ಜೋಗ ಜಲಪಾತ ವೀಕ್ಷಣಾ ಸ್ಥಳ
ನಿರ್ದೇಶನವರ್ಗ ನೈಸರ್ಗಿಕ / ಮನೋಹರ ಸೌಂದರ್ಯ
ಸಿದ್ದಾಪುರ ತಾಲ್ಲೂಕು ಉತ್ತರಕನ್ನಡ ಜಿಲ್ಲೆಯಲ್ಲಿರುವ ಜೋಗ ಜಲಪಾತ ಭಾರತದಲ್ಲಿ ಎರಡನೇ ಅತ್ಯಧಿಕ ಧುಮುಕುವ ಜಲಪಾತವಾಗಿದೆ. ಇದು ಮಳೆ ಮತ್ತು ಋತುವಿನ ಮೇಲೆ ಅವಲಂಬಿತವಾಗಿರುವ ಒಂದು ವಿಭಜಿತ ಜಲಪಾತವಾಗಿದೆ. ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಜೋಗ ಜಲಪಾತ ವೀಕ್ಷಣಾ ಸ್ಥಳ ಒಂದು ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ ಮತ್ತು ಜಲಪಾತ ಪಟ್ಟಿಯಲ್ಲಿ ಪ್ರಪಂಚದಲ್ಲೇ 13 ನೇ ಸ್ಥಾನದಲ್ಲಿದೆ. ಈ ಜಲಪಾತವನ್ನು ಗೇರುಸೊಪ್ಪ ಜಲಪಾತ ಹಾಗೂ ಜೋಗದಗುಂಡಿ ಎಂದು ಕೂಡ ಕರೆಯುತ್ತಾರೆ.
ತಲುಪುವ ಬಗೆ:
ವಿಮಾನದಲ್ಲಿ
ಶಿವಮೊಗ್ಗಕ್ಕೆ ನೇರ ವಿಮಾನಗಳು ಲಭ್ಯವಿಲ್ಲ. ಹತ್ತಿರದ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಮಂಗಳೂರು. ಅಬುಧಾಬಿ, ಬಹ್ರೇನ್, ಮಸ್ಕತ್, ದೊಹಾ, ಕುವೈತ್ ಮತ್ತು ಶಾರ್ಜಾದಂತಹ ಅಂತಾರಾಷ್ಟ್ರೀಯ ದೇಶಗಳಿಗೆ ನಿಯಮಿತ ವಿಮಾನಗಳಿವೆ.
ರೈಲಿನಿಂದ
ಶಿವಮೊಗ್ಗಕ್ಕೆ ಕೆಲವು ನೇರ ರೈಲುಗಳಿವೆ. ಬೆಂಗಳೂರು-ಶಿವಮೊಗ್ಗ ರೈಲು ಎಕ್ಸ್ಪ್ರೆಸ್ ನಿಯಮಿತವಾಗಿ ಈ ಮಾರ್ಗವನ್ನು ಸಂಚರಿಸುತ್ತದೆ.
ರಸ್ತೆ ಮೂಲಕ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮತ್ತು ಇತರ ಖಾಸಗಿ ಪ್ರಯಾಣ ಸೇವೆಗಳಿಂದ ಉತ್ತಮ ಸಂಪರ್ಕ