ಮೀಸಲಾತಿ : 11 ಜನ ರೈತ ಪ್ರತಿನಿಧಿಗಳ ಪೈಕಿ ಈ ಕೆಳಗಿನಂತೆ 06 ಸ್ಥಾನಗಳನ್ನು ಮೀಸಲಾಗಿಡಲಾಗಿದೆ.
- ಮಹಿಳೆಯರು-02
- ಪರಿಶಿಷ್ಟ ಜಾತಿ-01
- ಪರಿಶಿಷ್ಟ ಪಂಗಡ-01
- ಹಿಂದುಳಿದ ಜಾತಿ-02
ಮಾನ್ಯ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು 11 ಜನ ರೈತ ಪ್ರತಿನಿಧಿಗಳಲ್ಲಿ ಒಬ್ಬರಾಗಿರುತ್ತಾರೆ.
ಮೀಸಲಾತಿ : 11 ಜನ ರೈತ ಪ್ರತಿನಿಧಿಗಳ ಪೈಕಿ ಈ ಕೆಳಗಿನಂತೆ 06 ಸ್ಥಾನಗಳನ್ನು ಮೀಸಲಾಗಿಡಲಾಗಿದೆ.
ಮಾನ್ಯ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು 11 ಜನ ರೈತ ಪ್ರತಿನಿಧಿಗಳಲ್ಲಿ ಒಬ್ಬರಾಗಿರುತ್ತಾರೆ.
ಪರಿಚಯ
ಕೃಷಿ ಮಾರಾಟ ಇಲಾಖೆಯು ರೈತರು ಬೆಳೆದ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆಯನ್ನು ಕಲ್ಪಿಸುವ ಸಲುವಾಗಿ ರಾಜ್ಯಾದ್ಯಂತ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳನ್ನು ಸ್ಥಾಪಿಸಿದೆ. ರಾಜ್ಯದಲ್ಲಿ 162 ಮುಖ್ಯ ಮಾರುಕಟ್ಟೆಗಳಿದ್ದು, 352 ಉಪ ಮಾರುಕಟ್ಟೆಗಳಿರುತ್ತದೆ. ಪ್ರತಿಯೊಂದು ಮಾರುಕಟ್ಟೆ ಸಮಿತಿಗಳಲ್ಲಿ ಆಡಳಿತ ಮಂಡಳಿಯಲ್ಲಿ 18 ಜನ ಸದಸ್ಯರಿರುತ್ತಾರೆ.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ರಚನೆ
ಕ್ರ. ಸಂ. |
ಪ್ರತಿನಿಧಿಸುವ ಕ್ಷೇತ್ರ |
ಸಂಖ್ಯೆ |
1. |
ರೈತರು |
11 |
2. |
ಸಹಕಾರಿ ಮಾರಾಟ ಸಂಘ |
01 |
3. |
ಸಹಕಾರಿ ಸಂಸ್ಕರಣ ಸಂಘ |
01 |
4. |
ವ್ಯಾಪಾರಸ್ಥರು / ದಲ್ಲಾಲರು |
01 |
5. |
ಕೃಷಿ ಮಾರಾಟ ನಿರ್ದೇಶಕರ ಪ್ರತಿನಿಧಿ |
01 |
6. |
ರಾಜ್ಯ ಸರ್ಕಾರದಿಂದ ನಾಮಕರಣ ಹೊಂದಿದವರು |
03 |
|
ಒಟ್ಟು ಸ್ಥಾನಗಳು |
18 |
ಇಲಾಖೆಯ ಕಾರ್ಯ ವ್ಯಾಪ್ತಿ, ಇತಿಹಾಸ ಮತ್ತು ಗುರಿ :
ಕೃಷಿ ಮಾರಾಟ ಇಲಾಖೆಯು 1972 ರಲ್ಲಿ ಸಹಕಾರ ಇಲಾಖೆಯಿಂದ ಬೇರ್ಪಟ್ಟು ಸ್ವತಂತ್ರ ಇಲಾಖೆಯಾಗಿ ಕಾರ್ಯ ನಿರ್ವಹಿಸುತ್ತಿದೆ.
