಅನುಕ್ರಮವಾಗಿ 50  ಹಾಗೂ 35 ರೂ ವೇತನ  ನಿಗದಿ ಪಡಿಸಲಾಯಿತು. ಜಮಾದಾರರು, ದಫೇದಾರ ಪೊಲೀಸ್ ಪೇದೆಗಳು ಅನುಕ್ರಮವಾಗಿ 20, 12, 8  ರೂ ವೇತನ ಪಡೆಯಲು ಆರಂಭಿಸಿದರು.

ಚಳುವಳಿ

1939- ಸ್ವಾತಂತ್ರ್ಯ ಚಳುವಳಿಯ ಗಾಳಿ ಹಳೇ ಮೈಸೂರಿಗೂ ಬೀಸಿತು.  ಪೊಲೀಸರಿಗೆ ಸತ್ಯಾಗ್ರಹ ಧರಣಿ ಎಂಬುದರ ಬಿಸಿ ತಟ್ಟಿತು.  ಹೆಚ್. ಸಿದ್ದಯ್ಯ, ಟಿ. ಸುಬ್ರಹ್ಮಣ್ಯಂ, ಮಳವಳ್ಳಿ ವೀರಪ್ಪ ಸೇರಿ ಎರಡು ಸಾವಿರ ಮಂದಿ ಬಂಧಿತರಾದರು.  ಇವರ ಪೈಕಿ 1641 ಮಂದಿ ವಿರುದ್ಧ ಪೊಲೀಸರು ಮೊಕದಮೆ ಹೂಡಿದಾಗ ಇವರಿಗೆಲ್ಲ ಶಿಕ್ಷೆಯಾಯಿತು.  ಇದು ಆಗಿನ ಕಾಲದ ಭಾರೀ ಸುದ್ಧಿ.  ಬೆಂಗಳೂರಿನ ಗಾತ್ರ ಹೆಚ್ಚಿತು.  ಜನ ಸಂಖ್ಯೆಯೂ ಏರಿತು.  ಅಪರಾಧಗಳು ಹೆಚ್ಚಾದವು.  ಪೊಲೀಸರಿಗೆ ಹೆಚ್ಚು ಕೆಲಸದ ಭಾರ ಬಿತ್ತು.  ಆಗ 1944ರಲ್ಲಿ ಬೆಂಗಳೂರು ನಗರಕ್ಕೆ ಎಂ. ಕೆ. ಸೋಮಪ್ಪ, ಡಿಐಜಿ ಆಗಿ ನೇಮಕಗೊಂಡರು.  ಈ ಮಧ್ಯೆ ಬೆಂಗಳೂರು ನಗರದಲ್ಲಿಬಿೆನ್ ಗೋಪಾಲ ರಾವ್ ಎಂಬುವವರು  ಖಾಸಗೀ ಬ್ಯಾಂಕ್ ಸ್ಥಾಪಿಸಿದರು. ಬ್ಯಾಮಕ್ ವ್ಯವಹಾರ ಕುರಿತು  ದೂರುಗಳು ಬಂದವು ಇದು ಸಾರ್ವಜನಿಕರ ಗಮನ ಸೆಳೆಯಿತು. ಸರ್ಕಾರದ  ನ್ಯಾಯಮೂರ್ತಿ ಆದ ಪಿ ಮಾದಪ್ಪ ನಾಯಕತ್ವದಲ್ಲಿ ಎಸ್ ನಿಜಲಿಂಗಪ್ಪ. ಟೀಕೂರು ಸುಬ್ರಮಣ್ಯಂ, ಎನ್ ವೀರಪ್ಪ, ಎನ್ ಟಿ ಬಾಭು ರೆಡ್ಡಿ   ಇವರುಗಳ ಆಯೋಗ ನೇಮಿಸಿತು. ಪೊಲೀಸ್ ಅಧಿಕಾರಿಯಾಗಿದ್ದ ಬಾಬು ರೆಡ್ಡಿ ಆಯೋಗದ ಕಾರ್ಯದರ್ಶಿಗಳು ಆಗಿದ್ದರು. ಆಯೋಗದ ಶಿಫಾರಸ್ಸನ್ನು ಮನ್ನಿಸಿದ ಬಾಬುರೆಡ್ಡಿ ಅವರಿಗೆ 150 ರೂ ಸಂಬಳ ಹೆಚ್ಚಿಸಿತು.

