ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಕುರಿತು
ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮವು ೨೦೦೭-೦೮ ರಲ್ಲಿ ೧೧ನೇ ಪಂಚವಾರ್ಷಿಕ ಯೋಜನೆಯಡಿಯಲ್ಲಿ ಪ್ರಾರಂಭಿಸಲಾಯಿತು. ಇದರ ಮುಖ್ಯ ಉದ್ದೇಶ,
- ತಂಬಾಕು ಬಳಕೆಯ ದುಷ್ಪರಿಣಾಮದ ಕುರಿತು ಅರಿವು ಮೂಡಿಸುವುದು.
- ತಂಬಾಕು ಉತ್ಪನ್ನಗಳ ಉತ್ಪಾದನೆ ಹಾಗು ಸಪ್ಲೈಮೇಲೆ ನಿರ್ಬಂಧ ಹೇರುವುದು.
- “ಸಿಗರೇಟು ಹಾಗುಇತರತಂಬಾಕು ಉತ್ಪನ್ನಗಳ ನಿಯಂತ್ರಣ ಕಾಯಿದೆ”ಯನ್ನು ಸಮರ್ಪಕವಾಗಿ ಅನುಷ್ಠಾನ ಮಾಡುವುದು.
- ತಂಬಾಕು ವ್ಯಸನ ಮುಕ್ತಿಗೆ ಸಹಾಯ ಮಾಡುವುದು.
- WHO Framework Convention of Tobacco Control ನ ಅಂಶಗಳನ್ನು ಅನುಷ್ಠಾನಮಾಡಲು ರೂಪುರೇಶೆಯನ್ನು ತಯಾರುಮಾಡುವುದು.
೧೧ನೇ ಪಂಚವಾರ್ಷಿಕ ಯೋಜನೆಯಡಿಯಲ್ಲಿ ೨೧ ರಾಜ್ಯಗಳ ೪೨ ಜಿಲ್ಲೆಗಳಲ್ಲಿ ಮೊದಲು ಶುರುಮಾಡಲಾಗಿತ್ತು. ೧೧ನೇ ಪಂಚವಾರ್ಷಿಕ ಯೋಜನೆಯಡಿಯಲ್ಲಿ ಈ ಕಾರ್ಯಕ್ರಮದ ಸಫಲತೆಯನ್ನು ಕಂಡು ಹಾಗು ೨೦೦೯-೧೦ರ ಗ್ಲೋಬಲ್ ಅಡಲ್ಟ್ ಟೊಬಾಕೋ ಸರ್ವೆ (GATS) ರಲ್ಲಿಇರುವ ಶೇಕಡವಾರು ತಂಬಾಕು ಬಳಕೆಯನ್ನು ಶೇ. ೫ ರಷ್ಟು ಕಡಿಮೆ ಮಾಡಲು ೨ನೇ ಪಂಚವಾರ್ಷಿಕ ಯೋಜನೆಯಲ್ಲಿ ಇದನ್ನು ಇನ್ನೂ ಹೆಚ್ಚಿನ ರಾಜ್ಯಗಳು ಹಾಗು ಜಿಲ್ಲೆಗಳಿಗೆ ಜಾರಿಗೊಳಿಸಲಾಗಿತ್ತು. ಗ್ಲೋಬಲ್ ಅಡಲ್ಟ್ ಟೊಬಾಕೋ ಸರ್ವೆ (GATS) ನ ಎರಡನೇ ಆವೃತ್ತಿ ಬಿಡುಗಡೆಯ ಹೊತ್ತಿಗೆ ದೇಶದಲ್ಲಿ ೮೧ ತಂಬಾಕುಬಳಕೆಯು ೮೧ ಲಕ್ಷದಷ್ಟು ಕಡಿಮೆಯಾಗಿದೆ.