ಮುಚ್ಚಿ

ನೈಸರ್ಗಿಕ ಸಂಪನ್ಮೂಲಗಳ ದತ್ತಾಂಶ ನಿರ್ವಹಣಾ ವ್ಯವಸ್ಥೆ

ಪರಿಚಯ

         ಒಂದು ಊರಿನಲ್ಲಿ ಶಾಲೆ, ಆಸ್ಪತ್ರೆ, ಕುಡಿಯುವ ನೀರಿನ ಸೌಲಭ್ಯಗಳನ್ನು ಸ್ಥಾಪಿಸಲು ಬೇಕಾದ ಕಾರಣ ಮತ್ತು ಮಾಹಿತಿ ಏನು?. ಒಂದು ತಾಣದಲ್ಲಿ ಕೊಳವೆ ಬಾವಿ ಕೊರೆಯಲು ಅಲ್ಲಿ ಅಂತರ್ಜಲದ ಮಟ್ಟ ಹಾಗೂ ಲಭ್ಯತೆ ಎಷ್ಟಿದೆ? ಒಂದು ಪ್ರದೇಶದಲ್ಲಿ ನೀರಿನ ಸಂಗ್ರಹಣೆಗೆ ಬೇಕಾದ ವಡ್ಡು, ಕಟ್ಟೆಗಳನ್ನು ನಿರ್ಮಿಸಲು ಬೇಕಾದ ಮಾಹಿತಿ ಮತ್ತು ಸ್ಥಳದ ಲಭ್ಯತೆ, ಮಣ್ಣಿನ ಸವಕಲು, ಗುಣಮಟ್ಟ ಇತ್ಯಾದಿ ಮತ್ತು ಆ ಪ್ರದೇಶದ ಮೇಲ್ಮೈ ಹಾಗೂ ಹಳ್ಳ ಕೊಳ್ಳಗಳ ಲಭ್ಯತೆ ಏನು?. ಒಂದು ಪ್ರದೇಶದಲ್ಲಿ ಕಾರ್ಖಾನೆಯನ್ನು ಸ್ಥಾಪಿಸಲು ಬೇಕಾಗುವ ಅಂಶಗಳು, ಸ್ಥಳದಲ್ಲಿ ಸಿಗುವ ನೈಸರ್ಗಿಕ ಸಂಪನ್ಮೂಲಗಳು, ಇದರ ಸ್ಥಾಪನೆಯಿಂದಾಗುವ ಪರಿಸರ ಮಾಲಿನ್ಯ ಏನು? ಇತರ ಹಲವಾರು ಪ್ರಶ್ನೆಗಳಿಗೆ ಉತ್ತರಿಸಲು ಲಭ್ಯವಿರುವ ಮಾಹಿತಿಗಳನ್ನು ನಾವು ಹೇಗೆ ಉಪಯೋಗಿಸುತ್ತೇವೆ ಹಾಗೂ ಅವು ಎಲ್ಲಿ ದೊರೆಯುತ್ತವೆ, ಯಾವುದೇ ಕ್ಷಣದಲ್ಲಿ ಎಷ್ಟೆಲ್ಲಾ ಆಕರಗಳಿಂದ ಮಾಹಿತಿ ಗಳನ್ನು ಸಂಗ್ರಹ ಮಾಡುತ್ತೇವೆ ಹಾಗೂ ನವೀಕರಿಸುತ್ತೇವೆ.  ನಮಗೆ ನಿರ್ಣಯ ಕೈಗೊಳ್ಳಲು ವೈಜ್ಞಾನಿಕವಾಗಿ ಅನುಕೂಲವಾದ ಮಾಹಿತಿಗಳನ್ನು ಸಂಗ್ರಹ ಮಾಡುವ ಮತ್ತು ಕಾಲ ಕಾಲಕ್ಕೆ ನವೀಕರಿಸುವುದರಲ್ಲಿ ಅಡಕವಾಗಿರುತ್ತದೆ. ಇದಕ್ಕಾಗಿ 1982 ರಲ್ಲಿ ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ನೈಸರ್ಗಿಕ ಸಂಪನ್ಮೂಲಗಳ ದತ್ತಾಂಶ ನಿರ್ವಹಣಾ ವ್ಯವಸ್ಥೆ (NRDMS) – ಎಂಬ ಕಾರ್ಯಕ್ರಮವನ್ನು ಆರಂಭಿಸಿತು. ಕಂಪ್ಯೂಟರ್ ಕಾರ್ಯಶೈಲಿಗೆ ಹೊಂದಿಕೊಳ್ಳುವಂತಹ ದತ್ತಾಂಶಗಳು ಹಾಗೂ ನಕ್ಷೆಗಳನ್ನು ತಯಾರಿಸುವ ಮತ್ತು ವಿಶ್ಲೇಶಿಸುವ ವಿಧಾನಗಳನ್ನು ರೂಪಿಸುವುದು ಅದರ ಉದ್ದೇಶವಾಗಿತ್ತು. ಭಾರತ ಸಂವಿಧಾನದ 73 ಮತ್ತು 74ನೇ ತಿದ್ದುಪಡಿ ಅನ್ವಯ ಜಾರಿಯಾದ ಜಿಲ್ಲಾ ಪಂಚಾಯತ್ ಹಾಗು ತಾಲ್ಲೂಕು ಮಟ್ಟದಲ್ಲಿ ಯೋಜನೆಗೆ ಬೇಕಾದ ವೈಜ್ಞಾನಿಕವಾಗಿ ವಿಶ್ಲೇಶಿತವಾದ ಮಾಹಿತಿಗಳನ್ನು ಅವಶ್ಯಕತೆಗೆ ತಕ್ಕಂತೆ ಪೂರೈಸುವುದು ಇದರ ಮಹತ್ತರವಾದ ಜವಾಬ್ದಾರಿಯಾಗಿದೆ.

