ಮುಚ್ಚಿ

ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮ

ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಕುರಿತು

ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮವು ೨೦೦೭-೦೮ ರಲ್ಲಿ ೧೧ನೇ ಪಂಚವಾರ್ಷಿಕ ಯೋಜನೆಯಡಿಯಲ್ಲಿ ಪ್ರಾರಂಭಿಸಲಾಯಿತು. ಇದರ ಮುಖ್ಯ ಉದ್ದೇಶ,

 1. ತಂಬಾಕು ಬಳಕೆಯ ದುಷ್ಪರಿಣಾಮದ ಕುರಿತು ಅರಿವು ಮೂಡಿಸುವುದು.
 2. ತಂಬಾಕು ಉತ್ಪನ್ನಗಳ ಉತ್ಪಾದನೆ ಹಾಗು ಸಪ್ಲೈಮೇಲೆ ನಿರ್ಬಂಧ ಹೇರುವುದು.
 3. “ಸಿಗರೇಟು ಹಾಗುಇತರತಂಬಾಕು ಉತ್ಪನ್ನಗಳ ನಿಯಂತ್ರಣ ಕಾಯಿದೆ”ಯನ್ನು ಸಮರ್ಪಕವಾಗಿ ಅನುಷ್ಠಾನ ಮಾಡುವುದು.
 4. ತಂಬಾಕು ವ್ಯಸನ ಮುಕ್ತಿಗೆ ಸಹಾಯ ಮಾಡುವುದು.
 5. WHO Framework Convention of Tobacco Control ನ ಅಂಶಗಳನ್ನು ಅನುಷ್ಠಾನಮಾಡಲು ರೂಪುರೇಶೆಯನ್ನು  ತಯಾರುಮಾಡುವುದು.

೧೧ನೇ ಪಂಚವಾರ್ಷಿಕ ಯೋಜನೆಯಡಿಯಲ್ಲಿ ೨೧ ರಾಜ್ಯಗಳ ೪೨ ಜಿಲ್ಲೆಗಳಲ್ಲಿ ಮೊದಲು ಶುರುಮಾಡಲಾಗಿತ್ತು. ೧೧ನೇ ಪಂಚವಾರ್ಷಿಕ ಯೋಜನೆಯಡಿಯಲ್ಲಿ ಈ ಕಾರ್ಯಕ್ರಮದ ಸಫಲತೆಯನ್ನು ಕಂಡು ಹಾಗು ೨೦೦೯-೧೦ರ ಗ್ಲೋಬಲ್‌ ಅಡಲ್ಟ್‌ ಟೊಬಾಕೋ ಸರ್ವೆ (GATS) ರಲ್ಲಿಇರುವ ಶೇಕಡವಾರು ತಂಬಾಕು ಬಳಕೆಯನ್ನು ಶೇ. ೫ ರಷ್ಟು ಕಡಿಮೆ ಮಾಡಲು ೨ನೇ ಪಂಚವಾರ್ಷಿಕ ಯೋಜನೆಯಲ್ಲಿ ಇದನ್ನು ಇನ್ನೂ ಹೆಚ್ಚಿನ ರಾಜ್ಯಗಳು ಹಾಗು ಜಿಲ್ಲೆಗಳಿಗೆ ಜಾರಿಗೊಳಿಸಲಾಗಿತ್ತು. ಗ್ಲೋಬಲ್‌ ಅಡಲ್ಟ್‌ ಟೊಬಾಕೋ ಸರ್ವೆ (GATS) ನ ಎರಡನೇ ಆವೃತ್ತಿ ಬಿಡುಗಡೆಯ ಹೊತ್ತಿಗೆ ದೇಶದಲ್ಲಿ ೮೧ ತಂಬಾಕುಬಳಕೆಯು ೮೧ ಲಕ್ಷದಷ್ಟು ಕಡಿಮೆಯಾಗಿದೆ.

