ಮುಚ್ಚಿ

ಯೋಜನೆಗಳು

Filter scheme by category

ಫಿಲ್ಟರ್

ಅನಿಲ ಯೋಜನೆ

ರಾಷ್ಟ್ರೀಯ ಜೈವಾನಿಲ ಅಭಿವೃದ್ಧಿ ಕಾರ್ಯಕ್ರಮವು ಕೇಂದ್ರ ಪುರಸ್ಕೃತ ಕಾರ್ಯಕ್ರಮವಾಗಿದ್ದು, 1982-83ನೇ ಸಾಲಿನಿಂದ ಇದುವರೆವಿಗೂ ಅನುಷ್ಠಾನಗೊಳ್ಳಲಾಗುತ್ತಿದ್ದು, ಶೇ.100 ಮಹಿಳೆಯರಿಗಾಗಿಯೇ ಇರುವ ಕಾರ್ಯಕ್ರಮವಾಗಿರುತ್ತದೆ. ಜೈವಾನಿಲವು ಸ್ವಚ್ಛ, ಮಾಲಿನ್ಯ ಹೊಗೆರಹಿತ ಹಾಗೂ ಸ್ಫೋಟಗೊಳ್ಳದ ಅಪಾಯರಹಿತ ಇಂಧನ ತ್ಯಾಜ್ಯ ವಸ್ತುಗಳಾದ ಸಗಣಿ, ಪ್ರಾಣಿ ಮತ್ತು ಮಾನವ ಮಲ ಮೂತ್ರ ಮತ್ತು ಇತರೆ ಸಸ್ಯಜನ್ಯ ಪದಾರ್ಥಗಳನ್ನು ಆಮ್ಲಜನಕ ರಹಿತ ವಾತಾವರಣದಲ್ಲಿನ ಜೈವಿಕ ಕ್ರಿಯೆಯಿಂದ ದೊರೆಯುವ ಸಂಯುಕ್ತ ಅನಿಲವೇ ಜೈವಿಕ ಅನಿಲ. ರಾಜ್ಯದಲ್ಲಿ ಗ್ರಾಮೀಣ ಇಂಧನ ಕಾರ್ಯಕ್ರಮಗಳು ನವೀಕರಿಸಬಹುದಾದ ಶಕ್ತಿ ಮೂಲಗಳ ಗುಣಾತ್ಮಕ ಮತ್ತು ಪರಿಣಾಮಕಾರಿ ಬಳಕೆಯ ಮೂಲ ಉದ್ದೇಶವನ್ನು ಹೊಂದಿದೆ.

ಪ್ರಕಟಣೆಯ ದಿನಾಂಕ: 21/12/2018
ವಿವರಗಳನ್ನು ವೀಕ್ಷಿಸಿ

ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ಕಾರ್ಯಕ್ರಮ

ರಾಜ್ಯ 59,753 ಗ್ರಾಮೀಣ ಜನವಸತಿಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಸುರಕ್ಷಿತ ಕುಡಿಯುವ ನೀರನ್ನು ಒದಗಿಸುವ ಮೂಲಕ ಜನರ ಜೀವನ ಮಟ್ಟವನ್ನು ಸುಧಾರಿಸಲು ಸರ್ಕಾರ ಹೆಚ್ಚಿನ ಮಹತ್ವನ್ನು ನೀಡಿದೆ. ಪ್ರತಿ ದಿನ ಪ್ರತಿ ವ್ಯಕ್ತಿಗೆ ತಲಾ 55 ಲೀಟರ್ ಕುಡಿಯುವ ನೀರು ಒದಗಿಸುವ ಉದ್ದೇಶವನ್ನು ಸರ್ಕಾರ ತಳೆದಿದೆ. ಗ್ರಾಮೀಣ ಪ್ರದೇಶಗಳಿಗೆ ಕೆಳಕಂಡ ಕಾರ್ಯಕ್ರಮಗಳ ಮೂಲಕ ಸುರಕ್ಷಿತ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ. (ಎನ್.ಆರ್.ಡಿ.ಡಬ್ಲ್ಯೂ.ಪಿ ಮಾರ್ಗಸೂಚಿ -2013 ರಂತೆ) ಕೊಳವೆ ನೀರು ಸರಬರಾಜು ಯೋಜನೆ ಕಿರು ನೀರು ಸರಬರಾಜು ಯೋಜನೆ ಕೈಪಂಪು ಕೊಳವೆ ಬಾವಿ ಬಹುಗ್ರಾಮ ಪೂರೈಕೆ ಯೋಜನೆಗಳು