ಪ್ರೊಬೇಷನರ್

        1932 ರಲ್ಲಿ ಸುಶಿಕ್ಷಿತರನ್ನು ಪೊಲೀಶ್ ಇಲಾಖೆಗೆ ಸೇರಿಸು ಉದ್ದೇಶದಿಂದ, ನೇರವಾಗಿ ಪ್ರೊಬೇಷನರಿ ಪೊಲೀಸ್      ಇನ್ಸ್‍ಪೆಕ್ಟರ್‍ ನೇಮಕ ಮಾಡಲಾಯಿತು. ರಾಜ್ಯದ ಐಜಿಪಿಯೇ ನೇಮಕ ಅಧಿಕಾರಿ. ವರ್ಷಕ್ಕೆ ಹತ್ತರಂತೆ ಪ್ರೊಬೇಷನರ್ ಪೊಲೀಸ್ ಇನ್ಸ್‍ಪೆಕ್ಟರ್‍ ರ ನೇಮಕವಾದಂತೆ ಇಲಾಖೆಯಲ್ಲಿ ಸುಶಿಕ್ಷಿತರು ಕಾಲಿಡಲು ಪ್ರಾರಂಭಿಸಿದರು. ಸಾಹಸ, ಧೈರ್ಯ ತೋರಿಸಿದ ಹಾಗು ಅಪ್ರತಿಮ ಸೇವೆ ಸಲ್ಲಿಸಿದ ಸಿಬ್ಬಂದಿಗೆ ಪ್ರೋತ್ಸಾಹಿಸಲು ಸರ್ಕಾರ ತೀರ್ಮಾನಿಸಿತು.  ಗಂಡ ಬೇರುಂಡ ಪದಕ ನೀಡಿ ಗೌರವಿಸಲು ನಿರ್ಧಾರ(1935)  ಈ ಪದಕ ಪಡೆದ ಪೇದೆ ಇಲ್ಲವೆ ಅಧಿಕಾರಿಗಳು ತಿಂಗಳಿಗೆ 3 ರಿಂದ 12 ರೂ. ಹೆಚ್ಚು ವೇತನ ಪಡೆದರು.  ವಾಹನಗಳ ಸಂಖ್ಯೆ ಹೆಚ್ಚಿತು.  ಅವುಗಳ ರಿಜಿಸ್ಟೇಷನ್, ಚಾಲಕರಿಗೆ ಲೈಸನ್ಸ್ ಕೊಡಲು ಆರಂಭಿಸಿದಾಗ ಬಸ್ ವಾರೆಂಟ್ ಪದ್ಧತಿ ಜಾರಿಗೆ ಬಂತು.  ಇದಕ್ಕಾಗಿ ಐಜಿಪಿ ಕಛೇರಿ ಆವರಣದಲ್ಲಿ ವೇ ಬ್ರಿಜ್ ನಿರ್ಮಾಣ, ಬಸ್ ವಾರೆಂಟ್ ಉಸ್ತುವಾರಿಕೆಯನ್ನು ಪೊಲೀಸರಿಗೆ ವಹಿಸಲಾಯಿತು.

ಶಿವಮೊಗ್ಗ ಪೊಲೀಸ್‍ ಬಗ್ಗೆ

ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ಪೊಲೀಸ್‍ರವರು ಮುಖ್ಯ ಆಡಳಿತಾಧಿಕಾರಿಯಾಗಿರುತ್ತಾರೆ. ಕರ್ನಾಟಕ ರಾಜ್ಯದ ಪೊಲೀಸ್‍ ವ್ಯವಸ್ಥೆಗೆ  ಮಹಾ ನಿರ್ದೇಶಕರು ಮತ್ತು ಇನ್ಸ್‍ಪೇಕ್ಟರ್‍ ಜನರಲ್‍ ಅಫ್‍ ಪೊಲೀಸ್‍, ಬೆಂಗಳೂರು ರವರು ಜವಾಬ್ದಾರಿಯನ್ನು ಹೊಂದಿರುತ್ತಾರೆ. ಶಿವಮೊಗ್ಗ ಜಿಲ್ಲೆಯು ಇನ್ಸ್‍ಪೆಕ್ಟರ್‍ ಜನರಲ್‍ ಅಫ್‍ ಪೊಲೀಸ್‍ ರವರು ಪೂರ್ವವಲ, ದಾವಣಗೆರೆ ಇವರ ಅಧೀನಕ್ಕೆ ಒಳಪಟ್ಟಿರುತ್ತದೆ. ಇವರು ನಾಲ್ಕು ಜಿಲ್ಲೆಗಳ(ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಹಾವೇರಿ) ಉಸ್ತುವಾರಿಯನ್ನು ನೋಡಿಕೊಳ್ಳುತ್ತಾರೆ.

ಪೊಲೀಸ್ ಅಧೀಕ್ಷಕರು, ಇಲಾಖೆಗಳ ಆಂತರೀಕ ನಿರ್ವಹಣೆ ಮತ್ತು ಅರ್ಥಿಕತೆ, ಶಿಸ್ತಿನ ನಿರ್ವಹಣೆ, ಕಾನೂನು ಸುವ್ಯಸ್ಥೆಯ ಕಾಪಾಡುವಲ್ಲಿ ಹೆಚ್ಚಿನ ಜವಾಬ್ದಾರಿಯನ್ನು ಹೊಂದಿರುತ್ತಾರೆ.

ಶಿವಮೊಗ್ಗ ಜಿಲ್ಲಾ ಪೊಲೀಸ್ ಉತ್ತಮ ಆಡಳಿತ ವ್ಯವಸ್ಥೆಗಾಗಿ 5 ಉಪ-ವಿಭಾಗಳಾಗಿ  ವಿಂಗಡಿಸಲಾಗಿದೆ. ಇದರ ಮುಖ್ಯ ಅಧಿಕಾರಿ ಪೊಲೀಸ್ ಉಪಾಧೀಕ್ಷಕರು/ ಸಹಾಯಕ ಪೊಲೀಸ್ ಅಧೀಕ್ಷಕರು ಕಾರ್ಯನಿರ್ವಹಿಸುತ್ತಾರೆ.  ಕ್ರಮವಾಗಿ ಶಿವಮೊಗ್ಗ, ಭದ್ರಾವತಿ, ಸಾಗರ, ಶಿಕಾರಿಪುರ ಮತ್ತು ತೀರ್ಥಹಳ್ಳಿಯಲ್ಲಿ ಉಪ-ವಿಭಾಗದ ಕಛೇರಿಗಳನ್ನು ಹೊಂದಿದೆ.