ಕೃಷಿ ಉತ್ಪನ್ನ ಮಾರುಕಟ್ಟೆ ಸ್ಥಾಪನೆಯ ಉದ್ದೇಶ ಹಾಗೂ ಪ್ರಯೋಜನಗಳು
ಮುಖ್ಯ ಯೋಜನೆಗಳು, ಯೋಜನೆಗಳ ವಿವರ, ಸಾಧಿಸಿದ ಪ್ರಗತಿ, ಕೇಂದ್ರ, ರಾಜ್ಯ ಹಾಗೂ ಜಿಲ್ಲಾ ವಲಯ
1. ಅಡಮಾನ ಸಾಲ ಯೋಜನೆ
ರೈತರ ಉತ್ಪನ್ನಗಳಿಗೆ ಸ್ಪರ್ಧಾತ್ಮಕ ಬೆಲೆ ದೊರೆಯುವಂತೆ ಪ್ರಯತ್ನಿಸುವುದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ ಮುಖ್ಯ ಉದ್ದೇಶವಾಗಿರುತ್ತದೆ. ರೈತರು ತಮ್ಮ ಉತ್ಪನ್ನವನ್ನು ಹತಾಶ ಸ್ಥಿತಿಯಲ್ಲಿ ಮಾರಾಟ ಮಾಡುವುದನ್ನು ತಪ್ಪಿಸಲು, ರೈತರಿಗೆ ಸುಗ್ಗಿಯ ಕಾಲದಲ್ಲಿ ಆರ್ಥಿಕ ಸೌಲಭ್ಯವನ್ನು ಒದಿಗಿಸುವುದು. ತೀರಾ ಅಗತ್ಯ ಆದುದರಿಂದ ಮಾರುಕಟ್ಟೆ ಸಮಿತಿಗಳಲ್ಲಿ ರೈತರಿಗೆ ಕೃಷಿ ಉತ್ಪನ್ನ ಅಡಮಾನ ಸಾಲ ಯೋಜನೆಯನ್ನು ರೂಪಿಸಲಾಗಿದೆ.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಶಿವಮೊಗ್ಗ: ಇದುವರೆಗೂ ಒಟ್ಟು 105 ರೈತರಿಗೆ ಒಟ್ಟು ರೂ. 1,43,66,097-00 ಗಳ ಅಡಮಾನ ಸಾಲ ನೀಡಲಾಗಿರುತ್ತದೆ.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಭದ್ರಾವತಿ: ಈ ಯೋಜನೆಯಡಿ ಉಳಿತಾಯ ಖಾತೆಯಲ್ಲಿ ರೂ.3,07,711-00 ಗಳು ಮತ್ತು ನಿಶ್ಚಿತ ಠೇವಣಿಯಲ್ಲಿ ರೂ.5.00 ಲಕ್ಷ ಇರುತ್ತದೆ. ಆದರೆ ರೈತರುಗಳಿಂದ ಯಾವುದೇ ಮನವಿ ಸ್ವೀಕೃತವಾಗಿರುವುದಿಲ್ಲ.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ತೀರ್ಥಹಳ್ಳಿ : ಇಲ್ಲಿಯವರೆಗೆ 53 ಜನ ರೈತರಿಗೆ ಒಟ್ಟು ರೂ. 52,83,636-00 ಗಳನ್ನು ಅಡಮಾನ ಸಾಲ ಯೋಜನೆಯಡಿ ಸಾಲ ನೀಡಲಾಗಿತ್ತು. ಈವರೆಗೆ ಸಾಲ ಪಡೆದ 53 ರೈತರು ರೂ. 52,83,636-00 ಗಳ ಮೊತ್ತವನ್ನು ಮರುಪಾವತಿಸಿರುತ್ತಾರೆ. ಹಾಗೂ ನಿಯಮಾನುಸಾರ ಒಟ್ಟು ಬಡ್ಡಿ ಮೊತ್ತ ರೂ. 53,774-00 ಗಳನ್ನು ವಸೂಲು ಮಾಡಲಾಗಿರುತ್ತದೆ.