ರಾಷ್ಟ್ರೀಯ ತಂಬಾಕು ನಿಯಂತ್ರಣಕಾ ರ್ಯಕ್ರಮದ ಧ್ಯೇಯ

 1. ಆರೋಗ್ಯ ಹಾಗು ಸಾಮಾಜಿಕ ಕಾರ್ಯಕರ್ತರು, ಎನ್.ಜಿ.ಒ., ಶಾಲಾ ಉಪಾಧ್ಯಾಯರು ಹಾಗು ಅನುಷ್ಠಾನಾಧಿಕಾರಿಗಳ ತರಬೇತಿ.
 2. ಐ.ಇ.ಸಿ. ಚಟುವಟಿಕೆಗಳು
 3. ಶಾಲಾ ಕಾರ್ಯಕ್ರಮಗಳು
 4. ತಂಬಾಕು ನಿಯಂತ್ರಣ ಕಾಯಿದೆಗಳ ಮೇಲ್ವಿಚಾರಣೆ
 5. ಪಂಚಾಯತ್‌ ರಾಜ್‌ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಿ ಹಳ್ಳಿಗಳಲ್ಲಿ ಅನುಷ್ಠಾನ ಮಾಡುವುದು.
 6. ಜಿಲ್ಲಾಮಟ್ಟದಲ್ಲಿ ತಂಬಾಕು ವ್ಯಸನ ಮುಕ್ತಿ ಕೇಂದ್ರ ಸ್ಥಾಪನೆ ಹಾಗು ಔಷಧ ಪೂರೈಕೆ.
 7. ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮವನ್ನು ಮೂರು ಮಟ್ಟಗಳಲ್ಲಿ ಜಾರಿಗೊಳಿಸಲಾಗುತ್ತದೆ. ರಾಷ್ಟ್ರೀಯಮಟ್ಟದಲ್ಲಿ 1. ರಾಷ್ಟ್ರೀಯ ತಂಬಾಕು ನಿಯಂತ್ರಣ ಕೋಶ, ರಾಜ್ಯಮಟ್ಟದಲ್ಲಿ 2. ರಾಜ್ಯ ತಂಬಾಕು ನಿಯಂತ್ರಣ ಕೋಶ ಹಾಗು ಜಿಲ್ಲಾಮಟ್ಟದಲ್ಲಿ 3. ಜಿಲ್ಲಾ ತಂಬಾಕು ನಿಯಂತ್ರಣ ಕೋಶ.
 8. ಎನ್.ಟಿ.ಸಿ.ಪಿ.ಗೆಅದರದೇ ಆದ ಅನುದಾನ ಹಾಗು ಮಾನವ ಸಂಪನ್ಮೂಲವು ಲಭ್ಯವಿದೆ. ರಾಷ್ಟ್ರೀಯ ಆರೋಗ್ಯ ಮಿಷನ್‌ (ಎನ್.ಹೆಚ್.ಎಂ)  ಅಡಿಯಲ್ಲಿ ಎನ್.ಸಿ.ಡಿ. ಪ್ಲೆಕ್ಸಿಪೂಲ್‌ ಅನುದಾನದಡಿಯಲ್ಲಿ ರಾಜ್ಯ ಹಾಗು ಜಿಲ್ಲಾ ತಂಬಾಕು ನಿಯಂತ್ರಣ ಕೋಶಗಳಿಗೆ ಕಾರ್ಯಕ್ರಮಗಳನ್ನು ನಡೆಸಲು ಹಣಕಾ ಸುಲಭ್ಯವಿದೆ. ಇದನ್ನು 12ನೇ ಪಂಚವಾರ್ಷಿಕ ಯೋಜನೆಯಡಿಯಲ್ಲಿ ಲಭ್ಯವಾಗಿಸಲಾಗಿದೆ.
NTCP 7

9. ಪ್ರಸ್ತುತ 36 ರಾಜ್ಯ / ಯು.ಟಿ.ಗಳ 712 ಜಿಲ್ಲೆಗಳಲ್ಲಿ ಈ ಕಾರ್ಯಕ್ರಮವನ್ನುಅನುಷ್ಠಾನಗೊಳಿಸಲಾಗುತ್ತಿದೆ.

ರಾಷ್ಟ್ರೀಯ ತಂಬಾಕು ನಿಯಂತ್ರಣಕಾ ರ್ಯಕ್ರಮದ ರಚನೆ

ರಾಷ್ಟ್ರೀಯ ಮಟ್ಟ :