  1. ಶಿವಮೊಗ್ಗ ಉಪ-ವಿಭಾಗವು 3 ವೃತ್ತಗಳನ್ನು ಹೊಂದಿದ್ದು, ಶಿವಮೊಗ್ಗ ಗ್ರಾಮಾಂತರ, ಕೋಟೆ, ದೊಡ್ಡಪೇಟೆ ವೃತ್ತಗಳನ್ನು ಹೊಂದಿದೆ.10 ಪೊಲೀಸ್ ಠಾಣೆಗಳು ಇರುತ್ತವೆ.
  2. ಭದ್ರಾವತಿ ಉಪ ವಿಭಾಗದಲ್ಲಿ 2 ವೃತ್ತಗಳು ಇದ್ದು, ಭದ್ರಾವತಿ ನಗರ ವೃತ್ತ, ಭದ್ರಾವತಿ ಗ್ರಾಮಾಂತರ ವೃತ್ತಗಳಾಗಿರುತ್ತವೆ. 7 ಪೊಲೀಸ್ ಠಾಣೆಗಳನ್ನು ಹೊಂದಿರುತ್ತದೆ.
  3. ಸಾಗರ ಉಪ ವಿಭಾಗವು 1 ವೃತ್ತವನ್ನು ಹೊಂದಿದ್ದು, 1 ಪಿಐ ಸಾಗರ ಪೊಲೀಸ್ ಠಾಣೆಯನ್ನು ಹೊಂದಿದ್ದು, ಪಿಐರವರು ಠಾಣಾಧಿಕಾರಿಯಾಗಿರುತ್ತಾರೆ. 3 ಪೊಲೀಸ್ ಠಾಣೆಗಳನ್ನು ಹೊಂದಿರುತ್ತದೆ.
  4. ಶಿಕಾರಿಪುರ ಉಪ ವಿಭಾಗವು 2 ವೃತ್ತವನ್ನು ಹೊಂದಿದ್ದು, ಶಿಕಾರಿಪುರ ವೃತ್ತ ಮತ್ತು ಸೊರಬ ವೃತ್ತಗಳಾಗಿರುತ್ತದೆ. 5 ಪೊಲೀಸ್ ಠಾಣೆಗಳನ್ನು ಒಳಗೊಂಡಿರುತ್ತದೆ.
  1. ತೀರ್ಥಹಳ್ಳಿ ಉಪ- ವಿಭಾಗವು 2 ವೃತ್ತವನ್ನು ಹೊಂದಿದು, ತೀರ್ಥಹಳ್ಳಿ ವೃತ್ತ ಮತ್ತು ಹೊಸನಗರ ವೃತ್ತಗಳಿರುತ್ತವೆ. ಒಟ್ಟು 6 ಪೊಲೀಸ್‍ ಠಾಣೆಗಳನ್ನು ಹೊಂದಿರುತ್ತದೆ. ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟು 17 ಉಪ ಠಾಣೆ(Out Post) ಗಳನ್ನು ಹೊಂದಿರುತ್ತವೆ.
  2. ಸಿಇಎನ್‍(ಸೈಬರ್‍ ಕ್ರೈಂ ಪೊಲೀಸ್‍ ಠಾಣೆ): ಈ ಠಾಣೆಯ ಉಸ್ತುವಾರಿಯನ್ನು ಪೊಲೀಸ್‍ ಇನ್ಸ್‍ಪೆಕ್ಟರ್‍ರವರು ವಹಿಸಿರುತ್ತಾರೆ, ಈ ಠಾಣೆಯು ಸೈಬರ್‍ಗೆ ಸಂಬಂಧಿಸಿದ ಅಪರಾಧಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ತನಿಖೆ ಮಾಡುತ್ತದೆ.

ಸಂಸ್ಥೆಯ ರಚನೆ

ಪೊಲೀಸ್ ಅಧೀಕ್ಷಕರು, ಇಲಾಖೆಯ ಮುಖ್ಯಸ್ಥರಾಗಿರುತ್ತಾರೆ. ಅವರಿಗೆ ಹೆಚ್ಚುವರಿ ಪೊಲೀಸ್‍ ಅಧೀಕ್ಷಕರು ಮತ್ತು 5 ಉಪಪೊಲೀಸ್‍ ಅಧೀಕ್ಷಕರುಗಳು ಸಹಾಯ ಮಾಡುತ್ತಾರೆ. ಪೊಲೀಸ್‍ ಉಪ  ಅಧೀಕ್ಷಕರು ನಿದಿರ್ಷ್ಟ  ಉಪವಿಭಾಗದ  ಉಸ್ತುವಾರಿ ವಹಿಸುತ್ತಾರೆ. ಪ್ರತಿಯೊಂದು ಉಪ-ವಿಭಾಗವನ್ನು ವೃತ್ತಗಳಾಗಿ ವಿಂಗಡಿಸಲಾಗಿದೆ. ಪ್ರತಿಯೊಂದು ವೃತ್ತಗಳು ಇನ್ಸ್‍ಪೆಕ್ಟರ್‍ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತವೆ.  ಪ್ರತಿಯೊಂದು ವೃತ್ತದ  ಅಡಿಯಲ್ಲಿ  ಪೊಲೀಸ್‍ ಠಾಣೆಗಳಾಗಿ ವಿಂಗಡಿಸಲಾಗಿದ್ದು, ಠಾಣೆಗಳು ಪಿಎಸ್‍ಐ, ಎಎಸ್‍ಐ, ಸಿಹೆಚ್‍ಸಿ, ಸಿಪಿಸಿ ಮತ್ತು ಮಪಿಸಿಗಳನ್ನು ಹುದ್ದೆಗಳನ್ನು ಹೊಂದಿದ್ದು, ಎಎಸ್‍ಐರವರುಗಳು ಪ್ರತಿ ಉಪ-ಠಾಣೆಗಳ ಉಸ್ತುವಾರಿಯನ್ನು ವಹಿಸಲಾಗಿರುತ್ತದೆ.