2. ರೈತ ಸಂಜೀವಿನಿ ಅಪಘಾತ ವಿಮಾ ಯೋಜನೆ
ರೈತರು ಮತ್ತು ಅವರ ಕುಟುಂಬ ವರ್ಗದವರು ಕೃಷಿ ಚಟುವಟಿಕೆಗಳಲ್ಲಿ ತೊಡಗಿರುವಾಗ ಇಲ್ಲವೇ ತಾವು ಬೆಳೆದ ಕೃಷಿ ಉತ್ಪನ್ನಗಳ ಮಾರಾಟ ಕಾರ್ಯದಲ್ಲಿ ತೊಡಗಿರುವಾಗ ಅಪಘಾತಕ್ಕೀಡಾದಲ್ಲಿ ಅಂತಹ ರೈತರ ಕುಟುಂಬಗಳಿಗೆ ಆರ್ಥಿಕ ಭದ್ರತೆ ಒದಗಿಸಲು ದಿನಾಂಕ : 29/07/2016 ರಿಂದ ಅನ್ವಯವಾಗುವಂತೆ ಪರಿಷ್ಕೃತ ರೈತ ಸಂಜೀವಿನಿ ಅಪಘಾತ ವಿಮಾ ಯೋಜನೆಯನ್ನು ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯು ಕೃಷಿ ಉತ್ಪನ್ನ ಮಾರುಕಟ್ಟೆ ಸಹಯೋಗದೊಂದಿಗೆ ಜಾರಿಗೆ ತಂದಿರುತ್ತದೆ. ವಿವರಗಳು ಕೆಳಗಿನಂತಿವೆ. (ರೂ. ಗಳಲ್ಲಿ)
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಶಿವಮೊಗ್ಗ: ರೈತಸಂಜೀವಿನಿ ಅಪಘಾತ ವಿಮಾ ಯೋಜನೆಯಡಿಯಲ್ಲಿ ಒಟ್ಟು 120 ಜನ ರೈತರಿಗೆ ರೂ.52,94,500-00 ಗಳ ಮೊತ್ತವನ್ನು ವಿತರಿಸಲಾಗಿದೆ.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಭದ್ರಾವತಿ : ಈ ಯೋಜನೆಯಲ್ಲಿ ಇದುವರೆವಿಗೂ 33 ಜನರಿಗೆ ರೂ.1072,000-00 ಗಳ ವಿಮಾ ಪರಿಹಾರವನ್ನು ಮಂಜೂರು ಮಾಡಲಾಗಿದೆ.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ತೀರ್ಥಹಳ್ಳಿ : ಸಮಿತಿಯಿಂದ ಒಟ್ಟು 07 ಜನ ಫಲಾನುಭವಿಗಳಿಗೆ ರೂ. 1,83,000-00 ಗಳ ಪರಿಹಾರ ಧನವನ್ನು ನೀಡಲಾಗಿದೆ.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಶಿಕಾರಿಪುರ : ಈ ಯೋಜನೆಯಲ್ಲಿ ಇಲ್ಲಿಯವರೆಗೆ 143 ಜನ ರೈತ ಫಲಾನುಭವಿಗಳಿಗೆ ರೂ. 41,44,000-00 ಗಳ ಪರಿಹಾರ ಧನವನ್ನು ವಿತರಿಸಲಾಗಿರುತ್ತದೆ.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಸೊರಬ : ರೈತ ಸಂಜೀವಿನ ಅಪಘಾತ ವಿಮಾ ಯೋಜನೆಯಡಿಯಲ್ಲಿ ಒಟ್ಟು 18 ಜನ ರೈತರಿಗೆ ಒಟ್ಟು ರೂ. 12,75,000-00 ಗಳ ಮೊತ್ತವನ್ನು ವಿತರಿಸಲಾಗಿದೆ.