ಪ್ರಕಟಣೆಯ ದಿನಾಂಕ: 21/12/2018
ವಿವರಗಳನ್ನು ವೀಕ್ಷಿಸಿ

ಸಂಜೀವಿನಿ ಏನ್ ಆರ್ ಎಲ್ ಎಂ

ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಮಂತ್ರಾಲಯವು ಎಸ್ ಜಿಎಸ್ ವೈ ಯೋಜನೆಯನ್ನು ಪುನರ್ ರಚಿಸಿ ಆಜೀವಿಕ –ನ್ಯಾಷನಲ್ ರೂರಲ್ ಲೈವ್ಲಿ ಹುಡ್ ಮಿಷನ್ (ಎನ್ ಆರ್ ಎಲ್ ಎಂ) 2010-11ರಿಂದ ಜಾರಿಗೊಳಿಸಿದೆ. ಇದರನ್ವಯ ರಾಜ್ಯ ಸರ್ಕಾರವು ರಾಜ್ಯದಲ್ಲಿ ಆಜೀವಿಕ ಯೋಜನೆಯನ್ನು “ಸಂಜೀವಿನಿ’’ ಹೆಸರಿನಲ್ಲಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ (ಕೆ.ಎಸ್.ಆರ್.ಎಲ್.ಪಿ.ಎಸ್) ಮೂಲಕ ಹಂತ ಹಂತವಾಗಿ ರಾಜ್ಯದಲ್ಲಿ ಜಾರಿಗೊಳಿಸಲಾಗುತ್ತಿದೆ.

ಪ್ರಕಟಣೆಯ ದಿನಾಂಕ: 21/12/2018
ವಿವರಗಳನ್ನು ವೀಕ್ಷಿಸಿ

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಎಂ ಎನ್ ಆರ್ ಈ ಜಿ ಎಸ್) 2005 ರ ಆಗಸ್ಟ್ 25 ರಂದು ಭಾರತೀಯ ಶಾಸನವನ್ನು ಜಾರಿಗೊಳಿಸಿತು. ಯಾವುದೇ ಗ್ರಾಮೀಣ ವಯಸ್ಕರ ಸದಸ್ಯರಿಗೆ ಪ್ರತಿ ಹಣಕಾಸು ವರ್ಷದಲ್ಲಿ ನೂರು ದಿನಗಳ ಉದ್ಯೋಗಕ್ಕಾಗಿ ಎಂಜಿಎನ್ಆರ್ಇಜಿಎ ಕಾನೂನುಬದ್ಧ ಭರವಸೆ ನೀಡುತ್ತದೆ ಶಾಸನಬದ್ಧ ಕನಿಷ್ಠ ವೇತನದಲ್ಲಿ ಸಾರ್ವಜನಿಕ ಕೆಲಸಕ್ಕೆ ಸಂಬಂಧಿಸಿದ ಕೌಶಲ್ಯರಲ್ಲದ ಕೈಪಿಡಿಯ ಕೆಲಸ ಮಾಡಲು ಸಿದ್ಧರಿದ್ದಾರೆ. ಗ್ರಾಮೀಣಾಭಿವೃದ್ಧಿ ಸಚಿವಾಲಯ (ಎಂ ಆರ್ ಡಿ), ಈ ಸರ್ಕಾರದ ಸಂಪೂರ್ಣ ಅನುಷ್ಠಾನವನ್ನು ರಾಜ್ಯ ಸರ್ಕಾರಗಳು ಸಹಯೋಗದಲ್ಲಿ ಭಾರತ ಸರ್ಕಾರವು ನೋಡಿಕೊಳ್ಳುತ್ತಿದೆ. ಎಂ ಎನ್ ಆರ್ ಈ ಜಿ ಎಸ್ ಗುರಿಗಳು: 1. ಇತರ…

ಪ್ರಕಟಣೆಯ ದಿನಾಂಕ: 21/12/2018
ವಿವರಗಳನ್ನು ವೀಕ್ಷಿಸಿ