org_chart kan
ಶಿವಮೊಗ್ಗ ಜಿಲ್ಲಾ ಪೊಲೀಸ್ ಸಿಬ್ಬಂದಿಗಳ ಮಂಜೂರಾತಿ ಬಲ

ಘಟಕ

ಎಸ್‍ಪಿ

ಅಡಿಷನಲ್ ಎಸ್‍ಪಿ

ಡಿಎಸ್‍ಪಿ

ಸಿಪಿಐ/ಪಿಐ

ಪಿಎಸ್‍ಐ

ಎಎಸ್‍ಐ

ಹೆಚ್‍ಸಿ

ಪಿಸಿ

ಒಟ್ಟು

ಸಿವಿಲ್‍ ಅಧಿಕಾರಿ ಮತ್ತು ಸಿಬ್ಬಂದಿ(ಎಸ್‍ಓ 1008 ಪ್ರಕಾರ)

1

1

6

16

95

159

482

950

1710

ಡಿಎಆರ್‍  ಅಧಿಕಾರಿ ಮತ್ತು ಸಿಬ್ಬಂದಿಗಳು

 

 

1

2

8

62

155

313

541

ಬೆರಳುಮುದ್ರೆ ಘಟಕ ಅಧಿಕಾರಿ ಮತ್ತು ಸಿಬ್ಬಂದಿ

 

 

 

1

1

1

1

2

6

ನಿಸ್ತಂತು ಅಧಿಕಾರಿ ಮತ್ತು ಸಿಬ್ಬಂದಿ

 

 

 

1

4

9

19

9

42

 

ಎಎಓ

ಎಸ್‍ಎಸ್‍

ಸ್ಟೇನೋ

ಎಫ್‍ಡಿಎ

ಎಸ್‍ಡಿಎ

ಟೈಪಿಸ್ಟ್‍

ದಲಾಯತ್‍

ಸ್ವೀಪರ್

ಒಟ್ಟು

ಲಿಪಿಕ ಅಧಿಕಾರಿ ಮತ್ತು ಸಿಬ್ಬಂದಿ

1

3

2

12

10

7

4

1

40

ಜಿಲ್ಲಾ ವಿಶೇಷ ಶಾಖೆ

ಜಿಲ್ಲಾ ವಿಶೇಷ ಶಾಖೆ ಎಂದು ಹೆಸರಿಸಲಾದ ಘಟಕವನ್ನು ಜಿಲ್ಲಾ ಪೊಲೀಸ್ ಕಚೇರಿಗೆ ಜೋಡಿಸಲಾಗಿದೆ. ಇದು ನೇರವಾಗಿ ಪೊಲೀಸ್ ವರಿಷ್ಠಾಧಿಕಾರಿಯ ನಿಯಂತ್ರಣದಲ್ಲಿದೆ. ಇದು ರಾಜಕೀಯ, ಕೋಮು, ಸಾಮಾಜಿಕ, ವಿದ್ಯಾರ್ಥಿಗಳು, ಕಾರ್ಮಿಕರು, ನಕ್ಸಲ್ ಚಟುವಟಿಕೆಗಳು, ಅಪರಾಧ ಮತ್ತು ಇತರ ಯಾವುದೇ ಮಹತ್ವದ ವಿಷಯಗಳಿಗೆ ಸಂಬಂಧಿಸಿದ ಗುಪ್ತಚರವನ್ನು ಸಂಗ್ರಹಿಸಬೇಕಾಗಿದೆ. ಈ ವಿಭಾಗದಲ್ಲಿ, ಒಬ್ಬ ಇನ್ಸ್‌ಪೆಕ್ಟರ್, ಒಬ್ಬ ಸಬ್ ಇನ್ಸ್‌ಪೆಕ್ಟರ್ ಮತ್ತು ಎರಡು ಸಹಾಯಕ ಸಬ್ ಇನ್ಸ್‌ಪೆಕ್ಟರ್, 8 ಜನ ಸಿವಿಲ್‍ ಹೆಡ್‍ ಕಾಸ್ಟೇಬಲ್ ಗಳನ್ನು ಹೊಂದಿರುತ್ತದೆ.