      ಈ ಕಾರ್ಯಕ್ರಮದ  ಫಲವಾಗಿ ಸಮಗ್ರ ಮಾಹಿತಿಯನ್ನೊಳಗೊಂಡ ನಕ್ಷೆಗಳು ಒಂದೇ ಸೂರಿನಡಿಯಲ್ಲಿ ಲಭ್ಯವಾಗುವುದು, ಉಪಗ್ರಹಗಳ ಸಹಾಯದಿಂದ ದೊರೆಯುವ ದೂರಸಂವೇದನೆ, ಭೂ ಸರ್ವೇಕ್ಷಣೆ ಇಲಾಖೆ ಮತ್ತಿತರ ಸಂಸ್ಥೆಗಳಿಂದ ದೊರೆಯುವ ನಕ್ಷೆಗಳು ಹಾಗೂ ದತ್ತಾಂಶಗಳನ್ನು ಕ್ರೋಡಿಕರಿಸುವುದು ಹಾಗೂ ಭೌಗೋಳಿಕ ಮಾಹಿತಿ ವ್ಯವಸ್ಥೆ (GIS) ಮೂಲಕ ನಕ್ಷೆಗಳನ್ನು ಕಂಪ್ಯೂಟರ್ ನಲ್ಲಿ ಗಣಕೀಕರಿಸಿ ದತ್ತಾಂಶಗಳನ್ನು ನಕ್ಷೆಗಳೊಂದಿಗೆ ಜೋಡಿಸಿ ವಿಶ್ಲೇಷಣಾ ಮಾಹಿತಿಗಳನ್ನು ಒದಗಿಸುವುದು. ಜಿಲ್ಲೆಯ ಸಮಗ್ರ ಮಾಹಿತಿ ಯನ್ನು ಕಂಪ್ಯೂಟರ್ ತೆರೆಯಲ್ಲಿ ಜಿಲ್ಲಾ ಮಟ್ಟದಿಂದ ಗ್ರಾಮ ಮಟ್ಟದವರೆಗೂ ವರ್ಣಮಯವಾಗಿ ಬಿಂಬಿಸಲು ಸಾಧ್ಯವಾಯಿತು. ರಾಷ್ಟ್ರಮಟ್ಟದ  ಹಾಗೂ  ರಾಜ್ಯಮಟ್ಟದಲ್ಲಿ ತಯಾರಾಗುವ ಯೋಜನೆಗಳು ಜಿಲ್ಲಾ ಮತ್ತು ತಾಲ್ಲೂಕ್ ಮಟ್ಟದಲ್ಲಿ ಸ್ಥಳೀಯವಾಗಿ ರೂಪಿಸಲು ಅನುಕೂಲ ಮಾಡಿಕೊಡಲಾಗುವುದು.  ಸಾಂಪ್ರದಾಯಕವಾಗಿ ತೆಗೆದುಕೊಳ್ಳುತ್ತಿದ್ದ ತೀರ್ಮಾನಗಳನ್ನು ಮಾಹಿತಿ ಆದಾರದ ಮೇಲೆ ವೈಜ್ಞಾನಿಕವಾಗಿ ಬೇರೆ ಬೇರೆ ಭವಿಷ್ಯದ ನೋಟಗಳಿಂದ ತೆಗೆದುಕೊಳ್ಳುವುದು ಸಾದ್ಯವಾಗುತ್ತದೆ.

