ಪರಿಚಯ
ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಗಳು 121281.00 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದ್ದು, ಒಟ್ಟು ಸಾಗುವಳಿ ಪ್ರದೇಶದ ಶೇ.43.03 ರಷ್ಟಿದೆ. ಮಲೆನಾಡು ಪ್ರದೇಶದಲ್ಲಿ ತೋಟದ ಬೆಳೆ ಮತ್ತು ಸಾಂಬಾರು ಬೆಳೆ ಹೆಚ್ಚಾಗಿದ್ದು, ಅರೆ ಮಲೆನಾಡಿನಲ್ಲಿ ಈ ಬೆಳೆಗಳ ಜೊತೆಗೆ ಹಣ್ಣು, ತರಕಾರಿ ಬೆಳೆಗಳನ್ನು ಬೆಳೆಲಾಗುತ್ತಿದೆ. ಈ ಹಿಂದೆ ಅಡಿಕೆ ಸಾಂಪ್ರದಾಯಿಕ ಬೆಳೆಯಾಗಿ ಮಲೆನಾಡಿಗೆ ಸೀಮಿತವಾಗಿತ್ತು. ಈಗಿನ ವಿವಿಧ ತರಹದ ಬೇಡಿಕೆಗಳಿಂದಾಗಿ ಅರೆಮಲೆನಾಡಿಗೂ ವಿಸ್ತರಿಸಿದೆ. ಅಡಿಕೆ (92,181 ಹೆ) ಜೊತೆ ಇಲ್ಲಿನ ವಾತಾವರಣ ಸೂಕ್ತವಾಗಿದ್ದರಿಂದ ತೆಂಗು (6,040ಹೆ) ಕೋಕೋ ಮುಂತಾದ ತೋಟಗಾರಿಕೆ ಬೆಳೆಗಳನ್ನು ಬೆಳೆಯಲಾಗುತ್ತಿದೆ.
ಶುಂಠಿ (3,828 ಹೆ), ಕಾಳುಮೆಣಸು (4,131ಹೆ), ಏಲಕ್ಕಿ (110 ಹೆ), ಮರಸಾಂಬಾರು ದಾಲ್ಚಿನ್ನಿ, ಜಾಯಿಕಾಯಿ ಮತ್ತು ಜಾಪತ್ರೆ ಸಾಂಬಾರು ಬೆಳೆಗಳು ಜನಪ್ರಿಯವಾಗಿವೆ. ಬಾಳೆ (6,321ಹೆ), ಮಾವು (3,618 ಹೆ), ಅನಾನಸ್ (1,475 ಹೆ), ಮುಂತಾದ ಹಣ್ಣುಗಳ ಕೃಷಿ ಮಾಡಲಾಗುತ್ತಿದೆ. ಅರೆ ಮಲೆನಾಡಿನಲ್ಲಿ ಮೆಣಸಿನಕಾಯಿ ಪ್ರಮುಖ ತರಕಾರಿ ಬೆಳೆ, ಬೀನ್ಸ್, ಬದನೆ, ಟಮೋಟೋ, ಎಲೆಕೋಸು ಮತ್ತು ಸೊಪ್ಪಿನ ತರಕಾರಿಗಳು ಕಡಿಮೆ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ಔಷಧಿ ಮತ್ತು ಸುಗಂಧ ದ್ರವ್ಯ ಬೆಳೆಗಳು ವೆನಿಲ್ಲ, ಪಚೋಲಿ, ಹಿಪ್ಪಲಿ ಬೆಳೆಗಳು ಜನಪ್ರಿಯವಾಗಿವೆ. ಗುಲಾಬಿ, ಮಲ್ಲಿಗೆ, ಸೇವಂತಿಗೆ, ಕನಕಾಂಬರ ಮತ್ತು ಸುಗಂಧರಾಜ ಹೂಗಳನ್ನು ಸಹ ಬೆಳೆಯಲಾಗುತ್ತಿದೆ. ಹಸಿರು ಮತ್ತು ಪಾಲಿಹೌಸ್ ಗಳಲ್ಲಿ ಆಂಥೋರಿಯಂ ಮತ್ತು ಜರ್ಬೆರಾ ಕೃಷಿ ಇತ್ತೀಚಿನ ದಿನಗಳಲ್ಲಿ ಜನಪ್ರಿಯವಾಗುತ್ತಿದೆ.