ಜಿಲ್ಲಾ ಅಪರಾಧ ದಾಖಲೆ ವಿಭಾಗ

ಶಿವಮೊಗ್ಗದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳ ನೇರ ನಿಯಂತ್ರಣದಲ್ಲಿ ಜಿಲ್ಲಾ ಅಪರಾಧ ದಾಖಲೆ ಬ್ಯೂರೋ ಕಾರ್ಯನಿರ್ವಹಿಸುತ್ತಿದೆ. ಅಪರಾಧಗಳು ಮತ್ತು ಅಪರಾಧಿಗಳ ಬಗ್ಗೆ ವಿವರಗಳನ್ನು ಸಂಗ್ರಹಿಸಲು ಮತ್ತು ಅವರ ಬಗ್ಗೆ ದಾಖಲೆಗಳನ್ನು ನಿರ್ವಹಿಸಲು ಇದು ಏಜೆನ್ಸಿಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಇದು ಜಿಲ್ಲೆಯ ಮತ್ತು ಹೊರಗಿನ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿಯನ್ನು ಪಡೆಯಬಹುದಾಗಿರುತ್ತದೆ. ಈ ವಿಭಾಗದಲ್ಲಿ, 1 ಉಪ ಪೊಲೀಸ್ ವರಿಷ್ಠಾಧಿಕಾರಿ, 1 ಪೊಲೀಸ್ ಇನ್ಸ್‌ಪೆಕ್ಟರ್,1 ಸಬ್ ಇನ್ಸ್‌ಪೆಕ್ಟರ್,2 ಎಎಸ್‌ಐ 6 ಮುಖ್ಯ ಕಾನ್‌ಸ್ಟೆಬಲ್‌, 4 ಕಾನ್‌ಸ್ಟೆಬಲ್‌ಗಳು ಇರುತ್ತಾರೆ.

ಜಿಲ್ಲಾ ಅಪರಾಧ ಮತ್ತು ಗುಪ್ತಚರ ವಿಭಾಗ

ಗುಪ್ತಚರ ಮಾಹಿತಿ ಸಂಗ್ರಹಿಸಿ, ಜೂಜಾಟ, ವೇಶ್ಯಾವಾಟಿಕೆ, ಮಾದಕ ವಸ್ತುಗಳು ಮತ್ತು ಇತರ ಸಾಮಾಜಿಕ ಅಂಶಗಳ ಬಗ್ಗೆ ಕ್ರಮ ಕೈಗೊಳ್ಳುವ ಸೂಪರ್‌ಡಿ.ಒ.ಪಿ ಪೊಲೀಸರ ನೇರ ಮೇಲ್ವಿಚಾರಣೆಯಲ್ಲಿ ಈ ಘಟಕ ಕಾರ್ಯನಿರ್ವಹಿಸುತ್ತಿದೆ. ವಿಶೇಷ ಪ್ರಾಮುಖ್ಯತೆ ಮತ್ತು ಕೊಲೆ, ದೌರ್ಜನ್ಯ ಮತ್ತು ಇತರ ಸಂವೇದನಾಶೀಲ ಪ್ರಕರಣಗಳ ತನಿಖೆಗೆ ಸಂಬಂಧಿಸಿದಂತೆ ಅವರು ಕೆಲಸ ಮಾಡಬೇಕಿದೆ. ಈ ಘಟಕದ ಮುಖ್ಯಸ್ಥ ಪೊಲೀಸ್ ಇನ್ಸ್‌ಪೆಕ್ಟರ್. ಸಿವಿಲ್ ಹೆಡ್ ಕಾನ್‌ಸ್ಟೆಬಲ್‌ಗಳು ಸಹಾಯಕರಾಗಿರುತ್ತಾರೆ

ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್

ಈ ಜಿಲ್ಲೆಯಲ್ಲಿ ಎರಡು ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆ ಇದೆ. ಒಂದು ಭದ್ರಾವತಿಯಲ್ಲಿ 1 ಆರ್‌ಪಿಐ ನೇತೃತ್ವದಲ್ಲಿ ಮತ್ತು ಇನ್ನೊಂದು ಡಿಎಸ್‌ಪಿ (ಡಿಎಆರ್) ನೇತೃತ್ವದ ಶಿವಮೊಗ್ಗದಲ್ಲಿದೆ. ಡಿಎಆರ್ ಭದ್ರಾವತಿಯವರು ಡಿಎಸ್ಪಿ (ಡಿಎಆರ್) ಶಿವಮೊಗ್ಗ ಅವರ ಮೇಲ್ವಿಚಾರಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆರ್‌ಪಿಐ ಶ್ರೇಣಿಯ ಅಧಿಕಾರಿಯ ನೇತೃತ್ವ ವಹಿಸಿದ್ದಾರೆ. ಜಿಲ್ಲಾ ಸಶಸ್ತ್ರ ಮೀಸಲು ವಿಭಾಗದ ಮುಖ್ಯಸ್ಥರಾಗಿರುವ ಡಿಎಸ್‌ಪಿ (ಡಿಎಆರ್) ಶಿವಮೊಗ್ಗ ಅವರಿಗೆ 02 ಆರ್‌ಪಿಐಗಳು, 08 ಆರ್‌ಎಸ್‌ಐಗಳು, 62 ಎಆರ್‌ಎಸ್‌ಐಗಳು, 155 ಎಎಚ್‌ಸಿಗಳು ಮತ್ತು 313 ಎಪಿಸಿಗಳು ಸಹಾಯ ಮಾಡುತ್ತವೆ. ಈ ಘಟಕವು ಉದಯೋನ್ಮುಖ ಕಾನೂನು ಮತ್ತು ಸುವ್ಯವಸ್ಥೆ ಸಂದರ್ಭಗಳಲ್ಲಿ ನಿಂತಿರುವ ಕಾವಲುಗಾರರು, ಬೆಂಗಾವಲುಗಳು ಮತ್ತು ಗಮನಾರ್ಹ ಬಲವನ್ನು ಒದಗಿಸುತ್ತಿದೆ.