shimoga_District_kan

ಕರ್ನಾಟಕ ರಾಜ್ಯದಲ್ಲಿ ಈ ಕಾರ್ಯಕ್ರಮದದ ಅನುಷ್ಟಾನದ ಜವಬ್ದಾರಿಯನ್ನು ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರವಿದ್ಯಾ ಮಂಡಳಿಯು (KSCST) ಹೊತ್ತಿದೆ. ಶಿವಮೊಗ್ಗ ಜಿಲ್ಲೆಯಲ್ಲಿ NRDMS ಕೇಂದ್ರವನ್ನು  1995 ನೇ ಜೂನ್ 1 ರಂದು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಸ್ಥಾಪಿಸಲಾಯಿತು. 2002-03 ನೇ ಸಾಲಿನಲ್ಲಿ ಕರ್ನಾಟಕ ಸರ್ಕಾರದ ಆದೇಶದ ಮೇರೆಗೆ ಈ ಕೇಂದ್ರದ ನಿರ್ವಹಣೆಯನ್ನು ಜಿಲ್ಲಾ ಪಂಚಾಯತ್‍ಗೆ ವರ್ಗಾವಣೆ ಮಾಡಿದ ಕಾರಣ ಜಿಲ್ಲಾ ಪಂಚಾಯತ್ ಕಛೇರಿ ಆವರಣಕ್ಕೆ ಸ್ಥಳಾಂತರಿಸಿ ಕಾರ್ಯ ನಿರ್ವಹಿಸುತ್ತಿದೆ. ಪ್ರಸ್ತುತ NRDMS ಕೇಂದ್ರವು ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರವಿ‍ದ್ಯಾ ಮಂಡಳಿಯ ತಾಂತ್ರಿಕ ಸಲಹೆಗಳಿಂದ ಕಾರ್ಯ ನಿರ್ವಹಿಸುತ್ತಿದೆ.

ಮುಖ್ಯ ಉದ್ದೇಶಗಳು :  

  1. ನಿಯತಕಾಲಿಕವಾಗಿ ಜಿಲ್ಲಾ ಸಂಪನ್ಮೂಲ ವಿವರಗಳನ್ನು ಸಿದ್ದಪಡಿಸುವುದು.
  2. ನೈಸರ್ಗಿಕ ಸಂಪನ್ಮೂಲ ನಿರ್ವಹಣೆಗೆ ಸಂಬಂದಿಸಿದಂತೆ ವಿಶ್ಲೇಶಿತ ಮಾಹಿತಿಯನ್ನು ಜಿಲ್ಲಾಢಳಿತ, ಜಿಲ್ಲಾ ಪಂಚಾಯತಿ ಮತ್ತಿತರ ಅಧೀನ ಇಲಾಖೇಗೆ ಒದಗಿಸುವುದು.
  3. ಭೌಗೋಳಿಕ ಮಾಹಿತಿ ವ್ಯವಸ್ಥೆ (GIS) ಮತ್ತು ದೂರ ಸಂವೇದನೆ (REMOTE SENSING) ತಂತ್ರಜ್ಞಾನಗಳನ್ನು ಉಪಯೋಗಿಸಿ ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆ ಬಗ್ಗೆ ಮಾಹಿತಿ ಹಾಗೂ ತರಬೇತಿ ನೀಡುವುದು.