3. ಹಮಾಲರ ವಸತಿ ಯೋಜನೆ ಮತ್ತು ಹಮಾಲರ ಕಲ್ಯಾಣ ನಿಧಿ ಯೋಜನೆ
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಶಿವಮೊಗ್ಗ :
ಹಮಾಲರ ಕಲ್ಯಾಣ ನಿಧಿ ಯೋಜನೆಯಡಿ ಸಮಿತಿಯಿಂದ ಲೈಸೆನ್ಸ್ ಪಡೆದ ಹಮಾಲರು ಮೃತಪಟ್ಟಲ್ಲಿ ಕೃಷಿ ಮಾರಾಟ ಮಂಡಳಿಯಿಂದ ಶವಸಂಸ್ಕಾರಕ್ಕಾಗಿ ರೂ. 10,000-00 ಗಳನ್ನು ಹಾಗೂ ವಿಮಾ ಮೊತ್ತವನ್ನು ನೀಡಲಾಗುವುದು.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಭದ್ರಾವತಿ : ಈ ಸಮಿತಿಯಿಂದ ಹಮಾಲರ ವಸತಿ ಯೋಜನೆಯಡಿ 45 ಜನ ಹಮಾಲರಿಗೆ ವಸತಿ ಸೌಲಭ್ಯ ಕಲ್ಪಿಸಿ ಕೊಡಲಾಗಿದೆ.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಸೊರಬ : ಹಮಾಲರ ಕಲ್ಯಾಣ ನಿಧಿ ಯೋಜನೆಯಡಿ ಸಮಿತಿಯಿಂದ ಲೈಸೆನ್ಸ್ ಪಡೆದ ಹಮಾಲರು ಮೃತಪಟ್ಟಲ್ಲಿ ಕೃಷಿ ಮಾರಾಟ ಮಂಡಳಿಯಿಂದ ಶವಸಂಸ್ಕಾರಕ್ಕಾಗಿ ರೂ. 10,000-00 ಗಳನ್ನು ಹಾಗೂ ವಿಮಾ ಮೊತ್ತವನ್ನು ನೀಡಲಾಗುವುದು.
4. ಜನಶ್ರೀ ವಿಮಾ ಯೋಜನೆ :
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಶಿವಮೊಗ್ಗ : ಜನಶ್ರೀ ವಿಮಾ ಯೋಜನೆ(ಸಾಮೂಹಿಕ ವಿಮಾ ಯೋಜನೆಯಡಿಯಲ್ಲಿ) ಸಮಿತಿಯಿಂದ ಲೈಸೆನ್ಸ್ ಪಡೆದ 77 ಸಂಖ್ಯೆ ಹಮಾಲರಿಗೆ ಹಾಗೂ 32 ಸಂಖ್ಯೆ ತೂಕದವರು ತಲಾ ರೂ. 152-00 ಗಳಂತೆ ವರ್ಷಕ್ಕೆ 109 ಜನಕ್ಕೆ (2019-20 ನೇ ಸಾಲಿನಲ್ಲಿ) ವಿಮಾ ಕಂತನ್ನು ಸಮಿತಿಯಿಂದಲೇ ಭರಿಸಲಾಗಿದೆ.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಭದ್ರಾವತಿ : ಈ ಯೋಜನೆಯಡಿ 2019-20 ನೇ ಸಾಲಿನಲ್ಲಿ 158 ಜನ ಹಮಾಲರು ನೋಂದಾಯಿಸಿಕೊಂಡು ಒಟ್ಟು ರೂ.24,422-00 ಗಳ ಪ್ರೀಮಿಯಂ ಮೊತ್ತವನ್ನು ಸಮಿತಿಯಿಂದ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಗೆ ಪಾವತಿಸಲಾಗಿರುತ್ತದೆ.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಸೊರಬ : ಜನಶ್ರೀ ವಿಮಾ ಯೋಜನೆ (ಸಾಮೂಹಿಕ ವಿಮಾ ಯೋಜನೆಯಡಿಯಲ್ಲಿ) ಸಮಿತಿಯಿಂದ ಲೈಸೆನ್ಸ್ ಪಡೆದ 83 ಸಂಖ್ಯೆ ಹಮಾಲರು, 02 ಸಂಖ್ಯೆ ತೂಕದವರಿಗೆ ಜನಶ್ರೀ ವಿಮಾ ಯೋಜನೆಯನ್ನು ನೀಡಲಾಗುತ್ತಿದೆ.