ಗಣಕಯಂತ್ರ ವಿಭಾಗ

ಗಣಕಯಂತ್ರ ವಿಭಾಗವು 1 ಪಿಎಸ್‍ಐ, 1 ಎಎಸ್‍ಐ, 1 ಹೆಚ್‍ಸಿ ಹಾಗೂ 2 ಪಿಸಿ ಹುದ್ದೆಗಳನ್ನು ಹೊಂದಿದು, ಈ ವಿಭಾಗವು ಜಿಲ್ಲೆಯ ಪೊಲೀಸ್‍ ಠಾಣೆ/ಕಛೇರಿಗಳ ಗಣಕೀಕರಣಗೊಳಿಸುವಲ್ಲಿ ಕಾರ್ಯಾ ನಿರ್ವಹಿಸುತ್ತದೆ. ಇಲಾಖೆಯು ಪೊಲೀಸ್ ಐಟಿ ಎಂಬ ಅನ್‍ ಲೈನ್‍ ತಂತ್ರಾಂಶವನ್ನು ಹೊಂದಿದ್ದು, ಈ ಸಂಬಂಧ ಗಣಕಯಂತ್ರಗಳ ಸುರಕ್ಷೆಗೆ  Antivirus Server, ADSL Server, WSUS, E-Mail System ಹಾಗು. Networking  ಸಂಬಂಧಿಸಿದ ಕಾರ್ಯನಿರ್ವಹಣೆಯನ್ನು ಮಾಡುತ್ತೆದೆ. ಪೊಲೀಸ್ ಅಧಿಕಾರಿ/ಸಿಬ್ಬಂದಿಗಳಿಗೆ ತಾಂತ್ರಿಕತೆ ಮತ್ತು ಆನ್‍ ತಂತ್ರಾಂಶದ ಕುರಿತು ತರಬೇತಿಯನ್ನು ನೀಡುತ್ತದೆ.

ಬೆರಳು ಮುದ್ರೆ ಘಟಕ

ಈ ಘಟಕವನ್ನು ಪೊಲೀಸ್ ಇನ್ಸ್‌ಪೆಕ್ಟರ್ ಹುದ್ದೆಯ ಅಧಿಕಾರಿಯೊಬ್ಬರು ವಹಿಸುತ್ತಾರೆ. ಅವರಿಗೆ 01 ಪೊಲೀಸ್ ಸಬ್ ಇನ್ಸ್‌ಪೆಕ್ಟರ್, 1 ಸಿವಿಲ್ ಹೆಡ್ ಕಾನ್‌ಸ್ಟೆಬಲ್, 02 ಸಿವಿಲ್ ಕಾನ್‌ಸ್ಟೆಬಲ್‌ಗಳು ಸಹಾಯ ಮಾಡುತ್ತಾರೆ. ಪೊಲೀಸ್. ಇದು ಮುಖ್ಯವಾಗಿ ಕಳ್ಳತನ ಪ್ರಕರಣಗಳು ಮತ್ತು ಪ್ರಮುಖ ಪ್ರಕರಣಗಳಲ್ಲಿ ಅಪರಾಧದ ಭೇಟಿ, ಅನುಮಾನಸ್ಪದ ಬೆರಳು ಮುದ್ರೆಯನ್ನು ಪಡೆದು ಕೃತ್ಯ ನಡೆಸಿದ ಅರೋಪಿಗಳ ಬಗ್ಗೆ ಮಾಹಿತಿಯ್ನನು ನೀಡಿ ಅರೋಫಿಗಳ ಪತ್ತೆಗೆ ಸಹಾಯ ಮಾಡುತ್ತಾರೆ.