ಶಿವಮೊಗ್ಗ  ಜಿಲ್ಲಾ  ಕೇಂದ್ರದ  ಮುಖ್ಯ ಚಟುವಟಿಕೆಗಳು :

  1. ಜಿಲ್ಲೆಯ ಜಿಲ್ಲಾ, ತಾಲ್ಲೂಕ್, ಗ್ರಾಮ ಗಡಿಗಳನ್ನೊಳಗೊಂಡ ರಸ್ತೆಗಳು, ಅರಣ್ಯ, ಭೂವಿಜ್ಞಾನ, ಭೂಜಲ ಹಾಗೂ ಅಂತರ್ಜಲ , ಮಣ್ಣಿನ ವಿವರ, ಹಳ್ಳ ಕೊಳ್ಳ, ನದಿ, ಕೆರೆಗಳು, ಭೂಬಳಕೆ, ಮೇಲ್ಮೆ ಇಳಿಜಾರು ಹಾಗೂ ಇತರೆ ವಿವರಗಳನ್ನು ತೋರಿಸುವ ನಕ್ಷೆಗಳನ್ನು ತಯಾರಿಸಿದೆ.
  2. ಜಿಲ್ಲೆಯಲ್ಲಿ ನಡೆಯುವ ಸಾರ್ವತ್ರಿಕ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಬೇಕಾಗುವ ವಿವಿದ ಕ್ಷೇತ್ರಗಳ ಗಡಿ, ಮತಗಟ್ಟೆಗಳ ವಿವರ ಹಾಗೂ ಮತಗಟ್ಟೆಗೆ ಸಾಗುವ ಮಾರ್ಗಗಳ ನಕ್ಷೆಗಳನ್ನು ತಯಾರಿಸಿ ಜಿಲ್ಲಾಡಳಿತಕ್ಕೆ ಒದಗಿಸಿ ನೆರವಾಗುತ್ತಿದೆ.
  3. ಕೇಂದ್ರವು ಭೌಗೋಳಿಕ ಮಾಹಿತಿ ವ್ಯವಸ್ಥೆ (GIS) ಮತ್ತು ದೂರ ಸಂವೇದನೆ (REMOTE SENSING) ತಂತ್ರಜ್ಞಾನಗಳ ಮಹತ್ವದ ಅರಿವು ಮೂಡಿಸಲು ಜಿಲ್ಲೆಯ ಜಿಲ್ಲಾ ಮಟ್ಟದ ಹಾಗೂ ತಾಲ್ಲೂಕ್ ಮಟ್ಟದ ಅಧಿಕಾರಿಗಳಿಗೆ ತಾಂತ್ರಿಕ ಕಾರ್ಯಗಾರಗಳನ್ನು ಆಯೋಜನೆ ಮಾಡಲಾಗುತ್ತಿದೆ.
  4. ಜಿಲ್ಲಾ ಜಲಾನಯನ ಅಭಿವೃದ್ದಿ ಯೋಜನೆಗೆ ಬೇಕಾಗುವ ಕಿರು ಜಲಾನಯನ ಪ್ರದೇಶಗಳ ಗಡಿ ನಕ್ಷೆ, ಹಳ್ಳಕೊಳ್ಳಗಳು, ಕೆರೆಗಳು, ಬಂಜರು ಭೂಮಿ ಭೂ ಬಳಕೆ, ಮಣ್ಣು, ಮೇಲ್ಮೈ ಇಳಿಜಾರು ಹಾಗೂ ಇತರೆ ವಿವರಗಳನ್ನೊಳಗೊಂಡ ನಕ್ಷೆಗಳನ್ನು ತಯಾರಿಸಿ ಇಲಾಖೆಯ ಅಧಿಕಾರಿಗಳಿಗೆ ಸಹಕರಿಸುತ್ತಿದೆ.
  5. ಜಿಲ್ಲಾ ಆಡಳಿತದೊಂದಿಗೆ ಸಹಕರಿಸಿ ಜಿಲ್ಲೆಯ ನೈಸರ್ಗಿಕ ವಿಕೋಪ ನಿರ್ವಹಣೆಗೆ ಬೇಕಾಗುವ ಎಲ್ಲಾ ವಿವರಗಳನ್ನು ತೋರಿಸುವ ನಕ್ಷೆಗಳನ್ನು ತಯಾರಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲು ಸಹಕಾರಿಯಾಗಿರುತ್ತದೆ.
  6. ಜಿಲ್ಲೆಯ ಸರ್ಕಾರಿ ಶಾಲೆಗಳು ಹಾಗೂ ಅಂಗನವಾಡಿಗಳಲ್ಲಿ ಕುಡಿಯುವ ನೀರು ಇತ್ಯಾದಿ ಇರುವ ಬಗ್ಗೆ ದತ್ತಾಂಶ ಕ್ರೋಡಿಕರಿಸಿ ನಕ್ಷೆಗಳನ್ನು ತಯಾರಿಸಿದೆ.
  7. ಆರೋಗ್ಯ ಇಲಾಖೆ ಹಾಗೂ ಇತರೆ ಎನ್.ಜಿ.ಓ ಗಳೊಡನೆ ಕೈಜೋಡಿಸಿ ಪ್ರಸ್ತುತ ವರ್ಷದಲ್ಲಿ ಏಡ್ಸ್ ನಿಂದ ಬಳಲುತ್ತಿರುವ ರೋಗಿಗಳ ಅಂಕಿ ಅಂಶಗಳನ್ನು ಸಂಗ್ರಯಿಸಿ , ಕ್ರೋಡಿಕರಿಸಿ ನಕ್ಷೆಗಳನ್ನು ತಯಾರಿಸಿ ಏಡ್ಸ್ ನಿಯಂತ್ರಣ ಕಾರ್ಯಕ್ರಮದಲ್ಲಿ ನೆರವಾಗುತ್ತಿದೆ.
  8. ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ, ಕರ್ನಾಟಕ ಸರ್ಕಾರ ಇವರ ಸೂಚನೆಯ ಮೇರೆಗೆ ಜಿಯೋಸ್ಪೇಶಿಯಲ್‌ ತಂತ್ರಜ್ಞಾನವನ್ನು ಬಳಸಿಕೊಂಡು ಜಿಲ್ಲಾ ಪಂಚಾಯತಿಯ ಎಲ್ಲಾ ಅಧೀನ ಇಲಾಖೆಗಳ  2019-20 ನೇ ಸಾಲಿನ ಕ್ರಿಯಾ ಯೋಜನೆಯನ್ನು ಹಾಗೂ 2020-21ನೇ ಸಾಲಿನ ಆಯ್ದ ಇಲಾಖೆಯ ಕರಡು ಕ್ರಿಯಾ ಯೋಜನೆ ಮಾಹಿತಿಯನ್ನು  Spatial Mapping ತಯಾರಿಸಿದೆ.