  1. ಮಾಸ್‌ ಮೀಡಿಯಾ ಮುಖಾಂತರ ಸಾರ್ವಜನಿಕರಲ್ಲಿಅರಿವು ಮೂಡಿಸಿ ನಡವಳಿಕೆಯನ್ನು ಬದಲಿಸುವುದು
  2. ರಾಷ್ಟ್ರೀಯ ಮಟ್ಟದಲ್ಲಿ ತಂಬಾಕು ಪರೀಕ್ಷೆಗಾಗಿ ಲ್ಯಾಬ್‌ಗಳ ಸ್ಥಾಪನೆ
  3. ತಂಬಾಕುವಿಗೆ ಪರ್ಯಾಯ ಬೆಳೆ ಹಾಗು ಪರ್ಯಾಯ ಜೀವನೋಪಾಯಕ್ಕೆ ಮಾರ್ಗವನ್ನು, ಇತರೆ ಇಲಾಖೆಗಳ ಸಹಯೋಗದೊಂದಿಗೆ ತರಬೇತಿ ಹಾಗು ಪ್ರಯೋಗಗಳನ್ನು ನಡೆಸಿ ರೂಪಿಸುವುದು.
  4. ತಂಬಾಕು ಬಳಕೆಯ ಮೇಲೆ ನಿಗಾವಹಿಸುವುದು
  5. ಎನ್.ಹೆಚ್.ಎಂ. ನ ಚೌಕಟ್ಟನ್ನು ಮೀರದೆ ಇತರೆ ಆರೋಗ್ಯ-ಆರೈಕೆ ಪೂರೈಸುವ ಮಾರ್ಗಗಳೊಡನೆ ಸಮಗ್ರಗೊಳಿಸುವುದು

ರಾಜ್ಯ ಮಟ್ಟ :

  1. ರಾಜ್ಯ ಮಟ್ಟದ ಕಾರ್ಯಾಗಾರಗಳು
  2. ತರಬೇತಿದಾರರ ತರಬೇತಿಯನ್ನುಎನ್.ಟಿ.ಸಿ.ಪಿ ಅಡಿಯಲ್ಲಿ ನೇಮಕಗೊಂಡ ಸಿಬ್ಬಂದಿಗೆ ತರಬೇತಿ
  3. ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಿಬ್ಬಂದಿಗಳಿಗೆ ರಿಫ್ರೆಷರ್‌ ಟ್ರೈನಿಂಗ್‌ಗಳನ್ನು ಹಮ್ಮಿಕೊಳ್ಳುವುದು
  4. ವ್ಯಸನಮುಕ್ತಿಯ ಕುರಿತು ಆರೋಗ್ಯ ಕಾರ್ಯಕರ್ತರಿಗೆ ತರಬೇತಿ.
  5. ಅನುಷ್ಠಾನಾಧಿಕಾರಿಗಳ ತರಬೇತಿ / ಅರಿವು ಮೂಡಿಸುವುದು.

ಜಿಲ್ಲಾ ತಂಬಾಕು ನಿಯಂತ್ರಣ ಕೋಶ :

  1. ಆರೋಗ್ಯ ಹಾಗು ಸಮಾಜ ಕಾರ್ಯಕರ್ತರ, ಸರ್ಕಾರೇತರ ಸಂಸ್ಥೆಗಳ, ಹಾಗು ಅನುಷ್ಠಾನಾಧಿಕಾರಿಗಳ ತರಬೇತಿ.
  2. ಐ.ಇ.ಸಿ. ಚಟುವಟಿಕೆ.
  3. ಶಾಲಾ ಕಾರ್ಯಕ್ರಮಗಳು
  4. ತಂಬಾಕುನಿ ಯಂತ್ರಣದ ನಿಗಾ
  5. ತಂಬಾಕು ವ್ಯಸನಮುಕ್ತಿ ಕೆಂದ್ರದ ಮೂಲಕ ತಂಬಾಕು ದುಷ್ಚಟದಿಂದ ಹೊರಗೆ ಬರಲು ಔಷಧ ವಿತರಣೆ
  6. ಪಂಚಾಯತ್‌ ರಾಜ್‌ ಸಂಸ್ಥೆಯೊಂದಿಗೆ ಪ್ರತಿಯೊಂದು ಗ್ರಾಮದಲ್ಲಿ ತಂಬಾಕು ನಿಯಂತ್ರಣವನ್ನು ಅನುಷ್ಠಾನಗೊಳಿಸುವುದು

ಐ.ಇ.ಸಿ (ಮಾಹಿತಿ ಶಿಕ್ಷಣ ಸಂವಹನ)

ಶಿವಮೊಗ್ಗ ಜಿಲ್ಲಾ ತಂಬಾಕು ನಿಯಂತ್ರಣ ಕೋಶವು ಜಿಲ್ಲೆಯಲ್ಲಿಒಟ್ಟು 400 ಶಾಲೆಗಳಲ್ಲಿ ಕಾರ್ಯಕ್ರಮವನ್ನು ನಡೆಸಿದ್ದುಒಟ್ಟು 110 ಶಾಲೆಗಳನ್ನು ತಂಬಾಕುಮುಕ್ತ ಎಂದು ಘೋಷಿಸಲಾಗಿದೆ.