ನಿಯಂತ್ರಣ ಕೊಠಡಿಯಲ್ಲಿ ನಿರ್ವಹಿಸುವ ಇತರ ಮುಖ್ಯ ಕಾರ್ಯಗಳು

ಸಂಚಾರ ನಿರ್ವಹಣಾ ಕೋಶ: ನಿಯಂತ್ರಣ ಕೊಠಡಿಯೊಳಗೆ ಸಂಚಾರ ನಿರ್ವಹಣಾ ಕೋಶವಿದೆ. ಪಟ್ಟಣದ 110 ಸ್ಥಳಗಳಲ್ಲಿರುವ ಸಿಸಿಟಿವಿ ಕ್ಯಾಮೆರಾಗಳ ಮೇಲ್ವಿಚಾರಣೆಯನ್ನು ಇಲ್ಲಿ ಮಾಡಲಾಗುತ್ತದೆಶಿವಮೊಗ್ಗ ಜಿಲ್ಲೆಯ ಪೊಲೀಸರ ಒಡೆತನದ ಎಲ್ಲಾ ವಾಹನಗಳ ಜಿಪಿಎಸ್ ಟ್ರ್ಯಾಕಿಂಗ್ ಮಾಡುವ ನಿಯಂತ್ರಣ ಕೊಠಡಿಯೊಳಗೆ ಒಂದು ಟ್ರ್ಯಾಕಿಂಗ್ ಸ್ಟೇಷನ್ ಇದೆ            ತುರ್ತು ಸಂದರ್ಭದಲ್ಲಿ ಸಾರ್ವಜನಿಕರು ತಮ್ಮ ಫೋನ್‌ಗಳಲ್ಲಿ 100/112 ಅನ್ನು ಡಯಲ್ ಮಾಡುವ ಮೂಲಕ ನಿಯಂತ್ರಣ ಕೊಠಡಿಯನ್ನು ಸಂಪರ್ಕಿಸಬಹುದು. ಶಿವಮೊಗ್ಗ ಜಿಲ್ಲೆಯ ವ್ಯಾಪ್ತಿಯಲ್ಲಿರುವ ಯಾವುದೇ ಪೊಲೀಸ್ ಠಾಣೆಗೆ ಪೊಲೀಸ್ ಅಧೀಕ್ಷಕರಿಂದ ಫ್ಯಾಕ್ಸ್ ಸಂದೇಶಗಳನ್ನು ನಿಯಂತ್ರಣ ಕೊಠಡಿಯಿಂದ ಕಳುಹಿಸಲಾಗುತ್ತದೆ.ಬಂದೋಬಸ್ತ್ ವಿಐಪಿ ಭೇಟಿ ಅಥವಾ ಪೊಲೀಸ್ ಭದ್ರತೆಯ ಅಗತ್ಯವಿರುವ ಯಾವುದೇ ಪ್ರಮುಖ ಮತ್ತು ವಿಶೇಷ ಸಂದರ್ಭಗಳಲ್ಲಿ ವೈರ್‌ಲೆಸ್ ಸಂವಹನ ಮಾಧ್ಯಮವನ್ನು ಸ್ಥಾಪಿಸಲು ಇದು ಸಹಾಯ ಮಾಡುತ್ತದೆ.

ಬದಲಾದ ಸಾಮಾಜಿಕ ಪರಿಸ್ಥಿತಿಗೆ ತಕ್ಕಂತೆ ಇಲಾಖೆ ಮಹಿಳಾ ಪೊಲೀಸರನ್ನು ನೇಮಿಸಿಕೊಳ್ಳಲು ಆರಂಭಿಸಿತು. ರಾಜ್ಯಗಳ ಪುರ್ನರಚನೆ ಅದಾಗ ಮುಂಬೈ-ಕರ್ನಾಟಕದಿಂದ 9 ಮಂದಿ ಮಹಿಳಾ ಪೊಲೀಸರು ಬಂದಿದ್ದರೆ, ಇಂದು ಪ್ರತಿ ಠಾಣೆಯಲ್ಲಿ ಮಹಿಳಾ ಪೊಲೀಸರು ಕಾರ್ಯನಿರ್ವಹಿಸುತ್ತಿದ್ದಾರೆ. ಶ್ರೀಮತಿ  ಜಿಜಾ ಹರಿಸಿಂಗ್‍, ರಾಜ್ಯದಲ್ಲಿ ಪ್ರಥಮ ಮಹಿಳಾ ಐಪಿಎಸ್‍ ಅಧಿಕಾರಿ, ಕನ್ನಡಿಗರೆಂದರೆ ಶ್ರೀಮತಿ ಪ್ರಭಾರಾವ್‍, ಐಪಿಎಸ್‍ರವರು ಒಬ್ಬರೇ. ಇಂದು ರಾಜ್ಯವು ಹಲವು ಮಹಿಳಾ ಪೊಲೀಸ್ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಾದ್ದಾರೆ.

1968 ರಲ್ಲಿ ಪೊಲೀಸ್ ಶ್ವಾನಗಳ ಬಳಕೆ ಪ್ರಾರಂಭವಾಯಿತು. ಮದ್ರಾಸಿನಲ್ಲಿ ನಿವೃತ್ತರಾಗಿ ಬಂದ ಜೆ.ಬಿ ಸ್ಯಾಮುಯಲ್, ಪೊಲೀಸ್ ಶ್ವಾನಪಡೆ ಆರಂಭಿಸಿದರು. ಅಂದು ಆರು ಶ್ವಾನಗಳನ್ನು ಪಡೆದಿದ್ದ ಇಲಾಖೆ ಇಂದು 40 ಕ್ಕು ಹೆಚ್ಚು ಶ್ವಾನಗಳನ್ನು ಹೊಂದಿದೆ.

ಪೊಲೀಸರ ಕಲ್ಯಾಣಕ್ಕಾಗಿ ಪೊಲೀಸ್‍ ವಸತಿ ನಿರ್ಮಾಣ ಕಾರ್ಪೋರೇಷನ್‍, ಕರ್ನಾಟಕ ಪೊಲೀಸ್‍ ನಿಧಿ, ಆರೋಗ್ಯ ಭಾಗ್ಯ ಯೋಜನೆ ಮುಂತಾದವುಗಳನ್ನು ರಚಿಸಲಾಯಿತು, ಮತ್ತು ಸಿಬ್ಬಂದಿ/ಅಧಿಕಾರಿಳಿಗೆ ವಾರ್ಷಿಕ  ಆರೋಗ್ಯ ತಪಾಸಣೆಯನ್ನು ಸಹ ಹಮ್ಮಿಕೊಳ್ಳಲಾಗುತ್ತದೆ.ಪೊಲೀಸ್ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಬಾಲಭವನ ಮತ್ತು ಪೊಲೀಸ್ ಶಾಲೆಗಳನ್ನು ತೆರೆಯಲಾಗಿದೆ.