ಪ್ರಸ್ತುತ ಶಿವಮೊಗ್ಗ ಜಿಲ್ಲಾ ಎನ್.ಆರ್.ಡಿ.ಎಂ.ಎಸ್. ಕೇಂದ್ರವು ಜಿಲ್ಲಾ ಮಟ್ಟದಿಂದ ಗ್ರಾಮ ಮಟ್ಟದ ವರೆಗೂ ಸಮರ್ಪಕವಾಗಿ ಕಾರ್ಯನಿರ್ವಹಿಸಿ ರಾಜ್ಯಮಟ್ಟದಲ್ಲಿ ಅತ್ಯುತ್ತಮ ಜಿಲ್ಲಾಕೇಂದ್ರ ಎಂದು ಹೆಸರುಪಡೆದಿರುವುದು ಅಭಿನಂದನಾರ್ಹ.

ಸಂಪರ್ಕ ವಿವರ

ಶಂಕರ್.‌ ಪಿ.
ತಾಂತ್ರಿಕ ಅಧಿಕಾರಿಗಳು,
ಜಿಲ್ಲಾ NRDMS ಕೇಂದ್ರ, ಯೋಜನಾ ಶಾಖೆ,
ಜಿಲ್ಲಾ ಪಂಚಾಯತ್ ಕಛೇರಿ, ಕುವೆಂಪು ರಸ್ತೆ, ಶಿವಮೊಗ್ಗ – 577201

ದೂರವಾಣಿ : 08182-223906 / 9980064163
ಈ-ಮೇಲ್ : nrdms.shimoga@gmail.com