ಶಿವಮೊಗ್ಗ ಪೊಲೀಸ್ ಬಗ್ಗೆ
ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ಪೊಲೀಸ್‍ರವರು ಮುಖ್ಯ ಆಡಳಿತಾಧಿಕಾರಿಯಾಗಿರುತ್ತಾರೆ. ಕರ್ನಾಟಕ ರಾಜ್ಯದ ಪೊಲೀಸ್ ವ್ಯವಸ್ಥೆಗೆ ಮಹಾ ನಿರ್ದೇಶಕರು ಮತ್ತು ಇನ್ಸ್‍ಪೇಕ್ಟರ್ ಜನರಲ್ ಅಫ್ ಪೊಲೀಸ್, ಬೆಂಗಳೂರು ರವರು ಜವಾಬ್ದಾರಿಯನ್ನು ಹೊಂದಿರುತ್ತಾರೆ. ಶಿವಮೊಗ್ಗ ಜಿಲ್ಲೆಯು ಇನ್ಸ್‍ಪೆಕ್ಟರ್ ಜನರಲ್ ಅಫ್ ಪೊಲೀಸ್ ರವರು ಪೂರ್ವವಲ, ದಾವಣಗೆರೆ ಇವರ ಅಧೀನಕ್ಕೆ ಒಳಪಟ್ಟಿರುತ್ತದೆ. ಇವರು ನಾಲ್ಕು ಜಿಲ್ಲೆಗಳ(ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಹಾವೇರಿ) ಉಸ್ತುವಾರಿಯನ್ನು ನೋಡಿಕೊಳ್ಳುತ್ತಾರೆ.
ಪೊಲೀಸ್ ಅಧೀಕ್ಷಕರು, ಇಲಾಖೆಗಳ ಆಂತರೀಕ ನಿರ್ವಹಣೆ ಮತ್ತು ಅರ್ಥಿಕತೆ, ಶಿಸ್ತಿನ ನಿರ್ವಹಣೆ, ಕಾನೂನು ಸುವ್ಯಸ್ಥೆಯ ಕಾಪಾಡುವಲ್ಲಿ ಹೆಚ್ಚಿನ ಜವಾಬ್ದಾರಿಯನ್ನು ಹೊಂದಿರುತ್ತಾರೆ.
ಶಿವಮೊಗ್ಗ ಜಿಲ್ಲಾ ಪೊಲೀಸ್ ಉತ್ತಮ ಆಡಳಿತ ವ್ಯವಸ್ಥೆಗಾಗಿ 5 ಉಪ-ವಿಭಾಗಳಾಗಿ ವಿಂಗಡಿಸಲಾಗಿದೆ. ಇದರ ಮುಖ್ಯ ಅಧಿಕಾರಿ ಪೊಲೀಸ್ ಉಪಾಧೀಕ್ಷಕರು/ ಸಹಾಯಕ ಪೊಲೀಸ್ ಅಧೀಕ್ಷಕರು ಕಾರ್ಯನಿರ್ವಹಿಸುತ್ತಾರೆ. ಕ್ರಮವಾಗಿ ಶಿವಮೊಗ್ಗ, ಭದ್ರಾವತಿ, ಸಾಗರ, ಶಿಕಾರಿಪುರ ಮತ್ತು ತೀರ್ಥಹಳ್ಳಿಯಲ್ಲಿ ಉಪ-ವಿಭಾಗದ ಕಛೇರಿಗಳನ್ನು ಹೊಂದಿದೆ.
- ಶಿವಮೊಗ್ಗ ಉಪ-ವಿಭಾಗವು 3 ವೃತ್ತಗಳನ್ನು ಹೊಂದಿದ್ದು, ಶಿವಮೊಗ್ಗ ಗ್ರಾಮಾಂತರ, ಕೋಟೆ, ದೊಡ್ಡಪೇಟೆ ವೃತ್ತಗಳನ್ನು ಹೊಂದಿದೆ.10 ಪೊಲೀಸ್ ಠಾಣೆಗಳು ಇರುತ್ತವೆ.
- ಭದ್ರಾವತಿ ಉಪ ವಿಭಾಗದಲ್ಲಿ 2 ವೃತ್ತಗಳು ಇದ್ದು, ಭದ್ರಾವತಿ ನಗರ ವೃತ್ತ, ಭದ್ರಾವತಿ ಗ್ರಾಮಾಂತರ ವೃತ್ತಗಳಾಗಿರುತ್ತವೆ. 7 ಪೊಲೀಸ್ ಠಾಣೆಗಳನ್ನು ಹೊಂದಿರುತ್ತದೆ.
- ಸಾಗರ ಉಪ ವಿಭಾಗವು 1 ವೃತ್ತವನ್ನು ಹೊಂದಿದ್ದು, 1 ಪಿಐ ಸಾಗರ ಪೊಲೀಸ್ ಠಾಣೆಯನ್ನು ಹೊಂದಿದ್ದು, ಪಿಐರವರು ಠಾಣಾಧಿಕಾರಿಯಾಗಿರುತ್ತಾರೆ. 3 ಪೊಲೀಸ್ ಠಾಣೆಗಳನ್ನು ಹೊಂದಿರುತ್ತದೆ.
- ಶಿಕಾರಿಪುರ ಉಪ ವಿಭಾಗವು 2 ವೃತ್ತವನ್ನು ಹೊಂದಿದ್ದು, ಶಿಕಾರಿಪುರ ವೃತ್ತ ಮತ್ತು ಸೊರಬ ವೃತ್ತಗಳಾಗಿರುತ್ತದೆ. 5 ಪೊಲೀಸ್ ಠಾಣೆಗಳನ್ನು ಒಳಗೊಂಡಿರುತ್ತದೆ.
- ತೀರ್ಥಹಳ್ಳಿ ಉಪ- ವಿಭಾಗವು 2 ವೃತ್ತವನ್ನು ಹೊಂದಿದು, ತೀರ್ಥಹಳ್ಳಿ ವೃತ್ತ ಮತ್ತು ಹೊಸನಗರ ವೃತ್ತಗಳಿರುತ್ತವೆ. ಒಟ್ಟು 6 ಪೊಲೀಸ್ ಠಾಣೆಗಳನ್ನು ಹೊಂದಿರುತ್ತದೆ. ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟು 17 ಉಪ ಠಾಣೆ(Out Post) ಗಳನ್ನು ಹೊಂದಿರುತ್ತವೆ.
- ಸಿಇಎನ್(ಸೈಬರ್ ಕ್ರೈಂ ಪೊಲೀಸ್ ಠಾಣೆ): ಈ ಠಾಣೆಯ ಉಸ್ತುವಾರಿಯನ್ನು ಪೊಲೀಸ್ ಇನ್ಸ್‍ಪೆಕ್ಟರ್‍ರವರು ವಹಿಸಿರುತ್ತಾರೆ, ಈ ಠಾಣೆಯು ಸೈಬರ್‍ಗೆ ಸಂಬಂಧಿಸಿದ ಅಪರಾಧಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ತನಿಖೆ ಮಾಡುತ್ತದೆ.