 1. ಜಿಲ್ಲೆಯ ಎಲ್ಲಾ 7 ತಾಲ್ಲೂಕುಗಳಲ್ಲಿ ಗುಲಾಬಿ ಆಂದೋಲನವನ್ನು ನಡೆಸಲಾಗಿ, ಮಕ್ಕಳ ಮೂಲಕ ವರ್ತಕರಲ್ಲಿ ಅರಿವು ಮೂಡಿಸಲಾಯಿತು
 2. ಶಾಲೆ / ಕಾಲೇಜಿನ 100 ಗಜಗಳಲ್ಲಿ ಹಳದಿಗೆರೆ (Yellow Line) ಮೂಲಕ ತಂಬಾಕು ಮುಕ್ತ ಶಾಲೆ ಎಂದು ಘೋಷಿಸಲಾಗಿದೆ. ಜಿಲ್ಲೆಯಲ್ಲಿ ಕಳೆದ 02 ವರ್ಷಗಳಲ್ಲಿ ಒಟ್ಟು 150 ಶಾಲೆಗಳಲ್ಲಿ ಇಂತಹ ಹಳದಿಪಟ್ಟಿಯನ್ನು / ಗೆರೆಗಯನ್ನು ಬರೆಸಲಾಗಿದೆ.
 3. ಜಿಲ್ಲಾ ತಂಬಾಕು ನಿಯಂತ್ರಣ ಕೋಶವು ಕಳೆದ ೫ ವರ್ಷಗಳಲ್ಲಿ ರೇಡಿಯೋ ಶೋಗಳನ್ನು, ಜಾಹೀರಾತು ಫಲಕಗಳನ್ನು, ಆಟೋಮೈಕಿಂಗ್‌, ಪೋಸ್ಟರ್‌ಗಳನ್ನು ಐ.ಇ.ಸಿ. ಚಟುವಟಿಕೆಯಾಗಿ ಬಳಸಿಕೊಂಡಿದೆ.

ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಮುಖ್ಯ ಉದ್ದೇಶಗಳು.

  1. ತರಬೇತಿ: ಆರೋಗ್ಯ ಮತ್ತು ಸಮಾಜ ಕಾರ್ಯಕರ್ತರು, ಶಾಲಾಪ್ರಾಧ್ಯಾಪಕರು, ಅನುಷ್ಠಾನಾಧಿಕಾರಿಗಳು.
  2. ಐ.ಇ.ಸಿ.
  3. ಶಾಲಾ ಕಾರ್ಯಕ್ರಮ
  4. ತಂಬಾಕುನಿಯಂತ್ರಣದನಿಗಾ
  5. ತಂಬಾಕು ವ್ಯಸನಮುಕ್ತಿ ಕೇಂದ್ರ ಸ್ಥಾಪನೆ ಹಾಗು ಅದರ ಬಲವರ್ಧನೆ
  6. ವಿವಿಧ ಇಲಾಖೆಗಳ ಜೊತೆ ಸಮನ್ವಯ ಸಾಧಿಸುವುದು

ದಾಖಲೆಗಳು

COTPA ಉಲ್ಲಂಘನೆ ದೂರುಗಳನ್ನು ನೋಂದಾಯಿಸಲು stoptobacco ಮೊಬೈಲ್ ಅಪ್ಲಿಕೇಶನ್.

Enforcement data 2016-2020 (Health)

ಕ್ರ. ಸಂ

COTPA ಪ್ರಕರಣಗಳ ಸಂಖ್ಯೆ
Sec 4 , 6A, 6B

ಸಂಗ್ರಹಿಸಿದ ದಂಡ ಮೊತ್ತ

Sec 5 ದಾಖಲಾದ ಪ್ರಕರಣಗಳು

Sec 7 ದಾಖಲಾದ ಪ್ರಕರಣಗಳು

1

7035

413612/-

55

2