ಪೊಲೀಸ್ ಇಲಾಖೆಯ  ಇನ್ನೊಂದು ಆಂಗ ಗೃಹರಕ್ಷಕದಳ ಮತ್ತು ಅಗ್ನಿಶಾಮಕ ದಳ ತುರ್ತುಪರಿಸ್ಥಿತಿಯಲ್ಲಿ ಇದರ ಕೆಲಸ ಅತಿ ಮುಖ್ಯ,  ಸಾರ್ವಜನಿಕರು ಬಯಸಿದ್ದಲ್ಲಿ ಇದರ ಸೇವೆ ಸದಾ ಸಿದ್ದ. ಈಗ ಇದು ಪೊಲೀಸ್ ಇಲಾಖೆಯಿಂದ ಬೇರ್ಪಡಿಸಿ, ಇದಕ್ಕೋಬ್ಬ ಪ್ರತ್ಯೇಕ ಪೊಲೀಸ್ ಡೈರೆಕ್ಟರ್‍ ಜನರಲ್‍(ಡಿಜಿಪಿ)ರವರನ್ನು ನೇಮಿಸಿ ಶ್ರೀ ವಿ.ಆರ್‍, ನಿಜಾಮುದ್ದಿನ್‍ರವರನ್ನು ಡಿಜಿಪಿಯಾನ್ನಾಗಿ ನೇಮಿಸಲಾಯಿತು.

ಪೊಲೀಸ್ ಇಲಾಖೆಯಲ್ಲಿ ದಾಖಲೆ ಪತ್ರಗಳು ಅತೀ ಮುಖ್ಯ ಇವು ಇಲ್ಲದಿದ್ದರೆ ಪೊಲೀಸ್‍ ಠಾಣೆ ಇದ್ದರೂ ಸತ್ತಂತೆ, ದಾಖಲೆ ಪತ್ರಗಳ ನಿರ್ವಹಣೆ ಭಾರೀ  ಸಮಸ್ಯೆ ತಂದೊಡ್ಡಿದಾಗ ಇಲಾಖೆ ಕಂಪ್ಯೂಟರ್‍ ಪದ್ದತಿಗೆ ಮೊರೆ ಹೊಯಿತು. ಅಪರಾಧಿಗಳ ಬಾವಚಿತ್ರ, ಬೆರಳಿನ ಗುರುತು. ಅವರ ಇತಿಹಾಸದ ವಿವರಗಳನ್ನು ಸಂಗ್ರಹಿಸುವುದೇ ಇದರ ಕೆಲಸ  ಇಲಾಖೆಯ ಸಿಬ್ಬಂದಿಗಳ ವೈಯಕ್ತಿ ವಿವರಗಳು, ವೇತನ ಬಿಲ್‍ ಇತ್ಯಾದಿಗಳನ್ನು ನಿರ್ವಹಿಸುತ್ತದೆ. ಎಸ್ಪಿ ದರ್ಜೆಯ  ಅಧಿಕಾರಿ ಮುಖ್ಯಸ್ಥರು. ಪ್ರಸ್ತುತ ಪೊಲೀಸ್ ಇಲಾಖೆಯ  ಗಣಕೀಕರಣ  ಉಸ್ತುವಾರಿಯನ್ನು ಪೊಲೀಸ್ ಕಂಪ್ಯೂಟರ್‍ ವಿಂಗ್‍ ನಿರ್ವಹಿಸುತ್ತದೆ. ಮತ್ತು ಎಲ್ಲಾ ಮಾಹಿತಿ ತಂತ್ರಾಂಶ ಯೋಜನೆಗೆ ಪೊಲೀಸ್ ಕಂಪ್ಯೂಟರ್‍ ವಿಂಗ್ ಒಂದು ಸಮನ್ವಯ ಕೇಂದ್ರವಾಗಿದೆ. 1977 ರಲ್ಲಿ ಅಪರಾಧಿಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಅಪರಾಧಿಗಳ ಬಗ್ಗೆ ಗುಪ್ತ ಮಾಹಿತಿಯನ್ನು  ಎಲ್ಲಾರಿಗೂ  ತಲುಪುವಂತೆ  ಮಾಡಲು (ರಾಜ್ಯದ್ಯಾಂತ ಮತ್ತು ರಾಷ್ಟ್ರಾದ್ಯಾಂತ) ಮತ್ತು ಮಾಹಿತಿಗಳನ್ನು ಸರಿಯಾದ  ರೀತಿಯಲ್ಲಿ ಕ್ರೂಢೀಕರಣ  ಮಾಡುವ ಉದ್ದೇಶದಿಂದ, ರಾಜ್ಯ  ಅಪರಾಧ ದಾಖಲಾತಿ ಮರು ವಿಂಗಡಣೆಯಾಗಿ, ಐಜಿ, ಪೊಲೀಸ್ ಕಂಪ್ಯೂಟರ್‍ ವಿಂಗ್‍ ಉಸ್ತುವಾರಿಯಲ್ಲಿ ಕಾರ್ಯ ನಿರ್ವಹಿಸುತ್ತದೆ.

ಜಿಲ್ಲಾ ಮಟ್ಟದ ಅಧಿಕಾರಿಗಳ ಸಂಪರ್ಕ

ಜಿ. ಕೆ. ಮಿಥುನ್ ಕುಮಾರ್, ಐ. ಪಿ. ಎಸ್

 ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ,

ಸಾಗರ ರಸ್ತೆ, ಶಿವಮೊಗ್ಗ.

ಇ-ಮೇಲ್‍ : spshi@ksp.gov.in

ಪೋನ್‍ : 08182-261400