ರೈತರಿಗೆ ಆಗುವ ಪ್ರಯೋಜನಗಳು
ಮಾರುಕಟ್ಟೆ ಭಾಗೀದಾರರಿಗೆ ಆಗುವ ಪ್ರಯೋಜನಗಳು
ವರ್ತಕರಿಗೆ :
ದಲ್ಲಾಲರಿಗೆ :
ವಿ.ಆರ್. ಜಯಕುಮಾರ್,
ಉಪ ನಿರ್ದೇಶಕರು
ಕೃಷಿ ಮಾರಾಟ ಇಲಾಖೆ, ಮೊದಲನೇ ಮಹಡಿ, ಮಾರಾಟ ಭವನ,
ಎಪಿಎಂಸಿ ಪ್ರಾಂಗಣ, ಸಾಗರ ರಸ್ತೆ, ಶಿವಮೊಗ್ಗ
ದೂರವಾಣಿ ಸಂಖ್ಯೆ : 08182-250236
ಇ-ಮೇಲ್ : ddamsmg@gmail.com, ddamsmg@rediffmail.com
ಕಾರ್ಯದರ್ಶಿಗಳು,
ಕೃಉಮಾಸ, ಎಪಿಎಂಸಿ ಪ್ರಾಂಗಣ, ಸಾಗರ ರಸ್ತೆ, ಶಿವಮೊಗ್ಗ
ದೂರವಾಣಿ ಸಂಖ್ಯೆ : 08182-250338,250323,
ಇ-ಮೇಲ್ ವಿಳಾಸ : shimogaapmc@gmail.com, shimogaapmc@rediffmail.com
ಕಾರ್ಯದರ್ಶಿಗಳು,
ಕೃಉಮಾಸ, ಈಳಿ ರಸ್ತೆ, ಸಾಗರ
ದೂರವಾಣಿ ಸಂಖ್ಯೆ : 08183-226173,
ಇ-ಮೇಲ್ ವಿಳಾಸ : apmcsagar@gmail.com
ಕಾರ್ಯದರ್ಶಿಗಳು,
ಕೃಉಮಾಸ, ಸಿ.ಎನ್. ರಸ್ತೆ, ಭದ್ರಾವತಿ
ದೂರವಾಣಿ ಸಂಖ್ಯೆ : 08282-266443
ಇ-ಮೇಲ್ ವಿಳಾಸ : apmcbhadravathi@gmail.com, apmcbhadravathi@rediffmail.com
ಕಾರ್ಯದರ್ಶಿಗಳು,
ಕೃಉಮಾಸ, ಎಸ್.ಎಸ್. ರಸ್ತೆ, ಶಿಕಾರಿಪುರ
ದೂರವಾಣಿ ಸಂಖ್ಯೆ : 08187-222261
ಇ-ಮೇಲ್ ವಿಳಾಸ : apmcshikaripura@gmail.com,
apmcshikaripura@rediffmail.com
ಕಾರ್ಯದರ್ಶಿಗಳು,
ಕೃಉಮಾಸ, ಆಗುಂಬೆ ರಸ್ತೆ, ತೀರ್ಥಹಳ್ಳಿ
ದೂರವಾಣಿ ಸಂಖ್ಯೆ : 08181-228565
ಇ-ಮೇಲ್ ವಿಳಾಸ : apmcthirthahalli@gmail.com, apmcthirthahalli@rediffmail.com
ಕಾರ್ಯದರ್ಶಿಗಳು,
ಕೃಉಮಾಸ, ಮುಖ್ಯ ಮಾರುಕಟ್ಟೆ ಪ್ರಾಂಗಣ, ಮಾವಿನಕೊಪ್ಪ, ಹೊಸನಗರ
ದೂರವಾಣಿ ಸಂಖ್ಯೆ : 08185-221043
ಇ-ಮೇಲ್ ವಿಳಾಸ : apmchosanagar@gmail.com
ಕಾರ್ಯದರ್ಶಿಗಳು,
ಕೃಉಮಾಸ, ಸಾಗರ ರಸ್ತೆ, ಸೊರಬ
ದೂರವಾಣಿ ಸಂಖ್ಯೆ : 08184-270070
ಇ-ಮೇಲ್ ವಿಳಾಸ : apmcsorab@gmail.com, apmcsorb@rediffmail.com